Advertisement

ಒಳಚರಂಡಿ ನಿರ್ಮಾಣಕ್ಕೆ ಶಾಸಕರಲ್ಲಿ ಕರವೇ ಒತ್ತಾಯ

03:17 PM Jan 25, 2022 | Team Udayavani |

ಲಿಂಗಸುಗೂರು: ಸ್ಥಳೀಯ ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳಲ್ಲಿ ಒಳಚರಂಡಿಗಳನ್ನು ನಿರ್ಮಾಣ ಮಾಡುವಂತೆ ಆಗ್ರಹಿಸಿ ಕರವೇ ಕಾರ್ಯಕರ್ತರು ಸೋಮವಾರ ಶಾಸಕ ಡಿ.ಎಸ್‌. ಹೂಲಗೇರಿ ಅವರಿಗೆ ಮನವಿ ಸಲ್ಲಿಸಿದರು.

Advertisement

ಸ್ಥಳೀಯ ಪುರಸಭೆಯ ಹೊಸ ಬಡವಾಣೆಗಳಲ್ಲಿ ಮನೆಗಳ ನಿರ್ಮಾಣ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳಲ್ಲಿಯೂ ಒಳಚರಂಡಿ ನಿರ್ಮಾಣದ ಅಗತ್ಯವಿದೆ. ಪಟ್ಟಣದ ಕೆಲವಡೆ ಚರಂಡಿಗಳು ತುಂಬಿ ರಸ್ತೆಯ ಮೇಲೆಲ್ಲಾ ಕಲುಷಿತ ನೀರು ಹರಿಯುತ್ತಿದೆ. ಇದು ಸಾಂಕ್ರಾಮಿಕ ರೋಗಗಳ ಹರಡಲು ಕಾರಣವಾಗಿದೆ. ನಗರೋತ್ಥಾನ ಯೋಜನೆಯಡಿ ಎಲ್ಲಾ ಬಡಾವಣೆಗಳಲ್ಲಿ ಒಳಚರಂಡಿ ವ್ಯವಸ್ಥೆಗೆ ಕ್ರಮಕೈಗೊಳ್ಳಬೇಕು. ಪಟ್ಟಣದ ಬಸ್‌ ನಿಲ್ದಾಣ ವೃತ್ತದಿಂದ ಸರ್ಕಾರಿ ಪಿಯು ಕಾಲೇಜು ಮತ್ತು ಗುಡದನಾಳ ಕ್ರಾಸ್‌ ವರಿಗೆ ರಾಯಚೂರು ನಗರದಲ್ಲಿ ಅಳವಡಿಸಿರುವ ಮಾದರಿಯಲ್ಲಿ ಎಲ್‌ ಇಡಿ ಸ್ಟ್ರೀಪ್‌ ಲೈಟ್‌ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕರವೇ ಅಧ್ಯಕ್ಷ ಜೀಲಾನಿ ಪಾಶಾ, ಅಮರೇಶ ಹಟ್ಟಿ, ರವಿಕುಮಾರ ಬರಗುಡಿ, ಹನುಮಂತ ನಾಯಕ, ಶಿವರಾಜ ನಾಯ್ಕ ಹಾಗೂ ಇನ್ನಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next