Advertisement

ಎಂಎಲ್ಸಿ ಚುನಾವಣೆ ಹಿನ್ನೆಲೆ : ಟೆಂಡರ್ ಹರಾಜು ಪ್ರಕ್ರಿಯೆಗೆ ತಡೆ

12:36 PM Dec 08, 2021 | Team Udayavani |

ಚನ್ನಗಿರಿ: ತಾಲೂಕಿನ ಮೀನುಗಾರಿಕೆ ಇಲಾಖೆಯಿಂದ ಜಲಸಂಪನ್ಮೂಲಗಳ ಮೀನುಪಾಶುವಾರು ಹಕ್ಕನ್ನು ಟೆಂಡರ್ ಮುಖಾಂತರ ಪಡೆಯಲು ಪ್ರಕಟಣೆ ಹೊರಡಿಸಿದ್ದು. ಎಂಎಲ್ಸಿ ಚುನಾವಣೆ  ನೀತಿ ಸಂಹಿತೆ ಜಾರಿ ಹಿನ್ನೆಲೆ ಟೆಂಡರ್ ಹರಾಜು ಪ್ರಕ್ರಿಯೆ ತಡೆ ಹಿಡಿಯಲಾಗಿದೆ ಎಂದು ತಾಲೂಕು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಬಿ.ಜೆ ದೀಪಶ್ರೀ  ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

2021-22 ನೇ ಸಾಲಿನ ಮೀನುಗಾರಿಕೆ ಪಸಲಿ ವರ್ಷದಿಂದ 2025-26 ನೇ ಸಾಲಿನವರೆಗೆ (ಒಟ್ಟು 5ವರ್ಷದ) ಅವಧಿಗೆ ತಾಲೂಕಿನ ಸಂಕಣ್ಣನ ಕೆರೆ, ಬೆಂಕಿಕೆರೆ ದೊಡ್ಡ ಕೆರೆ, ಹೆಬ್ಬಳಗೆರೆ ಕೆರೆ, ಮೆದುಗೊಂಡನಹಳ್ಳಿ ಕೆರೆ ಮೇಳನಾಯ್ಕನಕಟ್ಟೆಯ ಕುಂಬಾರಕಟ್ಟೆ ಕೆರೆ ಒಟ್ಟು 5 ಕೆರೆಗಳನ್ನು ಟೆಂಡರ್ ಕಂ ಹರಾಜು ಪ್ರಕ್ರಿಯೆಯನ್ನು ಡಿ.9 ರಂದು ನಡೆಸುವುದಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು ಸದ್ಯ ಎಂಎಲ್ಸಿ ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಅದನ್ನು ಹಿಂಪಡೆದಿದ್ದು ಚುನಾವಣೆ ನಂತರದಲ್ಲಿ ಬದಲಿ ದಿನಾಂಕವನ್ನು ನಿಗದಿ ಪಡಿಸಿ ಕೆರೆಗಳ ಹರಾಜು ಪ್ರಕ್ರಿಯೆಯನ್ನು ನಡೆಸಲಾಗುವುದು ಎಂದು ಪತ್ರಿಕೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next