Advertisement

ಬೆಂಗಳೂರು:ಮೊಬೈಲ್‌ ಸ್ಫೋಟಗೊಂಡು ಯುವಕನ ಕೈ ಛಿದ್ರ, ಗಂಭೀರ

09:14 AM May 02, 2019 | Vishnu Das |

ಬೆಂಗಳೂರು: ಎಚ್‌ಎಎಲ್‌ ವ್ಯಾಪ್ತಿಯಲ್ಲಿ ಮೊಬೈಲ್‌ ಸ್ಫೋಟಗೊಂಡು ಯುವಕನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

Advertisement

ಬಿಹಾರ ಮೂಲದ ಯುವಕ ಮೊಬೈಲನ್ನು ಚಾರ್ಜ್‌ಗೆ ಹಾಕಿ ವಿಡಿಯೋ ಕಾಲ್‌ ಮಾಡುತ್ತಿದ್ದ ವೇಳೆ ಮೊಬೈಲ್‌ ಸ್ಫೋಟಗೊಂಡಿದೆ ಎಂದು ತಿಳಿದು ಬಂದಿದೆ.

ಮೊಬೈಲ್‌ ಸ್ಫೋಟಗೊಂಡ ತೀವ್ರತೆಗೆ ಯುವಕನ ಕೈ ಮತ್ತುಮುಖಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಎಡಗೈಯ ಮೂರು ಬೆರಳುಗಳು ಛಿದ್ರವಾಗಿ ಬಿದ್ದಿವೆ.

ಯುವಕನನ್ನು ತಕ್ಷಣ ಸ್ನೇಹಿತರು ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಯುವಕನ ಹೆಸರು ಮತ್ತುಮೊಬೈಲ್‌ ಯಾವ ಕಂಪೆನಿಗೆ ಸೇರಿದ್ದು ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.

Advertisement

ಎಚ್‌ಎಎಲ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next