Advertisement
ಹೌದು! ಸದ್ಯ ನಮ್ಮ ಸುತ್ತಲಿನ ಯಾವ ನಗರವನ್ನೂ ತೆಗೆದು ಕೊಂಡರೂ ಅಲ್ಲಿ ಟ್ರಾಫಿಕ್ ಸಮಸ್ಯೆ ಮುಖ್ಯವಾಗಿ ಕಂಡು ಬರುತ್ತದೆ. ರಸ್ತೆ ಸಂಚಾರದ ಈ ಸಮಸ್ಯೆಗೆ ಪರಿಹಾರ ಕಾಣಲು ಹಲವಾರು ರೀತಿಯ ನೂತನ ಮಾದರಿಯ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದೆನಿಸುತ್ತದೆ. ಅವುಗಳಲ್ಲಿ ರಸ್ತೆ ಬದಲಾವಣೆ , ಏಕ ಮುಖ ಸಂಚಾರ, ರಸ್ತೆಗಳಲ್ಲಿ ಘನ ವಾಹನಗಳಿಗೆ ನಿರ್ಬಂಧ, ಯೂ ಟರ್ನ್ ಅಂತರ ಕಡಿಮೆಗೊಳಿಸುವುದು. ಈ ರೀತಿಯ ಹತ್ತು ಹಲವು ಯೋಜನೆ ಗಳನ್ನು ಮೂಲಕ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಾಣುತ್ತೇವೆ. ಆದರೆ ಜನ ಸಂದಣಿ.?
ನಗರದಲ್ಲಿ ಮೊಬೈಲ್ ಬಳಕೆದಾರರಿಂದ ಪಾದಚಾರಿ ರಸ್ತೆಗಳಲ್ಲಿ ಸಂಚರಿಸುವ ಪಾದಚಾರಿಗಳಿಗೆ ತೊಂದರೆ ಆಗಬಾರ ದೆಂದು ಇಲ್ಲಿನ ಕೆಲವು ನಗರಗಳು ಕಾಲುದಾರಿಗಳು ಮತ್ತು ಪಾದಚಾರಿ ವಲಯಗಳಲ್ಲಿ ಮೀಸಲಾದ ಸ್ಮಾರ್ಟ್ ಫೋನ್ ಲೈನ್‌ಗಳನ್ನು ಸ್ಥಾಪಿಸಲು ಪ್ರಾರಂಭಿಸಿವೆ. ಬೆಲ್ಜಿಯಂನ ಆಂಟೆÌಪ್ನì ಮಧ್ಯಭಾಗದಲ್ಲಿ ಇದನ್ನು ಪ್ರಯೋಗಕ್ಕೆ ಒಳಪಡಿಸಲಾಗಿದೆ. ಇದರಿಂದಾಗಿ ಮೊಬೈಲ್‌ನಲ್ಲಿ ತಮ್ಮದೇ ವ್ಯವಹಾರದಲ್ಲಿ ನಿರತರಾಗಿರುವವರಿಗೆ ಈ ಸ್ಮಾರ್ಟ್ ಜಾಡುಗಳು ಉಪಕಾರಿಯಾಗಿದೆ. ಕೇವಲ ಮೊಬೈಲ್ ಉಪಯೋಗಿಸುವ ದಾರಿಗಳ ಹೊರತಾಗಿ ಕೆಲವೊಂದು ಪಾದಚಾರಿ ರಸ್ತೆಗಳಲ್ಲಿ ಮೊಬೈಲ್ ನಿರ್ಬಂಧ ಎನ್ನುವ ಎಚ್ಚರಿಕೆ ಫಲಕಗಳು ರಸ್ತೆಗಳಲ್ಲಿವೆ. ಚೀನಾದ ಮಹಾನಗರದ ಉದ್ಯಾನಗಳಲ್ಲಿ ಒಂದಾದ ಚೊಂಗಿಗ್‌ನಲ್ಲಿ ಸ್ಮಾರ್ಟ್ ಫೋನ್ ಬಳಕೆದಾರರಿಗೆ 50 ಮೀಟರ್ ಲೈನ್‌ನ್ನು ನಿರ್ಮಿಸಿದೆ. ಇದೇ ರೀತಿಯ ಮೊದಲ ಮಾರ್ಗವನ್ನು ವಾಷಿಂಗ್ಟನ್, ಡಿ.ಸಿ.ನಲ್ಲಿ ಕಾಣಬಹುದು, ಇದು 2014 ರ ಬೇಸಗೆಯಲ್ಲಿ ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಲೈನ್ ಅನ್ನು ಪರಿಚಯಿಸಿತು.
Related Articles
ಜನದಟ್ಟಣೆಯನ್ನು ಎದುರಿಸುತ್ತಿರುವ ನಮ್ಮ ಮಂಗಳೂರು ನಗರ ಈ ರೀತಿಯ ಪ್ರಯೋಗಕ್ಕೆ ಒಗ್ಗಿ ಕೊಳ್ಳಬಹುದು. ಅಥವಾ ತಮ್ಮ ನಗರವನ್ನು ವಿನೂತನವಾಗಿ ಹೊರಗಿನವರಿಗೆ ಪರಿಚಯಿಸಲು ಇದೊಂದು ಉತ್ತಮ ವೇದಿಕೆಯಾಗಿದೆ. ಈ ಮೂಲಕವಾದರೂ ಮಂಗಳೂರಿನ ಜನದಟ್ಟನೆ ಹಾಗೂ ಮೊಬೈಲ್ ಬಳಕೆದಾರರಿಗೆ ನೂತನ ಮಾರ್ಗವನ್ನು ಕಂಡುಕೊಳ್ಳಬಹುದಾಗಿದೆ. ಈ ಬಗ್ಗೆ ಆಡಳಿತ ವ್ಯವಸ್ಥೆಯೂ ಗಮನ ಹರಿಸಬೇಕಾದ ಆವಶ್ಯಕತೆ ಹೆಚ್ಚಿದೆ.
Advertisement
– ವಿಶ್ವಾಸ್ ಅಡ್ಯಾರ್