Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಲಕ್ಷ್ಮಣ ರೇಖೆ ಇದೆ. 75 ವರ್ಷ ಮೀರಿದವರಿಗೆ ಆಡಳಿತ ವೇಗ ಇರುವುದಿಲ್ಲ, ವಯಸ್ಸು, ಆರೋಗ್ಯದಿಂದ ಯಡಿಯೂರಪ್ಪ ಬಳಲಿದ್ದಾರೆ. ಯಡಿಯೂರಪ್ಪ ಅವರಿಗೆ ಶಕ್ತಿ ಇತ್ತು. ಆದರೆ ಈಗ ಮೊದಲಿನ ಶಕ್ತಿಇಲ್ಲ. ಹಾಗಾಗಿ ಸರ್ಕಾರದಿಂದ ಆಗುತ್ತಿರುವ ಅನಾಹುತ ತಪ್ಪಿಸಬೇಕು, ಸರ್ಕಾರಕ್ಕೆ ಚಿಕಿತ್ಸೆ ನೀಡಬೇಕು. ಹೀಗಾಗಿ ನಾಯಕತ್ವ ವಿಚಾರವೇ ಅತ್ಯಂತ ಮುಖ್ಯ ಎಂದರು.
Related Articles
Advertisement
ರೇಣುಕಾಚಾರ್ಯಗೆ ತಿರುಗೇಟು: ತಮ್ಮ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿದ್ದ ರೇಣುಕಾಚಾರ್ಯಗೆ ತಿರುಗೇಟು ನೀಡಿದ ವಿಶ್ವನಾಥ್, ಸತ್ಯ ಹೇಳುವವರ ವಿರುದ್ಧ ಕ್ರಮ ಆಗಬೇಕಾ? ‘ನಾನು ಪ್ಯೂರ್ ಬಿಜೆಪಿ, ನೀನು ಮಿಕ್ಸ್ ಬಿಜೆಪಿ’. ನೀನು ಕೆಜೆಪಿಯಿಂದ ಬಂದವನು. ನಿನ್ನ ನರ್ಸ್ ಜಯಲಕ್ಷ್ಮಿ ಕತೆ ಏನಾಯ್ತು? ಯಡಿಯೂರಪ್ಪ ವಿರುದ್ಧ ನೀನು ಹೈದರಾಬಾದ್‌ಗೆ ಹೋಗಿದ್ದೆ ಎಂದು ಆಕ್ರೋಶ ಹೊರಹಾಕಿದರು.
ಹರತಾಳು ಹಾಲಪ್ಪ ವಿರುದ್ದ ಕಿಡಿಕಾರಿದ ಅವರು, ಉಂಡ ಮನೆಗೆ ಮದ್ದು ಹಾಕುವೆ ಎನ್ನುತ್ತಾನೆ. ಗೆಳೆಯನ ಮನೆಗೆ ಊಟಕ್ಕೆ ಹೋಗಿ ಅತ್ಯಾಚಾರ ಮಾಡಲು ಹೋದವನು ನೀನು. ಅದರಿಂದ ಮಂತ್ರಿಗಿರಿ ಕಳೆದುಕೊಂಡಿದ್ದೆ ನೀನು ಟಾಂಗ್ ನೀಡಿದರು.
ಸಚಿವ ಈಶ್ವರಪ್ಪ ಬಗ್ಗೆ ಮಾತನಾಡಿದ ವಿಶ್ವನಾಥ್, ನಾವು ಬಂದಮೇಲೆ ತಾನೇ ಬಹುಮತ ಬಂದಿದ್ದು. ಈಶ್ವರಪ್ಪನವರೇ ಇಷ್ಟು ಸಣ್ಣ ವಿಷಯ ಅರ್ಥವಾಗುದಿಲ್ಲವೇ ಎಂದು ಪ್ರಶ್ನಸಿದರು.
ಇದನ್ನೂ ಓದಿ:ಬಿಎಸ್‌ವೈಗೆ ಶಾಸಕರ ಸಾಥ್ : 53 ಶಾಸಕರ ಅಭಿಮತ ಸಂಗ್ರಹಿಸಿದ ಅರುಣ್ ಸಿಂಗ್
ಇದು ಕೂಡ ಕುಟುಂಬ ರಾಜಕಾರಣದ ಗಿರಾಕಿ. ಈಶ್ವರಪ್ಪ ಯಾಕೆ ರಾಜ್ಯಪಾಲರ ಬಳಿ ಹೋಗಿದ್ದು? ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ವಿಜಯೇಂದ್ರ ಹಸ್ತಕ್ಷೇಪದ ಬಗ್ಗೆ ದೂರು ನೀಡಿಲ್ವಾ? ಈ ವಿಷಯ ಈಗ ಚರ್ಚೆಯಾಗುವುದಿಲ್ಲ. ಹೇಳುವಂತಹ ಧೈರ್ಯ ಯಾರಿಗೂ ಇಲ್ಲ ಎಂದರು.
ಸಿಎಂ ಪುತ್ರ ವಿಜಯೇಂದ್ರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವ ವಿಶ್ವನಾಥ್, ಆ ಆರೋಪಗಳಿಗೆ ದಾಖಲೆ ಬಿಡುಗಡೆ ಮಾಡಿದರು.