Advertisement
ಬೇಲಾಡಿಯಲ್ಲಿ ಸುಮಾರು 200ಕ್ಕೂ ಅಧಿಕ ಮನೆಗಳಿದ್ದು ಗ್ರಾಮದ ಉದ್ದಗಲಕ್ಕೂ ಯಾವುದೇ ಖಾಸಗಿ ಮೊಬೈಲ್ ಸೇವಾ ಕಂಪನಿಗಳ ಸಂಪರ್ಕ ಸಿಗದೆ ಗ್ರಾಮಸ್ಥರು ಹೊರಜಗತ್ತಿನೊಂದಿಗೆ ಸಂಪರ್ಕಕ್ಕೆ ಸಂಕಷ್ಟ ಪಡುವಂತಾಗಿದೆ ನೆಟ್‌ವರ್ಕ್ ಸಮಸ್ಯೆಯಿಂದ ಪಡಿತರ ವಿತರಣೆಯಲ್ಲೂ ತೊಂದರೆಯುಂಟಾಗಿ ಗ್ರಾಮಸ್ಥರು ಪಡಿತರ ಕೇಂದ್ರಗಳಿಗೆ ಅಲೆದಾಡುವಂತಾಗಿದೆ.
ಅಂತರ್ಜಲದ ಸಮಪರ್ಕವಿಲ್ಲದೆ ಮಕ್ಕಳ ವಿದ್ಯಾಭ್ಯಾಸಕ್ಕೆ, ಹೊರದೇಶಗಳಲ್ಲಿರುವ ಕುಟುಂಬ ದವರ ಸಂಪರ್ಕಕ್ಕೆ ತೀವ್ರ ತೊಂದರೆಯಾಗುತ್ತಿದೆ. ಸಮಸ್ಯೆ ಕುರಿತು ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಜಯ ಕೋಟ್ಯಾನ್ ಸರಕಾರ ಸ್ವಾಮ್ಯದ ಬಿಎಸ್ಸೆನ್ನೆಲ್ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿ ಗಮನ ಸೆಳೆದಿದ್ದರೂ ಯಾವುದೇ ಪ್ರತಿಕ್ರಿಯೆ ಲಭಿಸಿಲ್ಲ. ಪ್ರತಿಗ್ರಾಮ ಸಭೆಯಲ್ಲೂ ಸಮಸ್ಯೆ ಕುರಿತು ಗ್ರಾಮಸ್ಥರು ಮನವಿ ಸಲ್ಲಿಸಿದ್ದರೂ ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ. ತುರ್ತು ಅವಘಡ ಸಂದರ್ಭಗಳಲ್ಲಿ ಸಂಪರ್ಕ ಸಾಧಿಸಲು ಅಸಾಧ್ಯವಾಗಿದ್ದು 6-7 ಕಿ.ಮೀ. ಸಂಚರಿಸಿ ಅನಂತರ ಕರೆ ಮಾಡಬೇಕಾದ ಪರಿಸ್ಥಿತಿ ನಮ್ಮದು ಎನ್ನುತ್ತಾರೆ ಗ್ರಾಮಸ್ಥರು. ಮನವಿಗೆ ಸ್ಪಂದಿಸಿಲ್ಲ
ಬೇಲಾಡಿಗ್ರಾಮದಲ್ಲಿ ಖಾಸಗಿ ಕಂಪೆನಿಯ ಟವರ್ ಅಥವಾ ಸರಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ ಟವರ್‌ನ್ನಾದರೂ ಅಳವಡಿಸಬೇಕು ಎಂಬುದು ಗ್ರಾಮಸ್ಥರ ಬೇಡಿಕೆ. ಈ ಕುರಿತು ಹಲವು ಬಾರಿ ಸಂಬಂಧಪಟ್ಟ ಇಲಾಖೆಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಲಾಗಿದ್ದರೂ ಕ್ರಮಕೈಗೊಂಡಿಲ್ಲ.
-ಜಯ ಎಸ್. ಕೋಟ್ಯಾನ್,
ಗ್ರಾ.ಪಂ. ಮಾಜಿ ಅಧ್ಯಕ್ಷರು
Related Articles
ನೆಟ್‌ವರ್ಕ್ ಸಮಸ್ಯೆ ಕುರಿತು ಶಾಸಕರು ಹಾಗೂ ಸಂಸದರ ಗಮನಕ್ಕೆ ತಂದು ಸಂಬಂಧಪಟ್ಟ ಇಲಾಖೆಗಳ ಮೂಲಕ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿಕ್ರಮ ಕೈಗೊಳ್ಳಲಾಗುವುದು.
-ಪ್ರವೀಣ್ ಕೆ. ಕೋಟ್ಯಾನ್, ತಾ.ಪಂ. ಸದಸ್ಯರು
Advertisement
ಬಹು ಕಾಲದ ಬೇಡಿಕೆ ಬೇಲಾಡಿ ಭಾಗದ ಉದ್ದಗಲಕ್ಕೂ ನೆಟ್‌ವರ್ಕ್ ಸಮಸ್ಯೆ ತಲೆದೋರಿದ್ದು ಬಹು ಕಾಲದ ಬೇಡಿಕೆ ಈಡೇರಿಸುವಲ್ಲಿ ಇಲಾಖೆ ಕ್ರಮ ಕೈಗೊಳ್ಳಬೇಕು.
-ಸದಾಶಿವ ಶೆಟ್ಟಿ, ಬೇಲಾಡಿ -ಸಂದೇಶ್‌ಕುಮಾರ್ ನಿಟ್ಟೆ