Advertisement
ನೈರುತ್ಯ ಪದವೀಧರ ಕ್ಷೇತ್ರಕ್ಕೆ ರಾಜ್ಯಸಭೆ ಮಾಜಿ ಸದಸ್ಯ ಆಯನೂರು ಮಂಜುನಾಥ್,ಬೆಂಗಳೂರು ಪದವೀಧರ ಕ್ಷೇತ್ರಕ್ಕೆ ಅ.ದೇವೇಗೌಡ,ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಕೆ.ಬಿ.ಶ್ರೀನಿವಾಸ್ ಅವರನ್ನು ಅಭ್ಯರ್ಥಿಗಳೆಂದು ಘೋಷಿಸಲಾಗಿದೆ.
ದಕ್ಷಿಣ ಶಿಕ್ಷಕರ ಕ್ಷೇತ್ರದ ಜೆಡಿಎಸ್‌ನ ಮರಿತಿಬ್ಬೇಗೌಡ, ಆಗ್ನೇಯ ಶಿಕ್ಷಕರ ಕ್ಷೇತ್ರ ಪ್ರತಿನಿಧಿಸುತ್ತಿರುವ ಜೆಡಿಎಸ್
ನ ರಮೇಶ್‌ಬಾಬು ಅವರ ಅವಧಿ 2018ರ ಜೂನ್‌ಗೆ ಅಂತ್ಯಗೊಳ್ಳುತ್ತಿರುವುದರಿಂದ ಈ ಸ್ಥಾನಗಳಿಗೆ ಚುನಾವಣೆ
ನಡೆಯಲಿದೆ.
Related Articles
ಪದವೀಧರ ಕ್ಷೇತ್ರದ ಹಾಲಿ ಸದಸ್ಯ ರಾಮಚಂದ್ರಗೌಡ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ.
Advertisement
ಹೀಗಾಗಿ ಆ ಎರಡೂ ಕ್ಷೇತ್ರಗಳಿಗೆ ಬೇರೆಯವರನ್ನು ಪರಿಗಣಿಸಲಾಗಿದೆ. ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಹಾಲಿ ಸದಸ್ಯಗಣೇಶ್ ಕಾರ್ಣಿಕ್ ಅವರಿಗೆ ಮತ್ತೆ ಅವಕಾಶ ನೀಡಿದರೆ, ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಹಾಲಿ ಸದಸ್ಯ ಅಮರನಾಥ ಪಾಟೀಲ್ ಅವರನ್ನು ಕೈಬಿಟ್ಟು ಕೆ.ಬಿ.ಶ್ರೀನಿವಾಸ್ ಅವರನ್ನು ಆಯ್ಕೆ
ಮಾಡಲಾಗಿದೆ. ನೈರುತ್ಯ ಪದವೀಧರ ಕ್ಷೇತ್ರದಿಂದ ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸಲು ಶಂಕರಮೂರ್ತಿ ಸಾಕಷ್ಟು ಪ್ರಯತ್ನ ಮಾಡಿದ್ದರೂ ಅದು ಫಲ ಕಾಣಲಿಲ್ಲ. ಇನ್ನೊಂದೆಡೆ ಬೆಂಗಳೂರು ಪದವೀಧರ ಕ್ಷೇತ್ರದಿಂದ ಪ್ರಬಲ ಆಕಾಂಕ್ಷಿ ಎ.ಎಚ್.ಆನಂದ್ ಅವರನ್ನು ಕಡೆಗಣಿಸಿ ಹೊಸದಾಗಿ ಪಕ್ಷ ಸೇರಿರುವ ಅ.ದೇವೇಗೌಡರಿಗೆ ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಪ್ರಬಲ ಆಕಾಂಕ್ಷಿ ಚೇತನ್‌ಗೌಡ ಅವರನ್ನು ಬಿಟ್ಟು ಡಾ.ಹಾಲನೂರು ಎಸ್.ಲೇಪಾಕ್ಷಿ ಅವರನ್ನು ಪರಿಗಣಿಸಲಾಗಿದೆ.