Advertisement
ಬ್ಯಾಂಕ್‌ನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲ್ಯು. ಡಿ’ಸೋಜಾ ಮಾತನಾಡಿ, ಕರ್ನಾಟಕ ಕರಾವಳಿ ಮೂಲದ ಕ್ರೈಸ್ತ ಸಮುದಾಯದ ಮುಂದಾಳುಗಳ ದೂರದೃಷ್ಟಿಯಿಂದ ದಿ ಮೆಂಗ್ಳೂರಿಯ ಕೆಥೋಲಿಕ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ನಿಯಮಿತ ಎಂದು ಸ್ಥಾಪನೆಗೊಂಡ ಈ ಸಹಕಾರಿ ಬ್ಯಾಂಕ್ ಗ್ರಾಹಕರ ಹೆಚ್ಚುವರಿ ಸೇವೆಗೆ ಡಿಜಿಟಲ್ ಬ್ಯಾಂಕಿಂಗ್ ಅನ್ನು ಸೇವಾರ್ಪಣೆಗೈದಿದೆ. ಇದು ಬ್ಯಾಂಕ್‌ನ ಅಭಿವೃದ್ಧಿಯ ಮುನ್ನಡೆಯಾಗಿದೆ. ದೇಶಾದ್ಯಂತದ ಪ್ರಮುಖ ಬ್ಯಾಂಕ್‌ಗಳು ನೀಡುವ ಸೇವೆಗಳಿಗೆ ಸಮನಾಗಿಸಿ ಆಧುನಿಕ ತಂತ್ರಜ್ಞಾನಕ್ಕೆ ಹೊಂದಿಸಿಕೊಂಡಿದೆ. ಯುಪಿಐ ಸುಗಮ, ಸುರಕ್ಷಿತ ಮತ್ತು ಗ್ರಾಹಕರ ವಹಿವಾಟು ವ್ಯವಸ್ಥೆಗೆ ಉಚಿತವಾಗಿದ್ದು, ಅದು ಸಣ್ಣ ಪ್ರಮಾಣದ ವಹಿವಾಟುಗಳನ್ನು ಸಹ ಸುಲಭವಾಗಿ ನಿಭಾಯಿಸಲಿದೆ. ಉಚಿತ ನಿಧಿ ವರ್ಗಾವಣೆ, ತ್ವರಿತ ವರ್ಗಾವಣೆ ಸೇವೆಯು ಹಗಲಿರುಳು ಲಭ್ಯಲಿದ್ದು, ಸಣ್ಣ ಖರೀದಿಗೆ ಉಪಯುಕ್ತ. ಸ್ವತಃ ಬ್ಯಾಂಕ್ ಖಾತೆ ಸಂಖ್ಯೆಯನ್ನು ಹಂಚಿಕೊಳ್ಳದೇ ಇದ್ದಲ್ಲಿ ಬ್ಯಾಂಕ್ ಖಾತೆಯ ಗೌಪ್ಯತೆಯೂ ಸುರಕ್ಷಿತವಾಗಿ ಇರುವುದು. ಕಾರ್ಡ್ ಸಂಖ್ಯೆ ಮತ್ತು ಸಿವಿವಿ ಅಗತ್ಯವಿಲ್ಲದೆ ಸೇವೆಗೆ ಬಳಸಬಹುದು. ಈ ಕಾರಣದಿಂದಲೇ ಗ್ರಾಹಕರು ಯುಪಿಐ ಆಯ್ಕೆ ಮಾಡಲಿಚ್ಛಿಸುತ್ತಾರೆ. ನಿಮ್ಮ ಅಭಿವೃದ್ಧಿ ಪಾಲುದಾರ ಅನ್ನುವ ಶ್ಲೋಗನ್‌ನಿಂದಲೇ ಕಾರ್ಯಾಚರಿಸುತ್ತಿರುವ ಮೋಡೆಲ್ ಬ್ಯಾಂಕ್ ತನ್ನ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಹಣಕಾಸು ಕ್ಷೇತ್ರದ ಆವಿಷ್ಕಾರಗಳನ್ನು ಆಯ್ದು ಮತ್ತು ಸೇವೆಗಳನ್ನು ನಿರಂತರವಾಗಿ ನವೀಕರಿಸುತ್ತಿದೆ. ಬ್ಯಾಂಕ್‌ನ ಗ್ರಾಹಕ ಕೇಂದ್ರಿತ ಸೇವೆಯನ್ನು ತನ್ನ 25 ಶಾಖೆಗಳಲ್ಲಿ ಒದಗಿಸಿ ದಕ್ಷ, ವೃತ್ತಿಪರ ಮತ್ತು ವಿನಯಶೀಲ ಸೇವೆಯೊಂದಿಗೆ ಕಾರ್ಯನಿರತವಾಗಿದೆ ಎಂದು ತಿಳಿಸಿದ ಅವರು, ನಾಡಿನ ಸಮಸ್ತ ಜನತೆಗೆ ಮತ್ತು ಬ್ಯಾಂಕ್‌ನ ಗ್ರಾಹಕರಿಗೆ ಕ್ರಿಸ್ಮಸ್ ಮತ್ತು ನೂತನ ವರ್ಷದ ಶುಭಾಶಯಗಳನ್ನು ಕೋರಿದರು.
Related Articles
Advertisement