Advertisement

Belagavi; ತುಂಬಿ ಹರಿಯುತ್ತಿದ್ದ ಘಟಪ್ರಭಾ ನದಿಗೆ ಮುಗುಚಿ ಬಿದ್ದ 10 ಜನರಿದ್ದ ಟ್ರಾಕ್ಟರ್

12:30 PM Jun 09, 2024 | Team Udayavani |

ಬೆಳಗಾವಿ/ಮೂಡಲಗಿ: ತುಂಬಿ ಹರಿಯುತ್ತಿದ್ದ ಘಟಪ್ರಭಾ ನದಿಗೆ 10 ಜನರಿದ್ದ ಟ್ರಾಕ್ಟರ್ ಮುಗುಚಿ ಬಿದ್ದ ಘಟನೆ ಅವರಾದಿ ನಂದಗಾಂವ ಬಳಿ ನಡೆದಿದೆ.

Advertisement

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದಲ್ಲಿ ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆಯ ನಂದಗಾಂವ್ ಗ್ರಾಮದ ಮಧ್ಯೆ ಇರುವ ಬ್ರಿಡ್ಜ್ – ಬ್ಯಾರೇಜ್ ಗೆ ಟ್ರೇಲರ್ ಸಮೇತ ಟ್ರಾಕ್ಟರ್ ನೀರಿಗೆ ಬಿದ್ದಿದೆ.

ಟ್ರಾಕ್ಟರ್ ಗಳಲ್ಲಿದ್ದವರು ಅವರಾದಿಯಿಂದ ನಂದಗಾಂವ್ ಗೆ ಕೂಲಿ ಕೆಲಸಕ್ಕೆಂದು‌ ತೆರಳುತ್ತಿದ್ದರು. ನೀರಿಗೆ ಬಿದ್ದಿರುವವರಲ್ಲಿ ಅದೃಷ್ಟವಶಾತ್ 9 ಜನ ಈಜಿ ಸಾವಿನ ದವಡೆಯಿಂದ ಪಾರಾಗಿದ್ದಾರೆ. ನೀರಲ್ಲಿ ಕಣ್ಮರೆಯಾಗಿರುವ ಓರ್ವನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಘಟನೆಯಿಂದ ಸ್ಥಳದಲ್ಲಿ ಸೂತಕದ ವಾತಾವರಣ ಉಂಟಾಗಿದೆ. ಸ್ಥಳಕ್ಕೆ ಕುಲಗೋಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next