ಮುಂಬೈ: ಮಹಾರಾಷ್ಟ್ರ ನವನಿರ್ಮಾಣ ಸೇನಾ(ಎಂಎನ್‌ಎಸ್)ದ ಮುಖ್ಯಸ್ಥರಾಗಿರುವ ರಾಜ್ ಠಾಕ್ರೆ ಅವರು ಜೂ.5ರಂದು ಕೈಗೊಳ್ಳಬೇಕಿದ್ದ ಅಯೋಧ್ಯೆ ಪ್ರವಾಸವನ್ನು ಮುಂದೂಡಿರುವುದಾಗಿ ಶುಕ್ರವಾರ ತಿಳಿಸಿದ್ದಾರೆ.
ರಾಜ್ ಅಯೋಧ್ಯೆ ಪ್ರವಾಸವನ್ನು ಖಂಡಿಸಿ, ಉತ್ತರ ಪ್ರದೇಶದಲ್ಲಿ ಬಿಜೆಪಿಯವರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ ಪ್ರವಾಸ ಮುಂದೂಡಲಾಗಿದೆ.
ಈ ಬಗ್ಗೆ ರಾಜ್ ಟ್ವೀಟ್ ಮಾಡಿದ್ದು, ಪ್ರವಾಸದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮೇ 22ರಂದು ಪುಣೆಯಲ್ಲಿ ನಡೆಯಲಿರುವ ಎಂಎನ್‌ಎಸ್ ರ್‍ಯಾಲಿಯಲ್ಲಿ ತಿಳಿಸುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ:2024ರಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರತಿಷ್ಠೆ: ವಿಶ್ವಪ್ರಸನ್ನತೀರ್ಥ ಸ್ವಾಮೀಜಿ
2008ರಲ್ಲಿ ಉತ್ತರ ಭಾರತದ ಜನರಿಗೆ ಅವಮಾನ ಮಾಡಿದ್ದರು ಎನ್ನುವ ಆರೋಪದ ಹಿನ್ನೆಲೆ ರಾಜ್ ಅವರು ಜನರಿಗೆ ಬಹಿರಂಗ ಕ್ಷಮೆ ಯಾಚಿಸುವವರೆಗೆ ಅಯೋಧ್ಯೆಗೆ ಬರುವಂತಿಲ್ಲ ಎಂದು ಬಿಜೆಪಿ ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದೆ.