ಈಗಿನ ಪ್ರಪಂಚದಲ್ಲಿ ಮೊಬೈಲ್ ಅತ್ಯಂತ ಪ್ರಾಮುಖ್ಯವನ್ನು ಪಡೆದುಕೊಂಡಿದೆ. ಯಾವುದಕ್ಕಾದರೂ ನಾವು ಅರ್ಜಿ ಹಾಕಿದರೆ ನಿಮ್ಮ ಮೊಬೈಲ್‌ಗೆ ಒಂದು ಕೋಡ್ ಇರುವ ಸಂದೇಶ ಬರುತ್ತದೆ ಎಂದು ಹೇಳುತ್ತಾರೆ. ಹಾಗೆಯೇ ಸಮಾರಂಭಕ್ಕೆ ಬರಹೇಳಲು ನಮ್ಮ ಆವಶ್ಯಕತೆಗಳನ್ನು ಪೂರೈಸಿಕೊಳ್ಳಲು ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಮುಂತಾದ ಅನೇಕ ಆವಶ್ಯಕತೆಗಳಿಗೆ ಮೊಬೈಲ್ ಅತ್ಯವಶ್ಯಕವಾಗಿದೆ. ಹೀಗೆ ನಾನು ಮುಂದಕ್ಕೆ ಆಲೋಚಿಸುತ್ತಾ…
ಇನ್ನು ಎರಡು ವರ್ಷ ಕಳೆದ ನಂತರ ನವೆಂಬರ್ ಒಂದು ದಿನ ನನ್ನ ಮನೆಯ ಸಮಾರಂಭಕ್ಕೆ ಬರಹೇಳಲು ವಾಟ್ಸಾಪ್‌ನಲ್ಲಿ ಸಂದೇಶ ಕಳುಹಿಸಲು ತಯಾರಾದಾಗ ಇದ್ದಕ್ಕಿದ್ದಂತೆ ಒಂದು ವಿಡಿಯೋ ಬಂತು. ಆ ವಿಡಿಯೋ ನೋಡಿದಾಗ ಅದೊಂದು ಹಾಸ್ಯದ ವಿಡಿಯೋ ಆಗಿತ್ತು. ತಕ್ಷಣ ಒಂದು ಕೋಡ್ ಇರುವ ಸಂದೇಶ ಬಂತು. ತಕ್ಷಣ ಎಲ್ಲಾ ವಾಟ್ಸಾಪ್ ಫ್ರೆಂಡ್ಸ್‌ಗಳಿಂದ, “ನಾಳೆ ನಿಮ್ಮ ಮನೆಯಲ್ಲಿ ಸಮಾರಂಭವಿದೆಯಲ್ಲ , ನಾನು ಬರುತ್ತೇನೆ, ಬರುತ್ತೇವೆ ಒಂದಾದರೆ, ಬರುತ್ತೇನೆ’ ಎಂದು ಹೀಗೆ ಅನೇಕ ಸಂದೇಶಗಳು ಬಂತು.
ತದನಂತರ ಮುಂದಿನ ತಿಂಗಳಿನಲ್ಲಿ ನಾನು ಪೊಲೀಸ್ ಸ್ಟೇಷನ್‌ನಲ್ಲಿ ಇದ್ದೆ. ನನ್ನಲ್ಲಿ ಪೊಲೀಸ್ ಕೇಳುತ್ತಾನೆ, “ಆ ವಿಡಿಯೋ ಎಲ್ಲಿಂದ ಬಂತು? ಯಾರು ಕಳುಹಿಸಿದ್ದು? ಅದರಲ್ಲಿ ಏನಿತ್ತು?’ ಆದರೆ, ನಾನು ಉತ್ತರಿಸದೆ ಮೌನಿಯಾಗಿದ್ದೆ. ನವೆಂಬರ್‌ನಲ್ಲಿ ಅವರಿಗೆಲ್ಲ ನನ್ನ ಮನೆಯಲ್ಲಿ ಸಮಾರಂಭವಿದೆಯೆಂದು ಹೇಗೆ ಗೊತ್ತಾಯಿತು ಎಂದು ವಿಚಿತ್ರಗೊಂಡೆ. ಜೊತೆಗೆ ಬಂದ ಕೋಡ್ ಇರುವ ಸಂದೇಶವನ್ನು ತೆರೆದು ನೋಡಿದಾಗ ನನಗೆ ಸಂದೇಶ ಕಳುಹಿಸಿದ ಫ್ರೆಂಡ್ಸ್‌ನವರ ಎಲ್ಲಾ ವಿಷಯಗಳು ಅದರಲ್ಲಿ ಇತ್ತು. ಅವರ ಎಲ್ಲಾ ಸೀಕ್ರೆಟ್ ಕೋಡ್‌ಗಳು ಜೊತೆಗೆ ಅವರ ಆಧಾರ್ ನಂಬರ್, ಬ್ಯಾಂಕ್ ಖಾತೆ ನಂಬರ್ ಹಾಗೂ ಇನ್ನಿತರ ನಂಬರ್‌ಗಳು ಇದ್ದವು. ಅವರು ಇದಕ್ಕಿಂತ ಮೊದಲು ಯಾರಿಗೆ ಸಂದೇಶ ಕಳುಹಿಸಿದ್ದಾರೆ ಎಂಬ ಎಲ್ಲಾ ವಿಷಯಗಳೂ ಇತ್ತು. ಅದು ಅಲ್ಲದೆ ಆ ಹಾಸ್ಯದ ವಿಡಿಯೋ ನೋಡೋದಕ್ಕಿಂತ ಸ್ವಲ್ಪ ಹಿಂದೆ ಏನೆಲ್ಲಾ ಯೋಚನೆ ಮಾಡಿದ್ದಾರೆ ಎಂಬುದು ಕೂಡಾ ಆ ಕೋಡ್ ಮೂಲಕ ಇತರರಿಗೆ ವೈರಲ್ ಆಗಬಹುದು ಎಂದು ಅನಿಸಿತು.
ಡಿಸೆಂಬರ್ ತಿಂಗಳಿನಲ್ಲಿ ಪೊಲೀಸ್ ಸ್ಟೇಷನ್‌ನಲ್ಲಿ ನಾನು ಏನೂ ಉತ್ತರಿಸದೆ ಇದ್ದ ಕಾರಣ ಮತ್ತೆ ನನ್ನನ್ನು ಲಾಕಪ್‌ನಲ್ಲಿ ಹಾಕಿದರು. ಮರುದಿನ ಯಾರೋ ಅಧಿಕಾರಿಗಳು ಬಂದು ನನ್ನನ್ನು ವಿಚಾರಣೆ ನಡೆಸಿದರೂ ಇದು ಹೇಗೆ ಆಯಿತು ಎಂದರೆ ಇದನ್ನು ಒಬ್ಬ ಸೈಬರ್ ಕ್ರಿಮಿನಲ್ ಮಾಡಿದ್ದಾನೆ. ಅದು ಹೇಗೆಂದರೆ, ಅಂದು ಬಂದ ಹಾಸ್ಯದ ವಿಡಿಯೋದಲ್ಲಿ ಕೆಲವು ಸಾಫ್ಟ್ವೇರ್‌ಗಳನ್ನು ಜೋಡಿಸಿ ಬಿಟ್ಟಿದ್ದಾನೆ. ಅದು ಯಾರ ಮೊಬೈಲ್‌ಗೆ ಹೋಗುತ್ತದೋ ಅವರು ಅವರ ಮೊಬೈಲ್ ನಂಬರನ್ನು ಯಾರಿಗೆಲ್ಲಾ ಕೊಟ್ಟಿದ್ದಾರೆ? ಯಾಕೆ ಕೊಟ್ಟಿದ್ದಾರೆ ಎಂಬ ಎಲ್ಲಾ ವಿಷಯವನ್ನು ಕಂಡುಹಿಡಿಯುತ್ತದೆ.
ಉದಾಹರಣೆಗೆ ಒಬ್ಬ ವ್ಯಕ್ತಿ ತನ್ನ ಮೊಬೈಲ್ ನಂಬರನ್ನು ಬ್ಯಾಂಕಿನವರಿಗೆ ಕೊಡುತ್ತಾನೆ. ತದನಂತರ ಬ್ಯಾಂಕಿನವರೂ ಸಂದೇಶದ ಮೂಲಕ ಖಾತೆ ನಂಬರನ್ನು ಮತ್ತು ಇತರ ಹಣದ ವ್ಯವಹಾರಗಳ ಬಗ್ಗೆ ಮಾಹಿತಿಯನ್ನು ಸಂದೇಶದ ಮೂಲಕ ತಿಳಿಸುತ್ತಾರೆ. ಆದುದರಿಂದ ನಮ್ಮ ಎಲ್ಲಾ ವಿಷಯಗಳನ್ನು ಖಾತೆಯಲ್ಲಿರುವ ಹಣ ಸೀಕ್ರೆಟ್ ಕೋಡ್ ಆಧಾರ್ ನಂಬರ್ ಮುಂತಾದ ಹಲವು ವಿಷಯಗಳನ್ನು ವೀಡಿಯೊ ವೈರಲ್ ಆದಲ್ಲೆಲ್ಲ ಕೋಡ್ ಇರುವ ಸಂದೇಶದ ಮೂಲಕ ಇತರರಿಗೆ ತಿಳಿಯುತ್ತದೆ.
ಇದೆಲ್ಲ ನನಗೆ ಹೇಗೆ ಗೊತ್ತಾಯಿತು ಎಂದರೆ ನಾನು ಕಥೆ ಬರೆಯುವ ಮೊದಲೆ ಯೋಚಿಸಿದೆ. ಇದು ಕೇವಲ ಕಥೆಯಷ್ಟೆ. ನನ್ನ ಮುಂದಿನ ದಿನಗಳಲ್ಲಿ ಹೀಗೆಯೂ ಆಗಬಹುದು.
ಮಂಜುನಾಥ ಪ್ರಥಮ ಪಿಯುಸಿ, ಪದವಿಪೂರ್ವ ಕಾಲೇಜು, ಪುತ್ತೂರು.