Advertisement

ಯಾರ್ಯಾರ ಮನೆ ಕದ ನಾನ್ಯಾಕೆ ತಟ್ಟಲಿ: ಮೋಟಮ್ಮ ಗೆ ಎಂ.ಪಿ.ಕುಮಾರಸ್ವಾಮಿ ತಿರುಗೇಟು

12:26 PM Jun 16, 2022 | Team Udayavani |

ಬೆಂಗಳೂರು: ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು, ನಾನ್ಯಾಕೆ ಕಾಂಗ್ರೆಸ್ ಪಕ್ಷದ ಮನೆ ಬಾಗಿಲು ತಟ್ಟಲಿ ಎಂದು ಮಾಜಿ ಸಚಿವೆ ಮೋಟಮ್ಮನವರಿಗೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

Advertisement

ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ನಾಯಕರು ಪಕ್ಷ ಸೇರುತ್ತೇನೆಂದು ನನ್ನ ಹೆಸರು ಜಪಿಸಿದರೆ ಅದಕ್ಕೆ ನಾನು ಕಾರಣಕರ್ತನಲ್ಲ, ಹೊಣೆಗಾರನೂ ಅಲ್ಲ. ಭಾರತೀಯ ಜನತಾ ಪಾರ್ಟಿ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ, ಗೌರವಿಸಿದೆ. ಬಿಜೆಪಿಯಲ್ಲಿ ಮೂರು ಬಾರಿ ಶಾಸಕನಾಗಿದ್ದೇನೆ, ಇದು ಪಕ್ಷ ಕೊಟ್ಟ ಗೌರವವಾಗಿದ್ದು, ಇದನ್ನು ಅರ್ಥಮಾಡಿಕೊಳ್ಳದ  ಮೋಟಮ್ಮನವರು ಅರ್ಥಹೀನ ಹೇಳಿಕೆ ನೀಡಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ತಿಳಿಸದ್ದಾರೆ.

ಇನ್ನೇನು ಕೆಲ ದಿನಗಳಲ್ಲಿ ರಾಜ್ಯ ಸರ್ಕಾರದ ಮಂತ್ರಿಮಂಡಲ ರಚನೆ ಯಾಗಲಿದ್ದು, ನನಗೆ ಆಗದ ಕಾಣದ ಕೈಗಳು ನಿಮ್ಮ ಸಣ್ಣತನದ ಹೇಳಿಕೆಗಳಿಗೆ ಪ್ರಚೋದನೆ ನೀಡುವ ಮೂಲಕ ಸಚಿವ ಸ್ಥಾನ ತಪ್ಪಿಸುವ ಪ್ರಯತ್ನ ನಡೆಸಿದ್ದರೆ ಒಂದು ಅಸಾಧ್ಯವಾದದು ಎಂದು ತಿರುಗೇಟು ನೀಡಿದ್ದಾರೆ.

ಮಂತ್ರಿಮಂಡಲದ ರಚನೆಯ ಸಂದರ್ಭದಲ್ಲಿ ಇಲ್ಲಸಲ್ಲದ ಹೇಳಿಕೆಗಳನ್ನು ನಿಮ್ಮ ಮುಖಾಂತರ ಕೊಡಿಸುತ್ತಿದ್ದಾರೆ, ನಿಮ್ಮ ವ್ಯಕ್ತಿತ್ವಕ್ಕೆ ಇದು ಶೋಭೆ ತರುವುದಿಲ್ಲ, ನೀವು ನಿಜವಾದ ಜನಪರ ನಾಯಕಿಯಾಗಿದ್ದರೆ ನನ್ನ ವಿರುದ್ಧ ಚುನಾವಣೆ ಸ್ಪರ್ಧಿಸಿ ಗೆಲ್ಲಿ, ಆಗ ಇದಕ್ಕೆಲ್ಲ ಉತ್ತರ ಸಿಕ್ಕಂತಾಗುತ್ತದೆ. ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಸಂಪೂರ್ಣ ಮತದಾರರು ಹಾಗೂ ನನ್ನೆಲ್ಲ ನಾಯಕರು, ಕಾರ್ಯಕರ್ತ ಮಿತ್ರರ ಆಶೀರ್ವಾದ ಸದಾ ನನ್ನ ಮೇಲೆ ಇರುವುದು ನಿಮಗೆ ಸಹಿಸಿಕೊಳ್ಳಲು ಆಗುವುದಿಲ್ಲ. ನಿಮ್ಮ ಉದ್ದೇಶಪೂರ್ವಕ ಹೇಳಿಕೆಗಳಿಂದ ತಕ್ಷಣವೇ ಹಿಂದೆ ಸರಿಯುವುದು ಇನ್ನೂ ಶೋಬೆ ತರಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಕರ್ನಾಟಕದಲ್ಲಿ ನಿಮ್ಮ ಆಟ ನಡೆಯಲ್ಲ: ಬಿಜೆಪಿಗೆ ಸಿದ್ದರಾಮಯ್ಯ ಎಚ್ಚರಿಕೆ

Advertisement

ಮಾಜಿ ಸಚಿವೆ ಮೋಟಮ್ಮ ನಿನ್ನೆ ಮಾಧ್ಯಮದವರ ಜತೆ ಮಾತನಾಡಿ, ಪಕ್ಷದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡುವುದನ್ನು ವಿರೋಧಿಸುತ್ತೇನೆ. ಅವರು ಪಕ್ಷಕ್ಕೆ ಬಂದರೆ ಸರಿ ಇರುವುದಿಲ್ಲ. ಅವರಿಗೆ ಕೊಡುವ ಬದಲು ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿ ಎಂದು ಹೇಳಿಕೆ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next