Advertisement
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇರುವ ಎಲ್ಲ ಸೌಲಭ್ಯಗಳು ಮೊಬೈಲ್ ಆರೋಗ್ಯ ಕೇಂದ್ರದಲ್ಲಿ ಇರಲಿದೆ. ಒಂದೊಂದು ಮೊಬೈಲ್ ಆರೋಗ್ಯ ಕೇಂದ್ರದಲ್ಲಿ ಒಬ್ಬರು ವೈದ್ಯರು ಹಾಗೂ ಇಬ್ಬರು ದಾದಿಯರು ಇರುತ್ತಾರೆ. ರಾಜ್ಯದ ವಿವಿಧ ಭಾಗದಿಂದ ಬಂದಿರುವ ವೈದ್ಯರನ್ನು ಹಾಗೂ ದಾದಿಯರಿಗೆ ಸೂಕ್ತ ರೀತಿಯಲ್ಲಿ ಸೇವೆ ಸಲ್ಲಿಸಲು ಅಗತ್ಯವಾಗುವಂತೆ ಕಾರ್ಯಯೋಜನೆ ರೂಪಿಸಲಾಗಿದೆ.
Related Articles
ಜಿಲ್ಲೆಯ ಎಲ್ಲರಿಗೂ ಶುದ್ಧ ಕುಡಿಯವ ನೀರು ಒದಗಿಸುವುದು ಜಿಲ್ಲಾಡಳಿತ ಮೊದಲ ಆದ್ಯತೆಯಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ನೀರು ಶುದ್ಧೀಕರಿಸುವ ಮಾತ್ರೆಗೆ ಬೇಡಿಕೆ ಇಡಲಾಗಿದೆ. ಒಂದು ಲೀಟರ್ ನೀರಿಗೆ ಒಂದು ಮಾತ್ರೆಯಂತೆ ಸುಮಾರು 2 ಲಕ್ಷ ಮಾತ್ರೆಗೆ ಪ್ರಸ್ತಾವನೆಯನ್ನು ಕೇಂದ್ರ ಕಚೇರಿಗೆ ಸಲ್ಲಿಸಿದ್ದೇವೆ. ಶುಕ್ರವಾರ ಅಥವಾ ಶನಿವಾರ ಮಾತ್ರೆ ಬರಲಿದೆ. ಕುಡಿಯುವ ನೀರಿಗೆ ಈ ಮಾತ್ರೆ ಹಾಕುವುದರಿಂದ ನೀರು ಶುದ್ಧವಾಗುತ್ತದೆ. ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮ ಇಲ್ಲ ಎಂದರು.
Advertisement
ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು:51 ನಿರಾಶ್ರಿತರ ಶಿಬಿರದಲ್ಲಿ ಆರೋಗ್ಯ ಇಲಾಖೆಯ ಮಾಹಿತಿ ಮತ್ತು ಶಿಕ್ಷಣ ಅಧಿಕಾರಿಗಳು ಸಾಂಕ್ರಾಮಿಕ ರೋಗಗಳ ಬಗ್ಗೆ ಕೇಂದ್ರದಲ್ಲಿರುವ ನಿರಾಶ್ರಿತರಿಗೆ ಅರಿವು ಮೂಡಿಸುವ ಕಾರ್ಯ ನಡೆಸುತ್ತಿದ್ದಾರೆ. ಸಾಂಕ್ರಾಮಿಕ ರೋಗಗಳು ಬಾರದಂತೆ ತಡೆಗಟ್ಟುವ ವಿಧಾನ ಹಾಗೂ ಅದರಿಂದ ಆಗಬಹುದಾದ ದುಷ್ಪರಿಣಾಮದ ಬಗ್ಗೆಯೂ ಎಚ್ಚರಿಕೆಯ ಸಂದೇಶ ನೀಡುತ್ತಿದ್ದಾರೆ ಎಂದು ಡಾ.ರಾಜೇಶ್ ವಿವರಿಸಿದರು.