Advertisement

ಕೆಎಸ್ಸಾರ್ಟಿಸಿಯಿಂದ “ಮೊಬೈಲ್‌ ಸ್ಯಾನಿಟೈಸರ್‌ ಬಸ್‌’

11:52 PM Apr 19, 2020 | Sriram |

ಮಂಗಳೂರು: ಕೋವಿಡ್ 19 ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಕೆಎಸ್ಸಾರ್ಟಿಸಿ ವಿನೂತನ ಹೆಜ್ಜೆ ಇಡುತ್ತಿದ್ದು, ಕರಾವಳಿಯಲ್ಲಿ “ಸಾರಿಗೆ ಸಂಜೀವಿನಿ’ ಎಂಬ ಹೆಸರಿನ ಮೊಬೈಲ್‌ ಸ್ಯಾನಿ ಟೈಸರ್‌ ಬಸ್‌ ಅನ್ನು ಎಪ್ರಿಲ್‌ ಅಂತ್ಯಕ್ಕೆ ಅಭಿವೃದ್ಧಿಗೊಳಿಸಲು ತೀರ್ಮಾನಿಸಿದೆ.

Advertisement

ಮೊದಲ ಹಂತದಲ್ಲಿ ಈ ರೀತಿಯ ಬಸ್‌ ಬೆಂಗಳೂರು ಮತ್ತು ಮೈಸೂರು ವಿಭಾಗಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ನಿಯಂತ್ರಣದಲ್ಲಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರು, ಪುತ್ತೂರು ವಿಭಾಗಗಳಲ್ಲಿ ಈ ಕ್ರಮಕ್ಕೆ ನಿಗಮ ಮುಂದಾಗಿದೆ.

ರಾಸಾಯನಿಕವನ್ನು ಯಾವ ಪ್ರಮಾಣದಲ್ಲಿ ಬಳಕೆ ಮಾಡಬೇಕು ಎಂಬ ಕುರಿತಂತೆ ಮಂಗಳೂರು ನಿಗಮ ಮಟ್ಟದಲ್ಲಿ ಅಧಿಕಾರಿಗಳ
ಜತೆಗೆ ಚರ್ಚೆ ನಡೆಯುತ್ತಿದ್ದು, ಸದ್ಯದಲ್ಲೇ ಅಂತಿಮವಾಗಲಿದೆ.ಹಳೆಯ ಆದರೆ ಸುಸ್ಥಿತಿಯಲ್ಲಿರುವ ಬಸ್‌ಗಳನ್ನು ಮೊಬೈಲ್‌ ಸ್ಯಾನಿಟೈಸರ್‌ ಆಗಿ ಪರಿವರ್ತಿಸಲಾಗುತ್ತದೆ. ಬಸ್ಸಿನ ಆಸನಗಳನ್ನೆಲ್ಲ ತೆಗೆದುಸುರಂಗದ ರೀತಿ ಪರಿವರ್ತನೆ ಮಾಡಲಾಗುತ್ತದೆ. ಒಂದು ಬಸ್‌ ಪರಿವರ್ತನೆಗೆ ಸುಮಾರು 20 ಸಾವಿರ ರೂ. ಖರ್ಚು ಮಾಡಿ ವೈರಾಣು ನಿರೋಧಕ ದ್ರಾವಣ ಸಿಂಪಡಣೆ ಯಂತ್ರ ಅಳವಡಿಸಲಾಗುತ್ತದೆ. ಈ ಬಸ್‌ನ ಮೂಲಕ ಒಂದು ಸಲ ಸಾಗಿ ಬಂದರೆ ನಮ್ಮ ದೇಹಕ್ಕೆವೈರಾಣು ನಿರೋಧಕ ದ್ರಾವಣ ಸಿಂಪಡಣೆಯಾಗುತ್ತದೆ. ಮೊದಲ ಹಂತದಲ್ಲಿ ಅಗತ್ಯ ಸೇವೆ ಸಿಬಂದಿ ಅನುಕೂಲಕ್ಕೆ ಇ ದನ್ನು ಕಾರ್ಯಾಚರಿಸಲಾಗುತ್ತದೆ.

ಕೆಎಸ್ಸಾರ್ಟಿಸಿ ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ಬಸ್‌ಗಳಲ್ಲಿಯೇ ಕೋವಿಡ್ 19 ಮೊಬೈಲ್‌ ಟೆಸ್ಟಿಂಗ್‌ ಲ್ಯಾಬ್‌ ಮಾಡುವ ಕುರಿತಂತೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿಯ ಒಪ್ಪಿಗೆ ಲಭಿಸಿದರೆ ಕೋವಿಡ್ 19 ಸೋಂಕು ತಪಾಸಣೆಯ ಮೊಬೈಲ್‌ ಪ್ರಯೋಗಾಲಯ ಸದ್ಯದಲ್ಲಿಯೇ ಸ್ಥಾಪನೆ ಸಾಧ್ಯವಾಗಲಿದೆ.

Advertisement

ಮಾಸಾಂತ್ಯಕ್ಕೆ ಸಿದ್ಧ
ಕೋವಿಡ್ 19 ಸೋಂಕು ಹರಡುವುದು ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಉದ್ದೇಶದಿಂದ ಕೆಎಸ್ಸಾರ್ಟಿಸಿ “ಸಾರಿಗೆ ಸಂಜೀವಿನಿ’ ಎಂಬ ಹೆಸರಿನ ಮೊಬೈಲ್‌ ಸ್ಯಾನಿಟೈಸರ್‌ ಬಸ್‌ ಅಭಿವೃದ್ಧಿಪಡಿಸಲು ಮುಂದಾಗಿದೆ. ಎಪ್ರಿಲ್‌ ಅಂತ್ಯಕ್ಕೆ ಮಂಗಳೂರು ವಿಭಾಗದಲ್ಲಿ ಸ್ಯಾನಿಟೈಸರ್‌ ಬಸ್‌ ಕಾರ್ಯಚರಣೆಗೆ ಸಿದ್ಧವಾಗಲಿದೆ.
– ಎಸ್‌.ಎನ್‌. ಅರುಣ್‌, ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next