ಮಹಾನಗರ: ಬಾಬುಗುಡ್ಡೆ ಕುದ್ಮು ಲ್ ರಂಗರಾವ್ ಸ್ಮಾರಕ ಭವನಕ್ಕೆ ಹೆಚ್ಚುವರಿಯಾಗಿ 1.5 ಕೋಟಿ ರೂ ವನ್ನು ಸರಕಾರ ಮಂಜೂರು ಮಾಡಿದೆ ಎಂದು ಶಾಸಕ ಜೆ.ಆರ್.ಲೋಬೋ ತಿಳಿಸಿದರು.
ಬಾಬುಗುಡ್ಡೆ ಕುದ್ಮುಲ್ ರಂಗರಾವ್ ಸ್ಮಾರಕ ಭವನಕ್ಕೆ ಭೇಟಿ ನೀಡಿದ ಸಂದರ್ಭ ಮಾತನಾಡಿದ ಅವರು, ಬಹಳ ವರ್ಷಗಳಿಂದ ಬೇಡಿಕೆ ಇದ್ದ ಬಾಬುಗುಡ್ಡೆ ಕುದ್ಮುಲ್ ರಂಗರಾವ್ ಸ್ಮಾರಕ ಭವನ ನಿರ್ಮಾಣಕ್ಕೆ ಹೆಚ್ಚುವರಿಯಾಗಿ 1.5 ಕೋಟಿ ರೂ. ಒದಗಿಸುವಂತೆ ಮನವಿ ಮಾಡಿರುವುದಾಗಿ ಹೇಳಿದರು.
ಈ ಪ್ರದೇಶಕ್ಕೆ ಈ ಭವನದಿಂದ ತುಂಬಾ ಪ್ರಯೋಜನವಾಗಲಿದ್ದು, ಮದುವೆ, ಇನ್ನಿತರ ಕಾರ್ಯಕ್ರಮಗಳು ಜರಗಲಿವೆ. ಮುಂದಿನ ಎರಡು ತಿಂಗಳೊಳಗೆ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಯಾಗಲಿದೆ ಎಂದರು.
ಕುದ್ಮುಲ್ ಟ್ರಸ್ಟ್ ಅಧ್ಯಕ್ಷ ಹೃದಯನಾಥ್, ಹೊನ್ನಯ್ಯ, ಕೆಎಸ್‌ಆರ್‌ಟಿಸಿ ನಿರ್ದೇಶಕ ಟಿ.ಕೆ.ಸುಧೀರ್, ಮಂಗಳೂರು ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯ ಡೆನ್ನಿಸ್ ಡಿ’ಸಿಲ್ವ, ಪ್ರಮುಖರಾದ ರಮಾನಂದ ಪೂಜಾರಿ, ದಯಾಕರ್,
ಮಹಮದ್ ನವಾಜ್, ಕೀರ್ತಿರಾಜ್, ರವೀಂದ್ರ, ಶ್ಯಾಮ್ ಕರ್ಕೇರ, ಪ್ರದೀಪ್ ಕೃಷ್ಣ, ಪ್ರಶಾಂತ್, ಗುತ್ತಿಗೆದಾರ ಅರುಣ್
ಕುವೆಲ್ಲೊ ಮತ್ತಿತರರು ಉಪಸ್ಥಿತರಿದ್ದರು.