Advertisement
ನಂತರ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ಎಂ.ಎಲ್.ಸಿ.ವಿಶ್ವನಾಥರು ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ರೋಗಿಗಳ ಒತ್ತಡದ ನಡುವೆ ವೈದ್ಯರು ಕೆಲಸ ಮಾಡುವ ಸ್ಥಿತಿ ಇತ್ತು. ಇದಕ್ಕಾಗಿ ಪ್ರತ್ಯೇಕ ಫೀವರ್ ಕ್ಲಿನಿಕ್ ಕಟ್ಟಡ ಹಾಗೂ ಸುಸಜ್ಜಿತ ಆಂಬುಲೆನ್ಸ್ ಅತ್ಯವಶ್ಯದ ಬಗ್ಗೆ ಇಲ್ಲಿನ ವೈದ್ಯರು ಪ್ರಸ್ತಾಪಿಸಿದ್ದರು.
Related Articles
Advertisement
ವೈದ್ಯರ ಸೇವೆ ಅನನ್ಯ:
ಕೊರೊನಾ ನಿಯಂತ್ರಣದಲ್ಲಿ ಇಲ್ಲಿನ ಆಸ್ಪತ್ರೆ ಹಾಗೂ ತಾಲೂಕಿನ ಎಲ್ಲ ವೈದ್ಯರು, ಆರೋಗ್ಯ,ಅಂಗನವಾಡಿ-ಆಶಾ ಕಾರ್ಯಕರ್ತರ ಬದ್ದತೆಯ ನಿರ್ವಹಣೆಯಿಂದ ಕೊರೊನಾ ನಿಯಂತ್ರಣಗೊಳಿಸಿದ್ದರು. ಅಲ್ಲದೆ ಲಸಿಕೆ ನೀಡುವಲ್ಲಿ ಮೊದಲ ಡೋಸ್ ಶೇ.೯೮ರಷ್ಟು, ಎರಡನೇ ಡೋಸ್ ಶೇ.೮೩ರಷ್ಟು ಸಾಧನೆಗೈದಿದ್ದಾರೆಂದು ಪ್ರಶಂಸಿಸಿ, ಮುಂದಿನ ಕೊರೊನಾ ನಿಯಂತ್ರಣಕ್ಕೆ ನಾವೆಲ್ಲರೂ ಸಹಕರಿಸುವ ಜೊತೆಗೆ ಜನರು ತಮ್ಮನ್ನು ತಾವು ಕಾಪಾಡಿಕೊಳ್ಳಲು ಅಗತ್ಯ ಮುನ್ನೆಚ್ಚರಿಕೆವಹಿಸುವಂತೆ ಮನವಿ ಮಾಡಿದರು.
ಶೀಘ್ರ ಆಕ್ಸಿಜನ್ ಪ್ಲಾಂಟ್ ಉದ್ಘಾಟನೆ:
ಆಸ್ಪತ್ರೆ ಆವರಣದಲ್ಲಿ ಸುಮಾರು 50 ಲಕ್ಷರೂ ವೆಚ್ಚದಲ್ಲಿ ನಿರ್ಮಿಸಿರುವ ಆಕ್ಸಿಜನ್‌ಪ್ಲಾಂಟ್ ಹಾಗೂ ಐ.ಟಿ.ಸಿ.ಕಂಪನಿ ನೆರವಿನ ಮತ್ತೊಂದು ಆಕ್ಸಿಜನ್ ಪ್ಲಾಂಟ್ ಕಾಮಗಾರಿ ಮುಗಿದಿದ್ದು, ಎರಡೂ ಪ್ಲಾಂಟ್ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಶೀಘ್ರ ಉದ್ಘಾಟಿಸಲಾಗುವುದೆಂದರು. ಇದೇ ವೇಳೆ ಹನಗೋಡು ಆಸ್ಪತ್ರೆಗೆ ವೈಯಕ್ತಿಕವಾಗಿ ನೀಡಿರುವ ಆಂಬುಲೆನ್ಸನ್ನು ಆರೋಗ್ಯ ಇಲಾಖೆ ಸುಪರ್ದಿಗೆ ತೆಗೆದುಕೊಂಡು ನಿರ್ವಹಣೆ ಮಾಡುವಂತೆ ಡಿಎಚ್‌ಓ ಡಾ.ಕೆ.ಎಚ್.ಪ್ರಸಾದ್‌ರಿಗೆ ಸೂಚಿಸಿದರು.
ಆಸ್ಪತ್ರೆ ಆಡಳಿತಾಧಿಕಾರಿ ಡಾ.ಸರ್ವೇಶ್ ರಾಜೇಅರಸ್ ಮಾತನಾಡಿ ಕೊರೊನಾಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಫೀವರ್ ಕ್ಲಿನಿಕ್ ಅವಶ್ಯವಿತ್ತು. ಇಲ್ಲಿ ಮೂರು ಕೊಠಡಿಗಳಿದ್ದು. ಪ್ರತ್ಯೇಕವಾಗಿ ಪರೀಕ್ಷೆ, ಸಲಹೆ ನೀಡಲು ಸಹಕಾರಿಯಾಗಿದೆ. ಆಂಬುಲೆನ್ಸ್ ನ್ನು ಅವಶ್ಯಕತೆ ಇದ್ದುದ್ದನ್ನು ಮನವರಿಕೆ ಮಾಡಿಕೊಟ್ಟ ಮೇರೆಗೆ ಸುಸಜ್ಜಿತ ಆಂಬುಲೆನ್ಸ್ ನೀಡಿರುವುದು ಸಾಕಷ್ಟು ಅನುಕೂಲವಾಗಿದೆ ಎಂದರು.
ಟಿಎಚ್‌ಓ ಡಾ.ಕೀರ್ತಿಕುಮಾರ್ ಮಾತನಾಡಿದರು. ಸಭೆಯಲ್ಲಿ ತಹಸೀಲ್ದಾರ್ ಡಾ.ಅಶೋಕ್, ನಗರಸಭೆ ಅಧ್ಯಕ್ಷೆ ಸೌರಭಸಿದ್ದರಾಜು, ಸದಸ್ಯ ಹರೀಶ್, ಹುಡಾ ಅಧ್ಯಕ್ಷ ಗಣೇಶ್‌ಕುಮಾರಸ್ವಾಮಿ, ಬಿಜೆಪಿ ತಾಲೂಕು ಅಧ್ಯಕ್ಷ ಹಳ್ಳದಕೊಪ್ಪಲುನಾಗಣ್ಣಗೌಡ, ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ಕೆಂಪೇಗೌಡ, ಮುಖಂಡ ಕಣಗಾಲುರಾಮೇಗೌಡ ಇದ್ದರು.
ಮಕ್ಕಳ ಔಷಧಿಗೆ 10 ಲಕ್ಷ: ಇತ್ತೀಚೆಗೆ ಕೊರೊನಾ ಮಕ್ಕಳನ್ನು ಬಾಧಿಸುತ್ತಿದ್ದು, ಮಕ್ಕಳ ಔಷಧ ಕೊರತೆ ಬಗ್ಗೆ ಮಾಹಿತಿ ನೀಡಿದ್ದು. ತಮ್ಮ ಅನುದಾನದಡಿ ಮಕ್ಕಳ ಔಷಧಕ್ಕಾಗಿ ೧೦ ಲಕ್ಷರೂ ನೀಡುವುದಾಗಿ ಎಂ.ಎಲ್.ಸಿ.ವಿಶ್ವನಾಥರು ತಿಳಿಸಿದರು.