Advertisement

Belagavi ಅಳವಾನ್ ಗಲ್ಲಿಯಲ್ಲಿ ಗುಂಪು ಘರ್ಷಣೆ; ಪೊಲೀಸರೆದುರೇ ತಲ್ವಾರ್ ಪ್ರದರ್ಶಿಸಿದ ಯುವಕರು

11:37 AM May 24, 2024 | Team Udayavani |

ಬೆಳಗಾವಿ: ಶಹಾಪುರದ ಅಳವಾನ್ ಗಲ್ಲಿಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಕಿಡಿಗೇಡಿಗಳು ಕಲ್ಲು ತೂರಾಟ, ತಲ್ವಾರ್ ಪ್ರದರ್ಶನ ಮಾಡಿ ಅಟ್ಟಹಾಸ ಮೆರೆದಿದ್ದಾರೆ.

Advertisement

ಸಿಸಿಟಿವಿಯಲ್ಲಿ ಕಲ್ಲು, ತಲ್ವಾರ್ (ಮಚ್ಚು) ಎಸೆಯುವ ದೃಶ್ಯ ಸೆರೆಯಾಗಿದೆ. ಪೊಲೀಸರ ಸಮ್ಮುಖದಲ್ಲಿಯೇ ತಲ್ವಾರ್ ಎಸೆದಿದ್ದಾರೆ.

ಒಂದು ಕೋಮಿನ ಗುಂಪಿನ ಯುವಕರು ಗಲಾಟೆ ನಡೆಸಿದ್ದಾರೆ. ಇದರಿಂದ ಭಯಭೀತರಾಗಿ ಹೊರಗೆ ಬಂದ ನಿವಾಸಿಗಳು ಪೊಲೀಸರು ಬಂದಾಗ ಅವರಿಗೆ ತಮ್ಮತ್ತ ಎಸೆದಿರುವ ತಲ್ವಾರ್ ತೋರಿಸಿದ್ದಾರೆ. ಮಹಿಳೆಯರು ಪೊಲೀಸ್ ಅಧಿಕಾರಿಗೆ ತಲ್ವಾರ್ ತೋರಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಲಾಠಿ ಹಿಡಿದು ಬಂದ ಇಬ್ಬರೂ ಪೊಲೀಸರೂ ಗಲಾಟೆಯಲ್ಲಿ ಸಿಲುಕಿ ಪರದಾಡಿದ್ದಾರೆ. ಒಂದು ಕೈಯಲ್ಲಿ ಮೊಬೈಲ್‌ ಹಿಡಿದು ಕೃತ್ಯ‌ ಎಸಗಿದವರ ವಿಡಿಯೋ ಚಿತ್ರೀಕರಣ ಮಾಡುತ್ತಾ ಅಸಹಾಯಕರಂತೆ ಓಡಾಡಿದರು.

ಬೆಳಗಾವಿ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next