ಬೆಂಗಳೂರು: ಮೊಬೈಲ್ ಕಳವು ಹಾಗೂ ಪಿಜಿಗಳಲ್ಲಿ ಲ್ಯಾಪ್‌ಟಾಪ್ ಇತರ ವಸ್ತುಗಳನ್ನು ಕಳವು ಮಾಡು ತ್ತಿದ್ದ ಆರು ಮಂದಿ ಆರೋಪಿಗಳನ್ನು ಬಂಧಿಸಿರುವ ಆಗ್ನೇಯ ವಿಭಾಗದ ಪೊಲೀಸರು 49 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಪಿಜಿಗಳು ಹಾಗೂ ತೆರೆದ ಬಾಗಿಲು ಮನೆಗಳಿಗೆ ಪ್ರವೇಶಿಸಿ ಲ್ಯಾಪ್‌ಟಾಪ್, ಮೊಬೈಲ್ ಫೋನ್ ಗಳನ್ನು ಕಳವು ಮಾಡುತ್ತಿದ್ದ ತಮಿಳುನಾಡು ಮೂಲ ದ ಮೂವರು ಆರೋಪಿಗಳನ್ನು ಮೈಕೋ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ತಮಿಳ್ ಸೆಲ್ವನ್(28), ಲಕ್ಷ್ಮಣ್(33) ಮತ್ತು ಕಾರ್ತಿಕ್(19) ಬಂಧಿತರು.
ಆರೋಪಿಗಳಿಂದ 24 ಲಕ್ಷ ರೂ. ಮೌಲ್ಯದ 33 ಲ್ಯಾಪ್‌ಟಾಪ್‌ಗ್ಳು, 40 ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಗಳು ತಮಿಳನಾಡಿನಿಂದ ರೈಲುಗಳಲ್ಲಿ ನಗರಕ್ಕೆ 1 ಪಿಜಿಗಳು ಹಾಗೂ ತೆರೆದ ಬಾಗಿಲು ಮನೆಗಳಿಗೆ ನುಗ್ಗಿ ಲ್ಯಾಪ್‌ಟಾಪ್, ಮೊಬೈಲ್‌ಗಳನ್ನು ಕಳವು ಮಾಡುತ್ತಿದ್ದರು. ಬಳಿಕ ರೈಲಿನಲ್ಲಿ ತಮಿಳುನಾಡಿಗೆ ಹೋಗಿ ಅಲ್ಲಿಯೇ ಮಾರಾಟ ಮಾಡುತ್ತಿದ್ದರು. ಇತ್ತೀಚೆಗೆ ಆರೋಪಿಗಳು ನಗರಕ್ಕೆ ಬಂದಾಗ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ನಗರ ಆಯುಕ್ತ ಬಿ.ದಯಾ ನಂದ್ ಹೇಳಿದರು.
ಮತ್ತೂಂದು ಪ್ರಕರಣದಲ್ಲಿ ಬಸ್ ನಿಲ್ದಾಣ, ದೇವಸ್ಥಾನ, ಜನನಿಬಿಡ ಪ್ರದೇಶಗಳಲ್ಲಿ ಮೊಬೈಲ್ ಕಳವು ಮಾಡುತ್ತಿದ್ದ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಮೂವರು ಆರೋಪಿಗಳನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಭದ್ರಾವತಿಯ ಭೋವಿಕಾಲೋನಿಯ ಶ್ರೀನಿ ವಾಸ್(30), ಸಂತೋಷ್(30) ಮತ್ತು ಅಭಿಲಾಷ್ (29) ಬಂಧಿತರು.
ಆರೋಪಿಗಳಿಂದ 25 ಲಕ್ಷ ರೂ. ಮೌಲ್ಯದ ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ವಿಚಾರಣೆಯಲ್ಲಿ ಬೆಂಗಳೂರು, ಶಿವಮೊಗ್ಗ, ಮೈಸೂರು, ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಜನನಿಬಿಡ ಪ್ರದೇಶದಲ್ಲಿ ಜನರ ಗಮನ ಸೆಳೆದು ಮೊಬೈಲ್ ಕಳವು ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ಮಡಿವಾಳ ಠಾಣೆ ವ್ಯಾಪ್ತಿ ಕಳವು ಮೊಬೈಲ್‌ಗಳ ವಿಲೇವಾರಿಗೆ ಬಂದಾಗ ಬಂಧಿಸ ಲಾಗಿದೆ ಎಂದು ಆಯುಕ್ತರು ಹೇಳಿದರು.