Advertisement

ಮಂಗಳೂರು : ಎಚ್ಚರ !, ನಕಲಿ ದಾಖಲೆ ನೀಡಿ ಅಪಾರ್ಟ್‌ಮೆಂಟ್‌ ಬಾಡಿಗೆಗೆ

04:46 PM Feb 03, 2022 | Team Udayavani |

ಮಂಗಳೂರು: ನಗರದ ಕೆಎಸ್‌ ರಾವ್‌ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ ಬಾಡಿಗೆಗೆ ನಕಲಿ ದಾಖಲೆ ನೀಡಿ ಮಹಿಳೆಯೊಬ್ಬರಿಗೆ ವಂಚಿಸಿದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಕರಂಗಲ್ಪಾಡಿಯ ರಾಧಾ ಮೆಡಿಕಲ್ಸ್‌ನಲ್ಲಿ ಉದ್ಯೋಗಿಯಾಗಿರುವ ಸಂತ್ರಸ್ತೆ ಪ್ರಿಯಾ ಕೆ ಆರ್ ನೀಡಿದ ದೂರಿನ ಮೇರೆಗೆ ಪೊಲೀಸರು ಫೆಬ್ರವರಿ 1 ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರದೀಪ್ ಅಲಿಯಾಸ್ ದೀಪಕ್ ಸಾವಿಯೋ ಅಂದ್ರಾದೆ ಮತ್ತು ಇಮ್ತಿಯಾಜ್ ನನ್ನ ಬಂಧಿಸಿದ್ದಾರೆ. ಆರೋಪಿಗಳು, ಈ ಹಿಂದೆ ಇದೇ ರೀತಿಯ ವಂಚನೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದರು ಮತ್ತು ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.

ದೂರಿನ ಪ್ರಕಾರ, ಪ್ರಿಯಾ ಅವರು ಜೂನ್ 2020 ರಲ್ಲಿ ಎರಡು ವರ್ಷಗಳ ಕಾಲ ತನ್ನ ಉದ್ಯೋಗದ ಸ್ಥಳಕ್ಕೆ ಸಮೀಪವಿರುವ ಮನೆಯನ್ನು ಹುಡುಕುತ್ತಿದ್ದರು. ಆರೋಪಿಗಳಾದ ಪ್ರದೀಪ್ ಮತ್ತು ಇಮ್ತಿಯಾಜ್ ಮಧ್ಯವರ್ತಿಗಳಾಗಿ ಕೆಎಸ್ ರಾವ್ ರಸ್ತೆಯಲ್ಲಿ ಬಾಡಿಗೆಗೆ ಅಪಾರ್ಟ್ ಮೆಂಟ್ ತೋರಿಸಿದ್ದರು. ಗುತ್ತಿಗೆ ಮೊತ್ತವನ್ನು 2 ವರ್ಷಗಳ ಅವಧಿಗೆ ರೂ 5 ಲಕ್ಷಕ್ಕೆ ಮಾತುಕತೆ ನಡೆಸಲಾಯಿತು. ಡೀಲ್‌ಗಾಗಿ ನಕಲಿ ದಾಖಲೆಗಳನ್ನು ತಯಾರಿಸಿ ಮತ್ತೊಬ್ಬ ವ್ಯಕ್ತಿಯನ್ನು ಫ್ಲಾಟ್‌ನ ಮಾಲೀಕ ಎಂದು ಪರಿಚಯಿಸಿಕೊಂಡಿದ್ದರು.

ಫೆಬ್ರವರಿ 2021 ರಲ್ಲಿ ಫ್ಲಾಟ್‌ನ ನಿಜವಾದ ಮಾಲೀಕರು ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿದಾಗ ಪ್ರಿಯಾ ಅವರು ಆಘಾತಕ್ಕೊಳಗಾದಳು. ಆಗ ಅವರು ಮೋಸ ಹೋಗಿರುವುದನ್ನು ಅರಿತು ಪೊಲೀಸರನ್ನು ಸಂಪರ್ಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next