Advertisement

ಶಿಷ್ಟಾಚಾರ ಉಲ್ಲಂಘಿಸಿ ಶಾಸಕರಿಂದ ಕಾಮಗಾರಿಗೆ ಚಾಲನೆ

03:26 PM Feb 06, 2023 | Team Udayavani |

ಬಾಗೇಪಲ್ಲಿ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ ಎಂಬ ತರಾತುರಿಯಲ್ಲಿ ಸ್ಥಳೀಯ ಶಾಸಕರುಶಿಷ್ಟಾಚಾರ ಉಲ್ಲಂಘಿಸಿ, ಎಚ್‌.ಎನ್‌.ವ್ಯಾಲಿ ಕಾಮಗಾರಿಗೆ ಪೂಜೆ ಮಾಡಿರುವುದು ಅಧಿಕೃತ ಅಲ್ಲ. ಈಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಭೂಮಿ ಪೂಜೆನೆರವೇರಿಸಲಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

Advertisement

ಪಟ್ಟಣದ ಸರ್ಕಾರಿ ನ್ಯಾಷನಲ್‌ ಪದವಿಪೂರ್ವಕಾಲೇಜು ಆವರಣದಲ್ಲಿ ಒಕ್ಕಲಿಗರ ಸಂಘದ ರಾಜ್ಯಪ್ರಧಾನ ಕಾರ್ಯದರ್ಶಿ ಟಿ.ಕೋನಪರೆಡ್ಡಿ ನೇತೃತ್ವದಲ್ಲಿ ಅಯೋಜಿಸಿದ್ದ ಬೃಹತ್‌ ಉದ್ಯೋಗ ಮೇಳದಲ್ಲಿ ಆಯ್ಕೆಆದವರಿಗೆ ಆದೇಶ ಪತ್ರ ವಿತರಿಸಿ ಮಾತನಾಡಿ, ಮೂರುವರ್ಷಗಳಿಂದ ಬಾಗೇಪಲ್ಲಿ ಕ್ಷೇತ್ರದ ಪ್ರತಿ ರೈತರಿಗೂ 10ಸಾವಿರ ರೂ. ಬಿಜೆಪಿ ಸರ್ಕಾರ ಕೊಟ್ಟಿದೆ. ಬಾಗೇಪಲ್ಲಿಗೆನಮ್ಮ ಕ್ಲಿನಿಕ್‌ ನೀಡಲಾಗಿದೆ. ಪ್ರತಿ ಮನೆಗೂ ಶೌಚಾಲಯ ನಿರ್ಮಾಣಕ್ಕೆ ಹಣ ಕೊಟ್ಟಿದ್ದೇವೆ ಎಂದು ಹೇಳಿದರು.

ಚುನಾವಣಾ ಸಮಯದಲ್ಲಿ ಬಿಜೆಪಿ ಸರ್ಕಾರ ತೆಗಳುವುದಕ್ಕಾಗಿ ಶಾಸಕ ಸುಬ್ಟಾರೆಡ್ಡಿ ಅವರು, ಕ್ಷೇತ್ರದಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿಲ್ಲ ಎಂದುಸುಳ್ಳು ಹೇಳಿಕೆ ನೀಡುತ್ತಿರುವುದು ಗಮನಿಸಿದರೆ, ಅವರಿಗೆ ಬಿಜೆಪಿ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿಇಲ್ಲ ಎಂಬುದು ತಿಳಿಯುತ್ತದೆ ಎಂದು ಹೇಳಿದರು.

75 ಕೋಟಿ ರೂ. ಅನುದಾನ: ಎಚ್‌.ಎನ್‌.ವ್ಯಾಲಿ ಯೋಜನೆ ಕಾಮಗಾರಿಗೆ ಶಿಷ್ಟಾಚಾರ ಉಲ್ಲಂಘಿಸಿಶಾಸಕರು ಪೂಜೆ ಮಾಡಿದ್ದಾರೆ. ಇದು ಅಧಿಕೃತವಲ್ಲ. ಬಾಗೇಪಲ್ಲಿಯ ಜನತೆಗೆ ನೀರು ಕೊಡಲು ಬಿಜೆಪಿಸರ್ಕಾರ, ಏತ ನೀರಾವರಿ ಯೋಜನೆಗೆ 75 ಕೋಟಿರೂ. ಅನುದಾನ ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು ಶಿಷ್ಟಾಚಾರದಂತೆ ಪೂಜೆ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.

ಒಕ್ಕಲಿಗರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಕೋನಪರೆಡ್ಡಿ ಮಾತನಾಡಿ, ಚೇಳೂರು ತಾಲೂಕುಕೇಂದ್ರದಲ್ಲಿ 10 ದಿನದೊಳಗೆ ತಾಲೂಕು ಮಟ್ಟದ ಬೃಹತ್‌ ಆರೋಗ್ಯ ಮೇಳ ಆಯೋಜಿಸಲಾಗುತ್ತಿದೆ. ಮನುಷ್ಯನ ಆರೋಗ್ಯಕ್ಕೆ ಸಂಬಂಧಿಸಿ ಎಲ್ಲಾ ರೀತಿಯಪರೀಕ್ಷೆ, ಚಿಕಿತ್ಸೆಯನ್ನು ಉಚಿತವಾಗಿ ಮಾಡಿಕೊಡಲಾಗುತ್ತದೆ ಎಂದು ತಿಳಿಸಿದರು.

Advertisement

182 ಆಸಕ್ತರಿಗೆ ಉದ್ಯೋಗಾವಕಾಶ: ಉದ್ಯೋಗ ಮೇಳದಲ್ಲಿ ರಾಜ್ಯ, ರಾಷ್ಟ್ರೀಯ ಮಟ್ಟದ 72 ಕಂಪನಿಗಳು ಭಾಗವಹಿಸಿದ್ದು, ಬಾಗೇಪಲ್ಲಿ, ಗುಡಿಬಂಡೆ,ಚೇಳೂರು ತಾಲೂಕುಗಳಿಂದ ಆಗಮಿಸಿದ್ದ 500ಕ್ಕೂಹೆಚ್ಚು ಮಂದಿಗೆ ನೇರ ಸಂದರ್ಶನ ನಡೆಸಿ, 182 ಮಂದಿ ಆಯ್ಕೆ ಮಾಡಿ, ಆದೇಶ ಪತ್ರ ನೀಡಲಾಯಿತು.

ನ್ಯಾಷನಲ್‌ ಎಜುಕೇಷನ್‌ ಸೊಸೈಟಿ ಕರ್ನಾಟಕ ಕಾರ್ಯದರ್ಶಿ ವೆಂಕಟಶಿವಾರೆಡ್ಡಿ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ವಿ.ವೆಂಕಟಶಿವಾರೆಡ್ಡಿ, ಜಿಪಂ ಮಾಜಿ ಸದಸ್ಯರಾದಪಿ.ಎಸ್‌.ಸುಬ್ಟಾರೆಡ್ಡಿ, ಪೂಜಪ್ಪ, ನ್ಯಾಷನಲ್‌ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಕೆ.ಟಿ.ವೀರಾಂಜನೇಯ, ನ್ಯಾಷನಲ್‌ ಕಾಲೇಜು ಪ್ರಾಂಶುಪಾಲಸೋಮಶೇಖರ್‌, ಮುಖಂಡರಾದ ಜೆ.ಪಿ.ಚಂದ್ರಶೇಖರರೆಡ್ಡಿ, ಗೋವಿಂದರೆಡ್ಡಿ, ಶಂಕರರೆಡ್ಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next