Advertisement

ಸರ್ವಧರ್ಮ ಸಮನ್ವಯತೆ ಮೆರೆದ ಶಾಸಕ ಸೊರಕೆ

07:05 AM Apr 24, 2018 | |

ಕಾಪು: ಕಾಪು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆಗೂ ಮೊದಲು ಶಾಸಕ ವಿನಯಕುಮಾರ್‌ ಸೊರಕೆ ಅವರು ಸರ್ವ ಧರ್ಮದ ಮುಖಂಡರನ್ನು ಭೇಟಿ ಮಾಡಿ ದೇವಸ್ಥಾನ, ಚರ್ಚ್‌, ಮಸೀದಿಯಲ್ಲಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು.

Advertisement

ಮಂಗಳೂರಿನ ಕದ್ರಿ ಮಂಜುನಾಥೇಶ್ವರ ದೇವರಿಗೆ ಸಲ್ಲಿಸಿ, ನಂತರ ಪಡುಬಿದ್ರಿ ಖಡೆYàಶ್ವರಿ ನಾಗಬ್ರಹ್ಮ ಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕಾಪು ಜನಾರ್ದನ ದೇವಸ್ಥಾನ, ವೆಂಕಟರಮಣ ದೇವಸ್ಥಾನ ಮತ್ತು ಕಾಪು ಮಾರಿಗುಡಿಯಲ್ಲಿ ಮತ್ತು ಕಟಪಾಡಿ ವಿಶ್ವನಾಥ ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸಿದರು.


ಪೊಲಿಪು ಮಸೀದಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ, ಮದರಸಾದ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ಹಂಚಿದರು. ಉದ್ಯಾವರ ಚರ್ಚ್‌ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ನಂತರ ಉಡುಪಿ ಬಿಷಪ್‌ರನ್ನು ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಬಾಷೆಲ್‌ ಮಿಷನ್‌ ಚರ್ಚ್‌ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.


ಮಾಜಿ ಶಾಸಕ ಯು.ಆರ್‌. ಸಭಾಪತಿ, ಕೆಪಿಸಿಸಿ ಕಾರ್ಯದರ್ಶಿಗಳಾದ ಎಂ.ಎ. ಗಫೂರ್‌, ಡಾ|ದೇವಿಪ್ರಸಾದ್‌ ಶೆಟ್ಟಿ, ಜಿಲ್ಲಾ ಕಾಂಗ್ರೆಸ್‌ ವೀಕ್ಷಕ ಅಶೋಕ್‌ ಕುಮಾರ್‌ ಕೊಡವೂರು, ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷರಾದ ಕಾಪು ದಿವಾಕರ ಶೆಟ್ಟಿ, ಸರಸು ಡಿ. ಬಂಗೇರ, ಕಾಪು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನವೀನ್‌ಚಂದ್ರ ಜೆ. ಶೆಟ್ಟಿ, ಪಕ್ಷದ ಮುಖಂಡರಾದ ಶಿವಾಜಿ ಎಸ್‌. ಸುವರ್ಣ, ವಿಶ್ವಾಸ್‌ ಅಮೀನ್‌, ಮನಹರ್‌ ಇಬ್ರಾಹಿಂ, ವೈ. ಸುಕುಮಾರ್‌, ವಿನಯ ಬಲ್ಲಾಳ್‌, ದಿವಾಕರ ಶೆಟ್ಟಿ ಕಳತ್ತೂರು, ದೀಪಕ್‌ ಕುಮಾರ್‌ ಎರ್ಮಾಳ್‌, ನವೀನ್‌ ಎನ್‌. ಶೆಟ್ಟಿ, ಕೆ.ಎಚ್‌. ಉಸ್ಮಾನ್‌, ಕಿರಣ್‌ ಕುಮಾರ್‌ ಉದ್ಯಾವರ, ವೈ. ಗಂಗಾಧರ ಸುವರ್ಣ, ರಾಜೇಶ್‌ ರಾವ್‌ ಪಾಂಗಾಳ, ಹರೀಶ್‌ ಶೆಟ್ಟಿ ಬೆಳ್ಳೆ, ಮಾಧವ ಆರ್‌. ಪಾಲನ್‌, ಶೇಖರ ಸಾಲ್ಯಾನ್‌, ವಿವಿಧ ಜನಪ್ರತಿನಿಧಿಗಳು, ಪಕ್ಷದ ಮುಖಂಡರು ಮತ್ತು ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next