Advertisement
ಈ ವಿಷಯವಾಗಿ ಮುಖ್ಯಮಂತ್ರಿ, ಕೃಷಿ ಸಚಿವರು, ಕೃಷಿ ಇಲಾಖೆ ಆಯುಕ್ತರಿಗೆ ಶಾಸಕರಾದ ಕುಂದಾಪುರದ ಕಿರಣ್ ಕುಮಾರ್ ಕೊಡ್ಗಿ, ಕಾಪುವಿನ ಗುರ್ಮೆ ಸುರೇಶ್ ಶೆಟ್ಟಿ, ಬೈಂದೂರಿನ ಗುರುರಾಜ್ ಗಂಟಿಹೊಳೆ, ಉಡುಪಿಯ ಯಶ್‌ಪಾಲ್ ಸುವರ್ಣ ಶುಕ್ರವಾರ ಪತ್ರ ಬರೆದಿದ್ದಾರೆ. ವಿಧಾನಪರಿಷತ್ ಮಾಜಿ ಸಭಾಪತಿ, ರೈತ ಸಂಘದ ಅಧ್ಯಕ್ಷ ಪ್ರತಾಪಚಂದ್ರ ಶೆಟ್ಟಿ ಈ ಬಗ್ಗೆ ಸಂಬಂಧಪಟ್ಟವರ ಬಳಿ ಮಾತನಾಡುವುದಾಗಿ ಹೇಳಿದ್ದಾರೆ.
ಜಿಲ್ಲೆಯ ಎಲ್ಲ ಶಾಸಕರ ನಿಯೋಗ ವೊಂದು ಸಚಿವರನ್ನು ಭೇಟಿ ಮಾಡಿ ಈ ಬಗ್ಗೆ ಆಗ್ರಹಿಸಲಿದೆ. ಬೇಡಿಕೆ ಎಷ್ಟಿದೆ ಎಂದು ತಿಳಿದು ಅದನ್ನು ಪೂರೈಸಬೇಕಾದದ್ದು ಸಂಬಂಧಪಟ್ಟ ಇಲಾಖೆ ಹಾಗೂ ಬೀಜ ನಿಗಮದ ಕರ್ತವ್ಯ. ರೈತರ ಬೇಡಿಕೆಯ ಹೊರ ತಾದ ಬೀಜ ಪಡೆದುಕೊಂಡು ಬಿತ್ತು ವಂತೆ ಒತ್ತಾಯಿಸುವುದು ಸರಿಯಲ್ಲ. ಮುಂದಿನ ವರ್ಷಗಳಲ್ಲೂ ಸಮಸ್ಯೆ ಆಗಬಾರದು ಎಂಬ ನಿಟ್ಟಿನಲ್ಲಿ ಭೇಟಿ ಮಾಡಿ ರೈತಪರ ಮನವಿ ಮಂಡಿಸಲಾಗುವುದು ಎಂದು ಕಾರ್ಕಳದ ಶಾಸಕ ಸುನಿಲ್ ಕುಮಾರ್ ತಿಳಿಸಿದ್ದಾರೆ. ಬೇಡಿಕೆಯಷ್ಟು ಪೂರೈಸಿ
ಉಡುಪಿ ಜಿಲ್ಲೆಯಲ್ಲಿ 38 ಸಾವಿರ ಹೆಕ್ಟೇರ್‌ನಲ್ಲಿ ಶೇ. 95ರಷ್ಟು ಎಂಒ4 ಭತ್ತ ಬೆಳೆಯಲಾಗುತ್ತಿದೆ. ಆದರೆ ರೈತರ ಬೇಡಿಕೆಗೆ ಅನುಗುಣವಾಗಿ ಎಂಒ4 ಬಿತ್ತನೆ ಬೀಜ ಪೂರೈಕೆ ಆಗುತ್ತಿಲ್ಲ. ಬಿತ್ತನೆ ಬೀಜ ಪೂರೈಸಲು ರೈತರಿಂದ ಆಗ್ರಹ ಕೇಳಿ ಬರುತ್ತಿದೆ. ಪ್ರತೀ ವರ್ಷವೂ ಬೇಡಿಕೆಯಷ್ಟು ಪೂರೈಕೆ ಆಗುತ್ತಿಲ್ಲ ಎಂಬುದು ರೈತರ ಅಳಲು ಎಂದು ಶಾಸಕರು ಪತ್ರದಲ್ಲಿ ವಿವರಿಸಿದ್ದಾರೆ.
Related Articles
ಉಡುಪಿ ಜಿಲ್ಲೆಯಲ್ಲಿ ಎಂಒ4 ಬಿತ್ತನೆ ಬೀಜ ಕೊರತೆ ಕುರಿತು ಉದಯವಾಣಿ ಜೂ. 7ರಂದು ವರದಿ ಮಾಡಿತ್ತು.
Advertisement
ದರ ಇಳಿಸಲು ಆಗ್ರಹಇಲಾಖೆ ನೀಡುವ ಬಿತ್ತನೆ ಬೀಜದ ದರವು ಹೆಚ್ಚಿರುವ ಬಗ್ಗೆಯೂ ದೂರುಗಳು ಕೇಳಿ ಬರುತ್ತಿವೆ. ಆದ್ದರಿಂದ ದರ ಇಳಿಸಿ ಸಕಾಲದಲ್ಲಿ ಬೀಜ ದೊರೆಯಲು ಕ್ರಮ ಕೈಗೊಳ್ಳಬೇಕೆಂದು ಶಾಸಕರು ಪತ್ರದಲ್ಲಿ ಒತ್ತಾಯಿಸಿದ್ದಾರೆ. ಈ ವರ್ಷಕ್ಕಷ್ಟೇ ಅಲ್ಲ, ಮುಂದಿನ ವರ್ಷಗಳಿಗೂ ಇದೇ ಕ್ರಮ ಕೈಗೊಳ್ಳುವ ಮೂಲಕ ರೈತರ ಹಿತ ಕಾಪಾಡಲು ಆಗ್ರಹಿಸಲಾಗಿದೆ.