Advertisement

ಬಸ್‌ ನಿಲ್ದಾಣಕ್ಕೆ ಶಾಸಕರ ಭೇಟಿ

02:54 PM Dec 20, 2019 | Team Udayavani |

ಮಾಗಡಿ: ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಗುರುವಾರ ಮುಂಜಾನೆಯೇ ಶಾಸಕ ಎ.ಮಂಜುನಾಥ್‌ ದಿಢೀರ್‌ ಭೇಟಿನೀಡಿ ಗ್ರಾಮೀಣ ಭಾಗದ ಬಸ್‌ ಸಂಚಾರ ಮತ್ತು ನಿಲ್ದಾಣದ ಸಮಸ್ಯೆಗಳ ಕುರಿತು ಪ್ರಯಾಣಿಕರೊಂದಿಗೆ ಖುದ್ದು ಸಮಾಲೋಚನೆ ನಡೆಸಿದರು.

Advertisement

ಗ್ರಾಮೀಣ  ಭಾಗಕ್ಕೆ ಬಸ್‌ ಸಂಚಾರದ ಸಮಸ್ಯೆ ಇದ್ದು, ಸಂಚಾರಕ್ಕೆ ಸೂಕ್ತ ಕ್ರಮಕ್ಕೆಸಹರಿಸುವಂತೆ ಗ್ರಾಮೀಣ ಜನತೆ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಬಂದದೂರಿನ ಹಿನ್ನೆಲೆಯಲ್ಲಿ ಬಸ್‌ ನಿಲ್ದಾಣಕ್ಕೆ ಶಾಸಕ ಭೇಟಿ ನೀಡಿದಾಗ ಸೀಟ್‌ ಬೆಂಚುಕಲ್ಲುಗಳ ಮೇಲೆ ಪಾರಿವಾಳ ಹಕ್ಕಿಗಳ ಇಕ್ಕೆಗಳು ಬಿದ್ದಿದ್ದನ್ನು ಗಮನಿಸಿದ ಶಾಸಕರು ಪ್ರತಿದಿನ ಸೀಟ್‌ ಬೆಂಚುಗಳನ್ನು ಸ್ವತ್ಛತೆ ಕಾಪಾಡಬೇಕು ಎಂದು ಎಚ್ಚರಿಕೆ ನೀಡಿದರು.

ಗ್ರಾಮಗಳಿಗೆ ಬೇಕಿದೆ ಬಸ್‌ ಸೌಕರ್ಯ: ಪ್ರತಿದಿನ ರಾತ್ರಿ 8.30 ರ ನಂತರ ಬೆಂಗಳೂರು ಮಾರ್ಗವಾಗಿ ಬಸ್‌ ಸಂಚಾರ ಇರಬೇಕು.ಪ್ರತಿ ಗಂಟೆಗೊಮ್ಮೆ ಮಾಗಡಿಯಿಂದ ಕುಣಿಗಲ್‌ಗೆ ಮತ್ತು ಕುಣಿಗಲ್‌ನಿಂದ ಮಾಗಡಿಗೆ ಬಸ್‌ ಸಂಚಾರ ಬೇಕಿದೆ. ಕಾಳಾರಿ ಮಾರ್ಗವಾಗಿ ಕುದೂರಿಗೆ, ತಿಪ್ಪಸಂದ್ರಕ್ಕೆ ಬಸ್‌ ಸೌಕರ್ಯ ಬೇಕಿದ್ದು, ಅದರಲ್ಲೂ ಸಂಜೆ ವೇಳೆ ಪಟ್ಟಣದ ಬಹುತೇಕ ಗ್ರಾಮೀಣ ಪ್ರದೇಶ ಗಳಿಗೆ ಬಸ್‌ ಸಂಚಾರದ ಕೊರತೆಯಿದೆ. ಇದರಿಂದಾಗಿ ಆಟೋ ರಿಕ್ಷಾ ಹಿಡಿದು ಗ್ರಾಮ ಗಳಿಗೆ ತೆರಳಬೇಕಾದ ಪರಿಸ್ಥಿತಿ ಇದೆ.

ಸಮಸ್ಯೆ ಹೇಳಿಕೊಂಡ ಪ್ರಯಾಣಿಕರು: ಜೊತೆಗೆ ಶಾಲಾ ಕಾಲೇಜುಗಳ ಸಮಯಕ್ಕೆ ಸರ್ಕಾರಿ ಬಸ್‌ಗಳ ಸಂಚಾರ ಕಡಿಮೆಯಿದ್ದು, ಅದರಲ್ಲೂ ಬಹುತೇಕ ಬಸ್‌ಗಳು ಎಲ್ಲಂದರಲ್ಲೇ ಕೆಟ್ಟು ನಿಲ್ಲುತ್ತವೆ. ಸೀಟುಗಳಲ್ಲಿ ದೂಳುತುಂಬಿರುತ್ತದೆ. ಸ್ವತ್ಛತೆಯಿಲ್ಲ ಸಮ ಯಕ್ಕೆ ಸರಿಯಾಗಿ ಬಸ್ಸುಗಳು ಬರುವುದಿಲ್ಲ ಒಂದಲ್ಲಎರಡಲ್ಲ ಬಹಳ ಸಮಸ್ಯೆಗಳನ್ನು ಎದುರಿಸ ಬೇಕಾದಿದೆ. ಸಂಚಾರದ ವೇಳಾ ಪಟ್ಟಿಯೇ ಹಾಕಿಲ್ಲ. ಬಸ್ಸುಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ನೂರಾರು ಮಂದಿ ಪ್ರಯಾಣಿಕರು ಶಾಸಕರಲ್ಲಿ ಮನವಿ ಮಾಡಿಕೊಂಡರು. ಸ್ಥಳದಲ್ಲೇ ಇದ್ದ ಡಿಪೋ ವ್ಯವಸ್ಥಾಪಕ ನಟರಾಜ್‌ ಅವರಿಗೆ ಸಂಚಾರ ಅವ್ಯವಸ್ಥೆ ಕುರಿತು ಸಮಾಲೋಚನೆ ನಡೆಸಿದ ಶೀಘ್ರದಲ್ಲಿಯೇ ಸೂಕ್ತ ಸಮಯಕ್ಕೆ ಸಂಚಾರ ವ್ಯವಸ್ಥೆ ಕೈಗೊಳ್ಳುವಂತೆ ಸೂಚನೆ ನೀಡಿದರು.

ಶಿಸ್ತಿನ ಕ್ರಮದ ಎಚ್ಚರಿಕೆ: ಇದೇ ವೇಳೆ ಬಸ್‌ ನಿಲ್ದಾಣದ ಶುಚಿತ್ವ ಕುರಿತು ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು ನಿತ್ಯ ಸಾವಿರಾರು ಪ್ರಯಾಣಿಕರು ನಿಲ್ದಾಣದಿಂದ ಪ್ರಯಾಣ ಬೆಳೆಸುತ್ತಾರೆ. ಇಲ್ಲಿನ ಪಾರ್ಕ್‌ ನಿರ್ವಹಣೆ ಮಾಡಿಲ್ಲ. ಶುಚಿತ್ವ ಕಾಪಾಡುತ್ತಿಲ್ಲ. ಹೀಗಾದರೆ ಸುಮ್ಮನೆ ಇರಲು ಸಾಧ್ಯವಿಲ್ಲ. ಇನ್ನೊಂದು ವಾರದೊಳಗೆ ಬಸ್‌ ನಿಲ್ದಾಣವನ್ನು ಸ್ವತ್ಛ ಮಾಡುವ ಮೂಲಕ ಅಗತ್ಯ ಕ್ರಮ ವಹಿಸಬೇಕು, ನಿತ್ಯ ಬಸ್‌ಗಳನ್ನು ತೊಳೆದು ನಿಲ್ದಾಣಕ್ಕೆ ತರಬೇಕು. ಪ್ರಯಾಣಿಕ ರೊಂದಿಗೆ ಸಿಬ್ಬಂದಿ ಸೌಜನ್ಯದಿಂದ ವರ್ತಿಸಬೇಕು. ಇಲ್ಲದಿದ್ದರೆ. ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

Advertisement

ಪುರಸಭಾ ಸದಸ್ಯರಾದ ಕೆ.ವಿ.ಬಾಲರಘು, ರಹಮತ್‌, ವಿಜಯ ರೂಪೇಶ್‌, ರೇಖಾ, ಎಂ.ಬಿ.ಮಹೇಶ್‌, ಅನಿಲ್‌, ನಿವೀನ್‌ ,ಮೋಹನ್‌, ಚಿಕ್ಕಣ್ಣ, ಚಂದ್ರಶೇಖರ್‌, ಜವರೇಗೌಡ, ವಿಜಯಸಿಂಹ, ಸ್ವಾ,ಮಿ, ರಮೇಶ್‌ ದೊಡ್ಡಿ ಲೋಕೇಶ್‌ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next