Advertisement

ಯಾವ ಸುಖಕ್ಕಾಗಿ ಬಜೆಟ್ ಅಧಿವೇಶನ ನಡೆಸುತ್ತಿದ್ದೀರಿ: ಎಂಎಲ್‌ಸಿ ವಿಶ್ವನಾಥ್ ಪ್ರಶ್ನೆ

12:41 PM Mar 19, 2021 | Team Udayavani |

ಮೈಸೂರು: ಬಜೆಟ್ ಅಧಿವೇಶನದಲ್ಲಿ ಅರ್ಥಪೂರ್ಣವಾದ ಚರ್ಚೆ ನಡೆಯುತ್ತಿಲ್ಲ. ಯಾಂತ್ರಿಕವಾಗಿ ಸದನ ನಡೆಯುತ್ತಿದೆ. ಸದನ ಮುಗಿದರೆ ಸಾಕು ಎನ್ನುವ ರೀತಿ ಸದನದ ಚರ್ಚೆ ನಡೆಯುತ್ತಿದೆ. ಯಾವ ಸುಖಕ್ಕಾಗಿ ಬಜೆಟ್ ಅಧಿವೇಶನ ನಡೆಸುತ್ತಿದ್ದೀರಿ ಎಂದು ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋರ್ಟ್‌ಗೆ ಮನವಿ ಸಲ್ಲಿಸಿರುವ ಆರು ಸಚಿವರಿಂದ ಉತ್ತರ ಪಡೆಯುವುದಿಲ್ಲ ಎಂಬ ಕಾಂಗ್ರೆಸ್ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರು ಪಕ್ಷಾಂತರಿಗಳು ಎನ್ನುವ ಕಾರಣಕ್ಕೆ ಅವರಿಂದ ಕಾಂಗ್ರೆಸ್ ಉತ್ತರ ಪಡೆಯುತ್ತಿಲ್ಲ. ಕೋರ್ಟ್‌ಗೆ ಹೋದ ತಕ್ಷಣ ಆ ಸಚಿವರು ಅಸ್ಪ್ರಶ್ಯರೆ?  ಯಾರ ಮಾನ ಯಾರು ಏನೇನು ಇಟ್ಟುಕೊಂಡು ಕಳೆಯುತ್ತಾರೋ ಗೊತ್ತಿಲ್ಲ. ನಾಳೆ ಸುಖಾಸುಮ್ಮನೇ ಮರ್ಯಾದೆ ಕಳೆದುಕೊಳ್ಳಬಾರದೆಂದು ಕೋರ್ಟ್‌ಗೆ ಹೋಗಿದ್ದಾರೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ಸಚಿವ ಸುಧಾಕರ್ ಮನೆಮುಂದೆ ರಸ್ತೆಯಲ್ಲೇ ಗನ್ ಮ್ಯಾನ್- ಡ್ರೈವರ್ ಹೊಡೆದಾಟ!

ರಾಜಕಾರಣ ಎಂಬುದು ಕೇವಲ ಕೆಸರೆರಾಚಾಟವಾಗಿದೆ. ಸಚಿವರ ಉತ್ತರ ಯಾವುದೋ ಪಕ್ಷಕ್ಕಲ್ಲ, ಅದು ರಾಜ್ಯದ ಜನರಿಗೆ. ನಿಮ್ಮದು ಏತಿ ಅಂದರೆ ಕೋತಿ ಎಂಬಂತಿದೆ. ನಿಮಗೆ ಉತ್ತರ ಬೇಕಿಲ್ಲ, ರಾಜ್ಯದ ಜನರಿಗೆ ಉತ್ತರ ಬೇಕಿದೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಮೀಸಲಾತಿ ಪರವಾದ ಹೋರಾಟ ವಿಚಾರದ ಬಗ್ಗೆ ಮಾತನಾಡಿದ ಅವರು, ಯಾವುದೇ ಜಾತಿಯಲ್ಲಿನ ಉಳ್ಳವರಿಗೆ ಮೀಸಲಾತಿ ಬೇಡ. ನನಗೆ, ಸಿದ್ದರಾಮಯ್ಯಗೆ, ಎಂಟಿಬಿ ನಾಗರಾಜ್‌ಗೆ ದುಡ್ಡು ಮಾಡಿರೋ ಈ ಈಶ್ವರಪ್ಪನಿಗೆ ಎಸ್‌ಟಿ ಮೀಸಲಾತಿ ಕೇಳುತ್ತಿದ್ದೇವಾ? ಶ್ರೀನಿವಾಸ್ ಪ್ರಸಾದ್ ಹಾಗೂ ಮಕ್ಕಳಿಗೆ,  ಖರ್ಗೆ ಮತ್ತು ಮಕ್ಕಳಿಗೆ, ಗೋವಿಂದ ಕಾರಜೋಳ ಹಾಗೂ ಮಕ್ಕಳಿಗೆ ಮೀಸಲಾತಿ ಅವಶ್ಯಕತೆ ಇದೆಯಾ? ಯಾವ ಸಮುದಾಯದಲ್ಲಿ ಬಡವರಿದ್ದಾರೋ ಅವರಿಗಾಗಿ ಮೀಸಲಾತಿ‌ ಹೋರಾಟ ಮಾಡುತ್ತಿದ್ದೇವೆ ಎಂಎಲ್‌ಸಿ ವಿಶ್ವನಾಥ್ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next