Advertisement

ಆರ್ಯಾಪು ಪ್ರಥಮ; ವೇಣೂರು ದ್ವಿತೀಯ

10:06 AM Aug 07, 2018 | |

ವೇಣೂರು: ಈ ಸಾಲಿನ ಮಹಾತ್ಮಾ ಗಾಂಧಿ ರಾ. ಗ್ರಾ. ಉದ್ಯೋಗ ಖಾತರಿ ಯೋಜನೆ ಅನುಷ್ಠಾನದಲ್ಲಿ ವೇಣೂರು ಗ್ರಾ. ಪಂ. ಬೆಳ್ತಂಗಡಿ ತಾಲೂಕಿಗೆ ಪ್ರಥಮ ಸ್ಥಾನ, ದ.ಕ. ಜಿಲ್ಲೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದೆ. ಯೋಜನೆ ಮೂಲಕ ದೊಡ್ಡ ಮಟ್ಟದ ಕಾಮಗಾರಿ ಗಳನ್ನೇ ನಿರ್ವಹಿಸಿ ಸಂಪೂರ್ಣ ಸದ್ಬಳಕೆ ಮಾಡಿ ಕೊಂಡಿದೆ. ಹಿಂದೂ ರುದ್ರಭೂಮಿ, ಅಂಗನವಾಡಿ ಕಟ್ಟಡ, 10 ರಸ್ತೆಗಳಿಗೆ ಕಾಂಕ್ರೀಟ್‌, 5 ಮೋರಿ, ಕಿಂಡಿ ಅಣೆಕಟ್ಟು, 2 ನೆಡು ತೋಪು ಕಾಮಗಾರಿ, ತಡೆಗೋಡೆ, 4 ಸಾರ್ವಜನಿಕ ಕೊಳವೆ ಬಾವಿ ಹಾಗೂ ಬಾವಿಗಳಿಗೆ ಜಲ ಮರುಪೂರಣ, 29 ಸಾರ್ವಜನಿಕ ಹಾಗೂ ಖಾಸಗಿ ಬಾವಿ ರಚನೆ, 30 ದನದ ಹಟ್ಟಿ, 135 ವಸತಿ, 40 ಮಂದಿಯ ಜಮೀನಿನಲ್ಲಿ ಅಡಿಕೆ ಗಿಡ ನಾಟಿ, 20 ಕಡೆ ಕಾಳುಮೆಣಸು ಗಿಡ ನಾಟಿ ಹಾಗೂ 7 ಶೌಚಾಲಯ ನಿರ್ಮಾಣ ನಡೆಸಲಾಗಿದೆ. ಒಟ್ಟು 44,12,384 ರೂ. ವ್ಯಯಿಸಿ 18,696 ಮಾನವ ಕೆಲಸದ ದಿನಗಳನ್ನು ಸೃಜಿಸಲಾಗಿದೆ. 34,00,000 ರೂ. ಕಾಮಗಾರಿಗೆ ಸಾಮಗ್ರಿ ಪೂರೈಸಲಾಗಿದೆ. ಒಟ್ಟು 70,34,384 ರೂ. ಖರ್ಚು ಮಾಡಿ ಸಾಧನೆ ಮಾಡಿದೆ.

Advertisement

ಸಾರ್ವಜನಿಕ ಕಾಮಗಾರಿ
ಸಾರ್ವಜನಿಕ ಕೊಳವೆಬಾವಿ ಮರು ಪೂರಣ ಘಟಕ, ಕಿಂಡಿ ಅಣೆಕಟ್ಟು ತಡೆಗೋಡೆ ನಿರ್ಮಾಣ, ರಸ್ತೆ ಕಾಂಕ್ರೀಟು ಕೆಲಸ, ರುದ್ರಭೂಮಿ ಅಭಿವೃದ್ಧಿ, ಬಾವಿ ನಿರ್ಮಾಣ, ನೆಡುತೋಪು ರಚನೆ ಹಾಗೂ ಮೋರಿ ರಚನೆ ನಡೆಸಲಾಗಿದೆ.

ಖಾಸಗಿ ಕಾಮಗಾರಿ
ಖಾಸಗಿ ಬಾವಿ ರಚನೆ, ತೋಟ ಗಾರಿಕೆ ಅಭಿವೃದ್ಧಿ, ದನದ ಹಟ್ಟಿ ನಿರ್ಮಾಣ, ವಸತಿ ನಿರ್ಮಾಣ, ಕೊಳವೆ ಬಾವಿ ಮರುಪೂರಣ ಘಟಕ, ಶೌಚಾಲಯ ನಿರ್ಮಾಣ ನಡೆಸಲಾಗಿದೆ.

ಆರ್ಯಾಪು ಗ್ರಾ.ಪಂ. ಪ್ರಥಮ
ಪುತ್ತೂರು: ಏಳು ವೆಂಟೆಡ್‌ ಡ್ಯಾಂ ನಿರ್ಮಾಣ ಮಾಡಿರುವ ಪುತ್ತೂರು ತಾ.ಪಂ.ನ ಆರ್ಯಾಪು ಗ್ರಾಮ ಪಂಚಾಯತ್‌ ಉದ್ಯೋಗ ಖಾತರಿ ಯೋಜನೆ ಅನುಷ್ಠಾನದಲ್ಲಿ ಪ್ರಥಮ ಸ್ಥಾನದಲ್ಲಿ ಕಾಣಿಸಿಕೊಂಡಿದೆ.
ಒಂದು ಡ್ಯಾಂಗೆ 5 ಲಕ್ಷ ರೂ.ಗಳಂತೆ ಒಟ್ಟು 35 ಲಕ್ಷ ರೂ.ಗಳನ್ನು ವೆಂಟೆಡ್‌ ಡ್ಯಾಂಗೆ ಬಳಸಿಕೊಳ್ಳಲಾಗಿದೆ. ವೆಂಟೆಡ್‌ ಡ್ಯಾಂ ಸೇರಿದಂತೆ ಶಾಲಾ ಆವರಣ ಗೋಡೆ, ಕಾಂಕ್ರೀಟ್‌ ರಸ್ತೆ, ಶಾಲಾ ಆವರಣದಲ್ಲಿ ಕೃಷಿ, ಬಾವಿ ತೋಡಿಸುವ ಕೆಲಸಗಳನ್ನು ಉದ್ಯೋಗ ಖಾತರಿಯಡಿ ಮಾಡಲಾಗಿದೆ.

ಬಾವಿ ತೋಡಿ 70 ಸಾವಿರ ರೂ. ಪಡೆಯಿರಿ
ತೆರೆದ ಬಾವಿಗಳನ್ನು ಪ್ರೋತ್ಸಾಹಿಸುವುದಕ್ಕಾಗಿ ಕುಡಿಯುವ ನೀರು ಯೋಜನೆ ಯಡಿ ಬಾವಿ ತೆಗೆಸಿದರೆ ಎನ್‌ಆರ್‌ಇಜಿ ಅಡಿ 70 ಸಾವಿರ ರೂ. ಅನುದಾನವನ್ನು ನೀಡಲಾಗುತ್ತದೆ. ಗುಡ್ಡ ಪ್ರದೇಶದಲ್ಲಿ ತೆರೆದ ಬಾವಿ ತೆಗೆಯಲು 1 ಲಕ್ಷ ರೂ.ವರೆಗೂ ಖರ್ಚು ಬರುತ್ತದೆ. ಅನುದಾನ ಪಡೆಯಲು ಸರಕಾರದ ನಿಯ ಮಾನು ಸಾರ ಬಾವಿ ನಿರ್ಮಿಸಬೇಕಾಗುತ್ತದೆ. ಇದರಿಂದ ಸ್ಥಳೀಯ ಕಾರ್ಮಿಕರಿಗೂ ಉದ್ಯೋಗ ದೊರಕಿದಂತಾಗುತ್ತದೆ.

Advertisement

ಜಂಕ್ಷನ್‌ಗಳ ಅಭಿವೃದ್ಧಿಗೂ ಒತ್ತು
ಗ್ರಾಮಸ್ಥರ ಸಹಕಾರದಲ್ಲಿ ಯೋಜನೆಯ ಸಂಪೂರ್ಣ ಸದ್ಬಳಕೆ ಮಾಡಿದ್ದು, ಜಿಲ್ಲೆಗೆ ದ್ವಿತೀಯ ಸ್ಥಾನ ಗಳಿಸಿರುವುದು ವೇಣೂರಿಗೆ ಹೆಮ್ಮೆ. ಪಂ. ಅಧ್ಯಕ್ಷರು, ಸದಸ್ಯರು, ಪಿಡಿಒ ಹಾಗೂ ಸಿಬಂದಿಯ ಸಹಕಾರದಿಂದ ಇದು ಸಾಧ್ಯ ವಾಗಿದೆ. ಮುಂದಿನ ದಿನಗಳಲ್ಲಿ ಜಂಕ್ಷನ್‌ಗಳ ಅಭಿವೃದ್ಧಿಗೂ ಒತ್ತು ನೀಡುತ್ತೇವೆ.
ಅರುಣ್‌ ಕ್ರಾಸ್ತ, ಉಪಾಧ್ಯಕ್ಷ, ವೇಣೂರು ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next