Advertisement

ಸೇಡಿಗಾಗಿ 300 ಮೊಸಳೆ ಬಲಿ

06:00 AM Jul 17, 2018 | Team Udayavani |

ಸೊರಾಂಗ್‌(ಇಂಡೋನೇಷ್ಯಾ): ಇದೆಂಥಾ ಸೇಡು ಎಂದು ಹೌಹಾರುವಂಥ ಘಟನೆಯೊಂದು ಇಂಡೋನೇಷ್ಯಾದಲ್ಲಿ ನಡೆದಿದೆ. ಇಲ್ಲಿನ ಸೋರಾಂಗ್‌ನಲ್ಲಿ ಮೊಸಳೆಯೊಂದು 48 ವರ್ಷದ ವ್ಯಕ್ತಿಯನ್ನು ಕೊಂದು ಬಿಟ್ಟಿತು ಎಂಬ ಕಾರಣಕ್ಕೆ ಸ್ಥಳೀಯರು ಇಡೀ ಮೊಸಳೆಯ ವಂಶದ ಮೇಲೆಯೇ ಸೇಡು ತೀರಿಸಿಕೊಂಡಿದ್ದಾರೆ. ಮೊಸಳೆಗಳನ್ನು ಸಂರಕ್ಷಿಸುತ್ತಿರುವ ಫಾರ್ಮ್ನಲ್ಲಿದ್ದ ಬರೋಬ್ಬರಿ 300 ಮೊಸಳೆಗಳನ್ನು ಸ್ಥಳೀಯರು ಮನಬಂದಂತೆ ಹೊಡೆದು ಸಾಯಿಸಿದ್ದಾರೆ. ಸುಗಿಟೋ ಎಂಬ ವ್ಯಕ್ತಿ ತನ್ನ ಜಾನುವಾರುಗಳಿಗೆ ಮೇವು ಹುಡುಕಿಕೊಂಡು ಹೋದಾಗ, ಆಯತಪ್ಪಿ ಮೊಸಳೆಯ ಫಾರ್ಮ್ ನೊಳಗೆ ಬಿದ್ದಿದ್ದರು. ಸಹಜವಾಗಿಯೇ ಮೊಸಳೆಗಳು ಆತನನ್ನು ಕೊಂದುಹಾಕಿದ್ದವು. ಪರಿಹಾರದ ಭರವಸೆ ನೀಡಿದ್ದರೂ, ಜನ ಫಾರ್ಮ್ನಲ್ಲಿದ್ದ 4 ಇಂಚು ಉದ್ದದ ಮರಿಗಳನ್ನೂ ಬಿಡದೇ ಎಲ್ಲ ಮೊಸಳೆಗಳನ್ನೂ ಹತ್ಯೆಗೈದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next