Advertisement

ಮೊಬೈಲ್‌ ದರೋಡೆ: ಚುರುಕುಗೊಂಡ ತನಿಖೆ

03:00 PM Feb 10, 2022 | Team Udayavani |

ಮುಳಬಾಗಿಲು: ತಾಲೂಕಿನ ರಾಷ್ಟ್ರೀಯ ಹೆದ್ದಾರಿ ದೇವರಾಯಸಮುದ್ರ ಗೇಟ್‌ ಬಳಿ ಕಳೆದ 2021ರ ಆಗಸ್ಟ್‌ನಲ್ಲಿ ನಡೆದಿದ್ದ 6 ಕೋಟಿ ರೂ.ಮೌಲ್ಯದ ಎಂಐ ಮೊಬೈಲ್‌ಗ‌ಳ ದರೋಡೆ ಪ್ರಕರಣದ 2ನೇ ಹಂತದ ತನಿಖೆ ಸಂಬಂಧಮುಳಬಾಗಿಲು ಪೊಲೀಸರು ಮಧ್ಯ ಪ್ರದೇಶದಲ್ಲಿ ಮೂವರನ್ನು ವಶಕ್ಕೆ ಪಡೆದಿದ್ದಾರೆ.

Advertisement

ಮಧ್ಯಪ್ರದೇಶದ ಸಂಜು (35), ಜ್ಞಾನ್ಸಿಂಗ್‌ (34), ಕುಂದನ್‌ (33) ಬಂಧಿತರು. ರಾತ್ರಿ ತಮಿಳುನಾಡಿನ ಚೆನ್ನೈನಲ್ಲಿರುವ ಎಂ.ಐ ಕಂಪನಿಯಿಂದ 6 ಕೋಟಿ ಮೌಲ್ಯದ ಎಂ.ಐ ಮೊಬೈಲ್‌ಗ‌ಳನ್ನುಕೆ.ಎ.07 ಎಡಿ.6824 ಕಂಟೈನರ್‌ನಲ್ಲಿ ತುಂಬಿಕೊಂಡುಬೆಂಗಳೂರಿಗೆ ಸಾಗಾಣಿಕೆ ಮಾಡಲಾಗುತ್ತಿತ್ತು. ಅಂದು ರಾತ್ರಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ದೇವರಾಯಸಮುದ್ರ ಗೇಟ್‌ನಲ್ಲಿ ಒಂದು ಲಾರಿ ಮತ್ತು ಕಾರಿನಲ್ಲಿ ಬಂದ 10 ಜನರ ದರೋಡೆಕೋರರು, ಕಂಟೈನರ್‌ ಅಡ್ಡಗಟ್ಟಿ ಅದರಲ್ಲಿದ್ದ ಚಾಲಕಹಾಸನ ಮೂಲದ ಸುರೇಶ್‌ನನ್ನು ಥಳಿಸಿ ನಿರ್ಜನ ಪ್ರದೇಶಕ್ಕೆಕರೆದೊಯ್ದು ದೇವರಾಯಸಮುದ್ರ ಜಗನ್ನಾಥ್‌ ಎಂಬವರ ಜಮೀನಿನಲ್ಲಿ ಚಾಲಕನ ಕೈ ಕಾಲು ಕಟ್ಟಿ ಹಾಕಿ ಮೊಬೈಲ್‌ ಕಂಟೈನರ್‌ ಕದ್ದೊಯ್ದಿದ್ದರು.

ಕೋಲಾರ ಹಾಲು ಒಕ್ಕೂಟದ ಸಮೀಪದ ಹೆದ್ದಾರಿಯಲ್ಲಿಯೇ ವಾಹನ ನಿಲ್ಲಿಸಿ ಅದರಲ್ಲಿದ್ದ 6ಕೋಟಿ ಮೌಲ್ಯದ ಮೊಬೈಲ್‌ ಲಾರಿಗೆ ತುಂಬಿಕೊಂಡು ಪರಾರಿಯಾಗಿದ್ದರು. ಮುಂಜಾನೆ 8.30ರ ಸಮಯದಲ್ಲಿ ಸದರಿಜಮೀನಿನಲ್ಲಿ ಕೆಲಸ ಮಾಡಲು ಬಂದ ಕೆಲಸಗಾರರು, ಕೈಕಾಲುಕಟ್ಟಿ ಹಾಕಿದ್ದ ವ್ಯಕ್ತಿಯನ್ನು ಕಂಡು ಹಗ್ಗ ಬಿಡಿಸಿದ್ದಾರೆ.

ನಂತರ ಸದರಿ ಚಾಲಕ ಗ್ರಾಮಾಂತರ ಠಾಣೆಗೆ ತೆರಳಿ ದೂರು ನೀಡಿದ್ದನು. ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್‌ಪಿ ಗಿರಿ, ಸಿಪಿಐ ಗೋಪಾಲ್‌ನಾಯಕ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತನಿಖೆಕೈಗೊಂಡು ಶ್ವಾನದಳ, ಬೆರಳಚ್ಚು ತಜ್ಞರನ್ನು ಕರೆಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಎಸ್‌.ಪಿ.ಕಿಶೋರ್‌ಬಾಬು ಸ್ಥಳಕ್ಕೆಭೇಟಿ ನೀಡಿ ಪರಿಶೀಲಿಸಿದರು. ಗ್ರಾಮಾಂತರ ಠಾಣೆಯಲ್ಲಿಪ್ರಕರಣ ದಾಖಲಾಗಿತ್ತು.

ಅದರಂತೆ ತನಿಖೆ ಕೈಗೊಂಡಿದ್ದ ಪೊಲೀಸರು ಕಳೆದ ನವೆಂಬರ್‌ನಲ್ಲಿ ಮಧ್ಯ ಪ್ರದೇಶದಲ್ಲಿ ವಿಷ್ಣುಪತ್ತಾರ್‌ (42), ಮುಖೇಶ್‌ (42), ವಿಜಯ್‌ರಾಜೇಂದ್ರಶೆಟ್ಟಿ (31), ರಿತೇಷ್‌ (30) ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟಿದ್ದರಲ್ಲದೇ ಸಿಪಿಐ ಲಕ್ಷ್ಮೀಕಾಂತಯ್ಯ ನೇತೃತ್ವದಲ್ಲಿ ತನಿಖಾ ತಂಡ ಉಳಿದವರ ಬಂಧನಕ್ಕೆ ಬಲೆ ಬೀಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next