ಬೆಂಗಳೂರು: ಚಿತ್ರಮಂದಿರಗಳು ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರನ್ನು ಹೊಂದುವ ಮೂಲಕ ಸಿನೆಮಾ ಪ್ರದರ್ಶನಕ್ಕೆ ಅವಕಾಶ ನೀಡಬೇಕು ಎಂದು ಶಾಸಕರ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿದೆ.
ಬಿಜೆಪಿ ಶಾಸಕರ ವಿಭಾಗವಾರು ಸಭೆಯಲ್ಲಿ ಮಲೆನಾಡು ಭಾಗದ ಶಾಸಕರೊಬ್ಬರು ಈ ಬೇಡಿಕೆ ಇರಿಸಿದ್ದಾರೆ.
ಸಿನಿಮಾ ಥಿಯೇಟರ್, ಪಿವಿಆರ್ ಗಳಲ್ಲಿ ಪ್ರೇಕ್ಷಕರ ಆಗಮನಕ್ಕೆ ಶೇಕಡಾ 100% ಅವಕಾಶ ಕೊಡಬೇಕು. ಪ್ರೇಕ್ಷಕರ ಸಂಖ್ಯೆ 50% ಇರುವುದನ್ನು 100%ಕ್ಕೆ ಹೆಚ್ಚಳ ಮಾಡಬೇಕು. ತಮಿಳುನಾಡಿನ ಮಾದರಿಯಲ್ಲಿ ಸರ್ಕಾರ ಅನುಮತಿ ಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಏಕದಿನ ಕ್ರಿಕೆಟ್ ಗೆ 50 ವರ್ಷ: ಇಲ್ಲಿದೆ ಏಕದಿನ ಕ್ರಿಕೆಟ್ ನ 50 ಸ್ವಾರಸ್ಯಗಳು!
ಕೊರೊನಾ ಸಂದರ್ಭದಲ್ಲಿ ಸಿನಿಮಾ ಕ್ಷೇತ್ರಕ್ಕೂ ಹೆಚ್ಚು ಹೊಡೆತ ಬಿದ್ದಿದೆ.ಸಿನಿಮಾ ಕ್ಷೇತ್ರ ಇನ್ನೂ ಚೇತರಿಸಿಕೊಂಡಿಲ್ಲ. ಹಾಗಾಗಿ 100ರಷ್ಟು ರಿಲ್ಯಾಕ್ಸೇಶನ್ ಕೊಡಿ ಎಂದು ಶಾಸಕರು ಮನವಿ ಮಾಡಿಕೊಂಡಿದ್ದಾರೆ.
ಶಾಸಕರ ಮನವಿ ಆಲಿಸಿದ ಸಿಎಂ, ಶೀಘ್ರದಲ್ಲೇ ಆ ಬಗ್ಗೆ ನಿರ್ಧಾರ ಮಾಡುವುದಾಗಿ ಭರವಸೆ ನೀಡಿದರು.