Advertisement

ಎಸೆಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್‌ ಸ್ವಾಧೀನ ಅಧಿಕಾರಿ

09:53 AM Mar 20, 2020 | mahesh |

ಮಹಾನಗರ: ಎಸೆಸೆಲ್ಸಿ ಪರೀಕ್ಷೆಯಲ್ಲಿ ಯಾವುದೇ ಅಕ್ರಮಗಳಾಗದಂತೆ ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕ್ರಮ ವಹಿ ಸುತ್ತಿದೆ. ಇದೇ ಮೊದಲ ಬಾರಿಗೆ ಮೊಬೈಲ್‌ ಸ್ವಾಧೀನ ಅಧಿಕಾರಿಗಳನ್ನು ಎಲ್ಲ 95 ಪರೀಕ್ಷಾ ಕೇಂದ್ರಗಳಲ್ಲಿ ನೇಮಿಸಲಾಗುತ್ತಿದೆ.

Advertisement

ಬಹುತೇಕ ಸಂದರ್ಭಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಅಕ್ರಮ ಗಳಿಗೆ ಮೊಬೈಲ್‌ ಬಹುಮುಖ್ಯ ಕಾರಣ ವಾಗು ತ್ತಿದೆ. ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್‌ ಬಳಕೆ ಇಲ್ಲ ವಾದರೂ ಕೆಲವೆಡೆ ಕಣ್ತಪ್ಪಿಸಿ ಮೊಬೈಲ್‌ ಬಳಕೆ ನಡೆಯುತ್ತದೆ. ದ.ಕ. ಜಿಲ್ಲೆ ಯಲ್ಲಿ ಯಾವುದೇ ಪರೀಕ್ಷಾ ಅಕ್ರಮ ನಡೆಯ ಬಾರದು ಎಂಬ ನಿಟ್ಟಿನಲ್ಲಿ ಜಿಲ್ಲಾ ಸಾರ್ವ ಜನಿಕ ಶಿಕ್ಷಣ ಇಲಾಖೆಯು ಮೊಬೈಲ್‌ ಸ್ವಾಧೀನ ಅಧಿ ಕಾರಿಯನ್ನು ನೇಮಿ ಸಲು ಮುಂದಾಗಿದೆ.

ಗೇಟ್‌ನಲ್ಲೇ ತಪಾಸಣೆ
ಪರೀಕ್ಷಾ ಕೇಂದ್ರಗಳಿಗೆ ತೆರಳುವ ಗೇಟ್‌ನಲ್ಲೇ ಮೊಬೈಲ್‌ ಸ್ವಾಧೀನ ಅಧಿಕಾರಿ ಕರ್ತವ್ಯ ನಿರ್ವಹಿಸಲಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಮತ್ತು ಶಿಕ್ಷಕರು ಪರೀಕ್ಷಾ ಕೇಂದ್ರದೊಳಗೆ ಹೋಗುವ ಮುನ್ನ ಗೇಟ್‌ನಲ್ಲಿ ಮೊಬೈಲ್‌ ಸ್ವಾಧೀನ ಅಧಿಕಾರಿಗೆ ಮೊಬೈಲ್‌ ನೀಡಿ ತೆರಳಬೇಕು. ಮೊಬೈಲ್‌ ನೀಡದವರನ್ನು ತಪಾ ಸಣೆ ಮಾಡಿ ಮೊಬೈಲ್‌ ಇದ್ದಲ್ಲಿ ಪಡೆದು ಕೊಂಡು ಬಳಿಕ ಕೇಂದ್ರದೊಳಗೆ ಬಿಡ ಲಾ ಗುತ್ತದೆ. ಪರೀಕ್ಷಾರ್ಥಿಗಳು ಮೊಬೈಲ್‌ ತರುವುದು ನಿಷಿದ್ಧವಾದರೂ, ಒಂದು ವೇಳೆ ತಂದಿದ್ದಲ್ಲಿ ಅದನ್ನು ಸ್ವಾಧೀನ ಅಧಿಕಾರಿಯಲ್ಲಿ ನೀಡಬೇಕು.

ಭರದ ಸಿದ್ಧತೆ
ವಿದ್ಯಾರ್ಥಿಗಳನ್ನೂ ತಪಾಸಣೆ ಮಾಡಿ ಒಳಗೆ ಬಿಡಲಾಗುತ್ತದೆ. ಮಾ. 27 ರಿಂದ ಎ. 9ರ ವರೆಗೆ ಎಸೆಸೆಲ್ಸಿ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆಗೆ ಸಿದ್ಧತಾಕಾರ್ಯ ಭರದಿಂದ ಸಾಗುತ್ತಿದೆ. ಬಂಟ್ವಾಳದ 17, ಬೆಳ್ತಂಗ ಡಿಯ 13, ಮಂಗಳೂರು ಉತ್ತ ರದ 21, ಮಂಗಳೂರು ದಕ್ಷಿಣದ 21, ಮೂಡುಬಿದಿರೆಯ 5, ಪುತ್ತೂರಿನ 12 ಮತ್ತು ಸುಳ್ಯದ 6 ಪರೀಕ್ಷಾ ಕೇಂದ್ರಗಳ ಪ್ರತಿ ಪರೀಕ್ಷಾ ಕೊಠಡಿಗಳಿಗೂ ಸಿಸಿಟಿವಿ ಅಳವಡಿಸಲಾಗುತ್ತದೆ. ಉತ್ತರ ಪತ್ರಿಕೆಯನ್ನು ಕೊಂಡೊಯ್ಯುವ ವಾಹನಕ್ಕೆ ಜಿಪಿಎಸ್‌ ಅಳವಡಿ ಸಲಾಗುತ್ತಿದೆ. ಪರೀಕ್ಷೆಯ ಎಲ್ಲ ಪ್ರಕ್ರಿಯೆ ಸಿಸಿಟಿವಿ ಅಡಿಯಲ್ಲೇ ನಡೆ ಯುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪಾಸ್‌ ಪ್ಯಾಕೇಜ್‌ ವ್ಯವಸ್ಥೆ
ಈಗಾಗಲೇ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪಾಸ್‌ ಪ್ಯಾಕೇಜ್‌ ವ್ಯವಸ್ಥೆ ಮುಖಾಂತರ ಬೋಧನೆ ನಡೆದಿದೆ. ಪ್ರತಿ ಶಾಲೆಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಐವರು ವಿದ್ಯಾರ್ಥಿಗಳನ್ನು ಪಾಸ್‌ ಪ್ಯಾಕೇಜ್‌ ವ್ಯವಸ್ಥೆಯಡಿ ವಿಶೇಷ ತರಬೇತಿ ನೀಡಿ ಮನನ ಮಾಡಿಸುವ ಕೆಲಸ ನಡೆಸಲಾಗಿದೆ.

Advertisement

ಗೇಟ್‌ನಲ್ಲೇ ಎಲ್ಲರ ತಪಾಸಣೆ
ಪಾರದರ್ಶಕವಾಗಿ ಎಸೆಸೆಲ್ಸಿ ಪರೀಕ್ಷೆ ನಡೆಯಬೇಕೆಂಬ ನಿಟ್ಟಿನಲ್ಲಿ ಈ ಬಾರಿ ಮೊಬೈಲ್‌ ಸ್ವಾಧೀನ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಪರೀಕ್ಷಾ ಕೇಂದ್ರದ ಗೇಟ್‌ನಲ್ಲೇ ಎಲ್ಲರನ್ನೂ ತಪಾಸಣೆ ಮಾಡಿಯೇ ಒಳಗೆ ಬಿಡಲಾಗುತ್ತದೆ. ಪರೀಕ್ಷಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ, ಶಿಕ್ಷಕರು ಈ ಅಧಿಕಾರಿಯಲ್ಲಿ ಮೊಬೈಲ್‌ ನೀಡಿ ಕೇಂದ್ರದೊಳಗೆ ತೆರಳಬೇಕು.
 - ಮಲ್ಲೇಸ್ವಾಮಿ, ವಿದ್ಯಾಂಗ ಉಪನಿರ್ದೇಶಕರು ದ.ಕ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ

  ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next