Advertisement
ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಭಾಗವನ್ನು ನೀರಾವರಿ ಇಂಡಿ ನಗರಸಭೆ, ಜಿಲ್ಲಾ ಕೇಂದ್ರ ಮಾಡುವುದು ನನ್ನ ರಾಜಕೀಯ ಭವಿಷ್ಯದ ಕನಸು. ನಂಜುಂಡಪ್ಪ ವರದಿ ಕೂಡ ಸಣ್ಣ ಜಿಲ್ಲೆಗಳ ಸೃಷ್ಟಿಯಿಂದ ತ್ವರಿತ ಅಭಿವೃದ್ಧಿ ಪ್ರತಿಪಾದಿಸಿದೆ. ಇಂಡಿ ಜಿಲ್ಲೆ ಸೃಷ್ಟಿಸಲು ಸದನದಲ್ಲಿ ದ್ವನಿ ಎತ್ತಿದ್ದೇನೆ ಎಂದರು.
Related Articles
Advertisement
ಲಿಂಬೆ ಅಭಿವೃದ್ಧಿ ಮಂಡಳಿ, ಇಂಡಿ ಭಾಗದಲ್ಲಿ ಬೆಳೆಯುವ ಕಾಗ್ಜಿ ಲಿಂಬೆಗೆ ಜಿಐ ಟ್ಯಾಗಿಂಗ್ ಮಾನ್ಯತೆ ಸಿಕ್ಕಿದೆ. ಇದು ನಾನು ರಾಜಕೀಯ ರಹಿತ ಹಾಗೂ ಅಭಿವೃದ್ಧಿ ವಿಷಯದಲ್ಲಿ ನಾನು ತೋರಿದ ಬದ್ಧತೆಯ ಪ್ರತೀಕ ಎಂದರು.
ಇಂಡಿ ಮಾತ್ರವಲ್ಲ ಮುದ್ದೇಬಿಹಾಳ ತಾಲೂಕಿನಿಂದ ವಿಜಯಪುರ ಜಿಲ್ಲಾ ಕೇಂದ್ರಕ್ಕೆ ಇರುವ ಅಂತರ ನೂರಾರು ಕಿ.ಮೀ. ದೂರವಿದೆ. ಬಾಗಲಕೋಟೆ ಜಿಲ್ಲೆಯಿಂದ ಜಮಖಂಡಿ ಪ್ರತ್ಯೇಕ ಜಿಲ್ಲೆ ಮಾಡುವ ಕೂಗಿದೆ. ಸುಗಮ ಆಡಳಿತಕ್ಕಾಗಿ ಸಣ್ಣ ಜಿಲ್ಲೆಗಳ ರಚನೆ ಅಗತ್ಯವಿದೆ ಎಂದರು.
ಸಂಸದೀಯ ವ್ಯವಸ್ಥೆಯಲ್ಲಿ ನಂಬಿಕೆ ಇರುವ ನಾನು ಹೋರಾಟ ರಹಿತವಾಗಿ ನಮ್ಮ ಭಾಗದಲ್ಲಿ ಅಭಿವೃದ್ಧಿ ಮಾಡಿದ್ದೇನೆ. ಹೀಗಾಗಿ ಇಂಡಿ ಜಿಲ್ಲಾ ನಿರ್ಮಾಣ ನನ್ನ ಕನಸಿನ ಯೋಜನೆ ಖಂಡಿತಾ ಸಾಧ್ಯವಿದೆ ಎಂದರು.
ಇದನ್ನೂ ಓದಿ: ವಿಐಎಸ್ಎಲ್ ವಿಚಾರದಲ್ಲಿ ಬಿಜೆಪಿಯವರು ಕೊಟ್ಟ ಮಾತು ಉಳಿಸಿಕೊಂಡಿಲ್ಲ: ಡಿ.ಕೆ. ಶಿವಕುಮಾರ್