Advertisement
ಐಡಿಸಿ ಬಿಡುಗಡೆ ಮಾಡಿರುವ ನಾಲ್ಕನೇ ತ್ತೈಮಾಸಿಕದ ವರದಿಯಂತೆ, ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್ ನಂ.1 ಸ್ಥಾನದಲ್ಲಿದ್ದು, ಶೇ.25.1 ರಷ್ಟು ಮಾರುಕಟ್ಟೆಯನ್ನು ವಶಪಡಿಸಿಕೊಂಡಿದೆ. ಟಾಪ್ 5 ಪಟ್ಟಿಯಲ್ಲಿ ಉಳಿದಂತೆ ನಾಲ್ಕೂ ಸ್ಥಾನಗಳನ್ನು ಚೀನೀ ಫೋನುಗಳೇ ಆಕ್ರಮಿಸಿವೆ. ಕ್ಸಿಯೋಮಿ ಶೇ.10.7ರಷ್ಟು ಮಾರಾಟಗೊಂಡು, ದ್ವಿತೀಯ ಸ್ಥಾನದಲ್ಲಿದೆ.
3ನೇ ಸ್ಥಾನದ ಲೆನೋವಾ ಶೇ. 9.9ರಷ್ಟು ಮಾರಾಟ ಗೊಂಡಿದ್ದರೂ -17.4ರಷ್ಟು ಮಾರುಕಟ್ಟೆ ಕಳೆದುಕೊಂಡಿದೆ. 4ನೇ ಸ್ಥಾನದಲ್ಲಿರುವ ಆಪ್ಪೋ ಸ್ಮಾರ್ಟ್‌ಫೋನುಗಳು ಶೇ.8.6ರಷ್ಟು ಮಾರುಕಟ್ಟೆಯನ್ನು ಆಕ್ರಮಿಸಿದ್ದು, ಕಳೆದ ಅವಧಿಗೆ ಹೋಲಿಸಿದರೆ ಶೇ.29.9ರಷ್ಟು ಗಣನೀಯ ಏರಿಕೆ ಕಂಡಿದೆ. ಮತ್ತೂಂದು ಚೀನೀ ಕಂಪೆನಿ ವಿವೋ ಶೇ.50ರಷ್ಟು ಚೇತರಿಕೆ ಕಂಡಿದ್ದು, ಶೇ.7.6ರಷ್ಟು ವಿವೋ ಮೊಬೈಲುಗಳು ಮಾರಾಟ ಕಂಡಿವೆ. ಭಾರತದ ಮೈಕ್ರೋಮ್ಯಾಕ್ಸ್, ಇಂಟೆಕ್ಸ್, ಲಾವಾ, ಕಾರ್ಬನ್ ಮೊಬೈಲುಗಳು ಗಣನೀಯ ಪ್ರಮಾಣದಲ್ಲಿ ಮಾರುಕಟ್ಟೆ ಕಳೆದುಕೊಂಡಿವೆ. “ನಾಲ್ಕನೇ ತ್ತೈಮಾಸಿಕದಲ್ಲಿ ದೇಶದಲ್ಲಿ ಒಟ್ಟಾರೆ 2.5 ಕೋಟಿ ಮೊಬೈಲುಗಳು ಮಾರಾಟವಾಗಿದ್ದರೂ ಶೇ.20.3ರಷ್ಟು ಮಾರುಕಟ್ಟೆ ಕುಗ್ಗಿದೆ.