Advertisement
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಶಾಸಕ ಎಚ್.ಪಿ.ಮಂಜುನಾಥರು ಲೋಕೋಪಯೋಗಿ ಇಲಾಖೆ ಇ.ಇ.ಕಚೇರಿ ಎದುರು ಧರಣಿ ನಡೆಸಿರುವುದು ಸರಿಯಲ್ಲ. ಕಾರ್ಯಪಾಲಕ ಇಂಜಿನಿಯರ್ ಅನುಷ್ಟಾನಗೊಳಿಸುವ ಅಧಿಕಾರಿಯಷ್ಟೆ, ಅನುದಾನ ಬರದಿದ್ದಲ್ಲಿ ಅವರೇನು ಮಾಡುತ್ತಾರೆ. ಕೊರೊನಾದಿಂದಾಗಿ ಸರಕಾರದ ಅನುದಾನ ತಡವಾಗುತ್ತಿದೆ. ಈ ಬಗ್ಗೆ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿ ಸರಕಾರಕ್ಕೆ ಚುರುಕು ಮುಟ್ಟಿಸಬೇಕು. ನಾನು ಸಹ ತಾಲೂಕಿನ ಪರವಾಗಿರುವವನು, ಈತಾಲೂಕಿನ ಜನರ ಋಣ ನನ್ನ ಮೇಲಿದೆ. ತಾವು ರಾಜಿನಾಮೆ ನೀಡಿದ್ದರಿಂದಾಗಿ ಶಾಸಕರಾಗಿದ್ದೀರಾ. ಶಾಸಕರು ಜನಹಿತಕ್ಕಾಗಿ ದುಡಿಯಬೇಕು. ಅದುಬಿಟ್ಟು ಧರಣಿ ನಡೆಸುವುದು ಸರಿಯಲ್ಲ. ಅನ್ಯಾಯವಾಗಿದ್ದಲ್ಲಿ ಇಬ್ಬರೂ ಸೇರಿ ಪ್ರತಿಭಟನೆ ಮಾಡೋಣ, ಕ್ಷೇತ್ರದ ಅಭಿವೃದ್ದಿಗೆ ಶಾಸಕರು, ತಾವು ಸಂಸದರು ಒಟ್ಟಾಗಿ ಸೇರಿ ಅಭಿವೃದ್ದಿ ಪಡಿಸೋಣವೆಂದು ಸಲಹೆ ನೀಡಿದರು.
Related Articles
Advertisement
ಇದೀಗ ಮೈಸೂರಿನಲ್ಲಿ ಅಳವಡಿಸುತ್ತಿರುವ ಗ್ಯಾಸ್ ಪೈಪ್‌ಲೈನ್ ಕಾಮಗಾರಿಗೆ ಶಾಸಕರಾದ ನಾಗೇಂದ್ರ, ರಾಮದಾಸ್ ವಿರೋಧ ವ್ಯಕ್ತಪಡಿಸುತ್ತಿರುವುದು ತರವಲ್ಲ, ಜಿಯೋ ಕಂಪನಿಯವರು ರಸ್ತೆ ಅಗೆದಾಗ ಎಲ್ಲಿಗೋಗಿದ್ರು ಇವರೆಲ್ಲಾ. ಇದೊಂದು ಗ್ರಾಹಕರ ಸ್ನೇಹಿ ಯೋಜನೆಯಾಗಿದ್ದು, ಸಾವಿರ ರೂನ ಸಿಲೆಂಡರ್ 500 ರೂಗೆ ಗ್ಯಾಸ್ ದೊರೆಯಲಿದೆ ಇದರಿಂದ ಬಡಜನರಿಗೆ ಅನುಕೂಲವಾಗಲಿದೆ. ಪ್ರತಿಷ್ಟೆ ಬಿಟ್ಟು ಪೈಪ್ ಲೈನ್ ಅಳವಡಿಸಲು ಸಹಕರಿಸಬೇಕು.
ರಸ್ತೆ ಗುಂಡಿ ಬೀಳಲಿದೆ ಎಂಬುದರಲ್ಲಿ ಅರ್ಥವಿಲ್ಲ. ಗ್ಯಾಸ್‌ಲೈನ್‌ನ್ನು ಸಂಸದ ನಾನೇ ತಂದಿದ್ದೇನೆAದು ಕೊಚ್ಚಿಕೊಳ್ಳುವುದರಲ್ಲಿ ಅರ್ಥವಿಲ್ಲ. ಇದು ಸಂಸದರ ಯೋಜನೆಯಲ್ಲ, ಕೇಂದ್ರದ ಮೋದಿ ಸರಕಾರದ ನಿರಂತರ ಯೋಜನೆಗಳಲ್ಲೊಂದು ಎಂದು ಸಂಸದರ ಕಾಲೆಳೆದರು.
2023 ರ ಚುನಾವಣೆ ಬೊಮ್ಮಾಯಿ ನೇತೃತ್ವ: ಮುಖ್ಯ ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಯತ್ನಾಳ್ ಮತ್ತಿತರರಿಂದ ಸರಕಾರಕ್ಕೆ ತೊಂದರೆ ಇದೆಯೇ ಎಂಬ ಪ್ರಶ್ನೆಗೆ ಹಾಗೇನೂ ಆಗಲ್ಲ. ಬಸವರಾಜ ಬೊಮ್ಮಯಾಯಿಯವರು ಕೋವಿಡ್-೧೯ ಸಂಕಷ್ಟದಲ್ಲೂ ಸಾಕಷ್ಟು ಅಭಿವೃದ್ದಿಗೆ ಒತ್ತು ನೀಡಿದ್ದಾರೆ. ಬೊಮ್ಮಾಯಿ ನೇತೃತ್ವದ ಸರಕಾರ ಅವಧಿ ಪೂರೈಸಲಿದೆ. 2023 ರ ಚುನಾವಣೆಯೂ ಬೊಮ್ಮಾಯಿಯವರ ನೇತೃತ್ವದಲ್ಲೇ ನಡೆಯಲಿದೆ.
ಯಾರೇನು ಪತಿವ್ರತಾ ಶಿರೋಮಣಿಗಳಲ್ಲ:
ತಾವು ಹಿಂದೆ 17 ಪಕ್ಷಾಂತರ ಶಾಸಕರ ನೇತೃತ್ವ ವಹಿಸಿದ್ದು, ಇದೀಗ ಮತ್ತೆ ಪಕ್ಷಾಂತರ ಮಾತು ಕೇಳಿ ಬರುತ್ತಿದೆಯಲ್ಲಾ ಎಂಬ ಪ್ರಶ್ನೆಗೆ ಶಾಸಕರು ನಮ್ಮ ಪಕ್ಷ ಸೇರ್ತಾರೆ ಎಂದು ಹೇಳಿಕೆ ನೀಡುವ ರಮೇಶ್ ಜಾರಕಿಹೋಳಿ, ಸಿದ್ದರಾಮಯ್ಯ, ನಮ್ಮ ಬಿಜೆಪಿ ಅಧ್ಯಕ್ಷರು ಸೇರಿದಂತೆ ಪಕ್ಷಾಂತರ ಕುರಿತು ಮಾತನಾಡುತ್ತಿರುವ ಪತೀವ್ರತಾ ಶಿರೋಮಣಿಗಳ ಬಗ್ಗೆ ಶೀಘ್ರದಲ್ಲೇ ಬುತ್ತಿ ಬಿಚ್ಚಿಡಲಿದ್ದೇನೆ ಯಾರೇನು ಪತಿವ್ರತಾಶಿರೋಮಣಿಗಳಾ ಎಂದು ಪಕ್ಷಾಂತರ ಹೇಳಿಕೆ ನೀಡುವವರ ಬಗ್ಗೆ ತೀಷ್ಣವಾಗಿ ಪ್ರತಿಕ್ರಿಯಿಸಿದರು.
ಸುದ್ದಿಗೋಷ್ಟಿಯಲ್ಲಿ ಹುಡಾ ಅಧ್ಯಕ್ಷ ಗಣೇಶ್‌ಕುಮಾರಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷ ಶಿವಕುಮಾರ್ ಇದ್ದರು.