ರಾಮನಗರ: ಅಭಿವೃದ್ಧಿ ಮಂತ್ರ ದೊಂದಿಗೆ ತಾವು ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ಬಿಜೆಪಿ ಅಭ್ಯರ್ಥಿ ಬಿ.ಸಿ.ನಾರಾಯಣ ಸ್ವಾಮಿ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿ, ಕೇಂದ್ರ ಮತ್ತು ರಾಜ್ಯ ದಲ್ಲಿ ಬಿಜೆಪಿ ಅಧಿಕಾರದಲ್ಲಿವೆ. ನಗರ ಸಭೆ, ಪುರ ಸಭೆ ಹಾಗೂ ಗ್ರಾಪಂ ಸದ ಸ್ಯರು ನಗರ ಮತ್ತು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ದೃಷ್ಟಿಯಿಂದ ತಮ್ಮನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಅಭಿವೃದ್ಧಿಗೆ ಮತ ನೀಡಿ: ಕಳೆದ ಪರಿಷತ್ ಚುನಾವಣೆಯಲ್ಲಿ ಗೆದ್ದಿದ್ದ ಅಭ್ಯರ್ಥಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಡೆ ಮುಖ ಮಾಡಿಲ್ಲ . ಅವರಂತೆ ಲೂಟಿ ಮಾಡಿ ಸ್ಪರ್ಧೆ ಮತ್ತೂಮ್ಮೆ ಮಾಡು ತ್ತಿಲ್ಲ ಎಂದರು. ತಾವು ಸ್ಪರ್ಧಿಸುತ್ತಿರುವ ಕ್ಷೇತ್ರ ವ್ಯಾಪ್ತಿಗೆ ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿÇÉೆಗಳಲ್ಲಿ 8 ತಾಲೂಕುಗಳಿಂದ ಸುಮಾರು 3900 ಮತದಾರರಿದ್ದು, ಬಿಜೆಪಿ ಕಟ್ಟಾ ಬೆಂಬಲಿತ ಸುಮಾರು 850 ಮತದಾರರಿದ್ದಾರೆ. ಸರ್ಕಾರಿ ಸೇವೆಗಳನ್ನು ಪಡೆಯಲು ಜಿಲ್ಲೆ, ತಾಲೂಕು ಮತ್ತು ಹೋಬಳಿ ಕಚೇರಿಗಳಗೆ ಭೇಟಿ ನೀಡದೆ ಗ್ರಾಮ ಒನ್ ಕೇಂದ್ರಗಳ ಮೂಲಕ ಸೇವೆ ಪಡೆಯಬಹುದು ಎಂದರು.
ಹೆಚ್ಚಿನ ಅನುದಾನ: ಕೇಂದ್ರ ಸರ್ಕಾರ ಕರ್ನಾಟಕಕ್ಕೆ 12 ಮತ್ತು 13ನೇ ಹಣಕಾಸು ಆಯೋಗದ ಅವಧಿಯಲ್ಲಿ ರೂ. 3988 ಕೋಟಿ ಅನುದಾನ ಕೊಟ್ಟಿದೆ. 14, 15 ನೇ ಹಣಕಾಸು ಆಯೋಗದ ಅವಧಿಯಲ್ಲಿ ರೂ 9626 ಕೋಟಿಗೆ ಅನುದಾನ ಹೆಚ್ಚಿಸಿದೆ.
ಗೆಲುವು ಸಾಧಿಸಲಿದ್ದಾರೆ: ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜ್ ಮಾತನಾಡಿ, ಬಿಜೆಪಿ ಪಕ್ಷದಲ್ಲಿ ಕಾರ್ಯ ಕರ್ತರಿಗೆ ಉತ್ತಮ ಅವಕಾಶಗಳು ಸಿಗುತ್ತವೆ ಎಂಬುದಕ್ಕೆ ನಾರಾಯಣ ಸ್ವಾಮಿ ಸಾಕ್ಷಿ. ರಾಮನಗರ ಜಿಲ್ಲೆಯ 4 ತಾಲೂಕುಗಳಲ್ಲಿ ಹೆಚ್ಚಿನ ಸಂಖ್ಯೆಯ ಮತದಿಂದ ಮುನ್ನಡೆ ಸಾಧಿಸಿ ಬಿ.ಸಿ. ನಾರಾಯಣಸ್ವಾಮಿ ಅವರು ವಿಜಯ ಸಾಧಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ, ರಾಮನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಣ್ಣ, ರುದ್ರ ದೇವರು, ನಗರಾಧ್ಯಕ್ಷ ಪಿ. ಶಿವಾನಂದ, ನಗರ ಪ್ರಧಾನ ಕಾರ್ಯದರ್ಶಿಗಳಾದ ಡಿ. ನರೇಂದ್ರ, ದರ್ಶನ್ ರೆಡ್ಡಿ, ಮಾಧ್ಯಮ ಸಂಚಾಲಕ ಚಂದ್ರಶೇಖರ ರೆಡ್ಡಿ, ಮುಖಂಡರುಗಳಾದ ಪುಷ್ಪಲತಾ, ಶಿಲ್ಪ, ಲಕ್ಷ್ಮೀ ಉಪಸ್ಥಿತರಿದ್ದರು.