Advertisement

ಡಿಸಿಎಂ ಅಶ್ವಥ ನಾರಾಯಣ ರಾಜೀನಾಮೆ ನೀಡಬೇಕು: ಪರಿಷತ್ ಸದಸ್ಯ ಎಸ್.ರವಿ ಕಿಡಿ

12:51 PM Apr 24, 2020 | keerthan |

ರಾಮನಗರ: ಸೋಂಕು ಇರುವ ಸಾಧ್ಯತೆ ಇದ್ದರೂ ಬೆಂಗಳೂರು ಪಾದರಾಯನಪುರದ ಗಲಭೆ ಆರೋಪಿಗಳನ್ನು ಗ್ರೀನ್ ಜೋನ್ ನಲ್ಲಿರುವ ರಾಮನಗರದ ಕಾರಾಗೃಹದಲ್ಲಿರಿಸಲು ಜಿಲ್ಲಾ ಉಸ್ತುವಾರಿ ಸಚಿವ ಅಶ್ವಥ್ ನಾರಾಯಣ ಸಹ ಕಾರಣ. ಇಂತಹ ನಾಲಾಯಕ್, ಅಸಮರ್ಥ ಸಚಿವರು ತಕ್ಷಣ ರಾಜೀನಾಮೆ ಕೊಡಬೇಕು ಎಂದು ಎಂ.ಎಲ್.ಸಿ.  ಎಸ್.ರವಿ ಕಿಡಿಕಾರಿದ್ದಾರೆ.

Advertisement

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಆರೋಪಿಗಳ ಪೈಕಿ ಇಬ್ಬರಿಗೆ ಸೋಂಕು ಪತ್ತೆಯಾಗಿದೆ. ಎಲ್ಲಾ ಆರೋಪಿಗಳನ್ಬು ತಕ್ಷಣ ಶಿಫ್ಟ್ ಮಾಡದಿದ್ದರೆ ಹೋರಾಟ ಅನಿವಾರ್ಯ ವಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಕಾರಾಗೃಹದ ಪಕ್ಕದಲ್ಲೇ ಡಿಸಿ ಕಚೇರಿ ಕೂಡ ಇದ್ದು ಸೋಂಕು ಹರಡಿರುವ ಸಾಧ್ಯತೆ ಇರುವ ಕಾರಣ ತಕ್ಷಣ ಇಡಿ ಕಟ್ಟಡವನ್ನು ಸೀಲ್ ಡೌನ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಎಂ.ಎಲ್.ಸಿ. ಸಿ.ಎಂ.ಲಿಂಗಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ  ಗಂಗಾಧರ್, ಕಾಂಗ್ರೆಸ್ ಜಿಲ್ಲಾ ಟಾಸ್ಕ್ ಫೋರ್ಸ್ ಅಧ್ಯಕ್ಷ ಇಕ್ಬಾಲ್ ಹುಸೇನ್, ಕೆಪಿಸಿಸಿ ಕಾರ್ಯದರ್ಶಿ ಸೈಯದ್ ಜಿಯಾಉಲ್ಲಾ, ಪ್ರಮುಖರಾದ ಕೆ.ರಮೇಶ್, ಗಾಣಕಲ್ ನಟರಾಜ್, ನರಸಿಂಹೂರ್ತಿ, ರಾಮಚಂದ್ರು, ಚೇತನ್ ಕುಮಾರ್, ಕೃಷ್ಣಮೂರ್ತಿ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next