Advertisement

ಮದ್ಯದಂಗಡಿ ತೆರವಿಗಾಗಿ ಶಾಸಕ ಸುರೇಶ್‌ಗೌಡ ಧರಣಿ

06:00 PM Jan 11, 2018 | Team Udayavani |

ತುಮಕೂರು: ನಗರ ಸಮೀಪದ ಹೆಗ್ಗೆರೆ ಹೊಸ ಬಡಾವಣೆಯಲ್ಲಿ ಆರಂಭಿಸಿರುವ ಮದ್ಯದ ಅಂಗಡಿಯನ್ನು ಈ ಕೂಡಲೇ ಮುಚ್ಚಬೇಕೆಂದು ಒತ್ತಾಯಿಸಿ ಗ್ರಾಮಾಂತರ ಶಾಸಕ ಬಿ. ಸುರೇಶ್‌ ಗೌಡ ನೇತೃತ್ವದಲ್ಲಿ ಹೆಗ್ಗೆರೆ ಗ್ರಾಮಸ್ಥರು ಅಬಕಾರಿ ಉಪ ಆಯುಕ್ತರ ಕಚೇರಿ ಒಳಗೆ ಧರಣಿ ನಡೆಸಿದರು.

Advertisement

ನಾಗರಿಕರ ವಿರೋಧ: ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೆಗ್ಗೆರೆಯ ಹೊಸ ಬಡಾವಣೆಯಲ್ಲಿ ಮದ್ಯದ ಅಂಗಡಿಯನ್ನು ತೆರೆಯಬಾರದೆಂದು ಇಲ್ಲಿಯ ನಾಗರಿಕರ ಒತ್ತಾಯವಾಗಿತ್ತು. ಆದರೆ ಅಧಿಕಾರಿಗಳು ಕಾನೂನನ್ನು ಗಾಳಿಗೆ ತೂರಿ ಮದ್ಯದ ಅಂಗಡಿಯನ್ನು ಪ್ರಾರಂಭ ಮಾಡಿದ್ದಾರೆಂದು ಆರೋಪಿಸಿದರು.

ಸ್ಪಂದಿಸದ ಅಧಿಕಾರಿಗಳು: ಮದ್ಯದಂಗಡಿಯನ್ನು ತೆರವುಗೊಳಿಸ ಬೇಕೆಂದು ಅಬಕಾರಿ ಇಲಾಖೆ ಉಪ ಆಯುಕ್ತರಿಗೆ ಮನವಿ ಸಲ್ಲಿಸಲು ಶಾಸಕ ಬಿ. ಸುರೇಶ್‌ ಗೌಡ ಮತ್ತು ಜಿಪಂ ಉಪಾಧ್ಯಕ್ಷೆ ಶಾರದಾ ಸೇರಿದಂತೆ ಇತರೆ ಮುಖಂಡರು ಬಂದಾಗ ಅಧಿಕಾರಿಗಳಿಂದ ಸರಿಯಾದ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಶಾಸಕರು ಮತ್ತು ಇತರೆ ಜನ ಪ್ರತಿನಿಧಿಗಳು ನಾಗರಿಕರು ಕಚೇರಿ ಒಳಗೆ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಆರಂಭಿಸಿದರು.

ನಿಯಮ ಉಲ್ಲಂಘನೆ: ಈ ವೇಳೆ ಮಾತನಾಡಿದ ಶಾಸಕ ಬಿ. ಸುರೇಶ್‌ ಗೌಡ ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯವರ
ದಂಧೆ ಜೋರಾಗಿ ನಡೆಯುತ್ತಿದೆ. ಎಗ್ಗಿಲ್ಲದೆ ಅಬಕಾರಿ ಕಾಯ್ದೆ ರೂಲ್‌ 5 ಅನ್ನು ಮನಸೋಇಚ್ಛೆ ದುರ್ಬಳಕೆ ಮಾಡಿ
ಕೊಂಡಿದ್ದಾರೆ ಲಿಕ್ಕರ್‌ ಲಾಬಿ ಎಂದೇ ಖ್ಯಾತಿ ಪಡೆದಿರುವ ಅಬಕಾರಿ ಇಲಾಖೆಯವರು ಭಾರೀ ಹಣದ ವಹಿವಾಟು ಮಾಡಿಕೊಂಡು ಅಬಕಾರಿ ಕಾಯ್ದೆ 5,4ನ್ನು ಉಲ್ಲಂಘನೆ ಮಾಡಿದ್ದಾರೆಂದು ಆರೋಪಿಸಿದರು.

ತುಮಕೂರು ಗ್ರಾಮಾಂತರ ಕ್ಷೇತ್ರದ ಹೆಗ್ಗೆರೆ ಹೊಸ ಬಡಾವಣೆ ಯಲ್ಲಿ ಎಸ್ಸಿ,ಎಸ್ಟಿ ಸಮುದಾಯವೇ ಹೆಚ್ಚಿದ್ದು ಇಲ್ಲಿ ಪ್ರಾರಂಭ ಮಾಡಿರುವ ಮದ್ಯದ ಅಂಗಡಿಯಿಂದ ಸುತ್ತ ಮುತ್ತ ಇರುವ ನಾಗರಿಕರಿಗೆ ತೊಂದರೆಯಾಗುತ್ತಿದೆ. ಈ ಪ್ರದೇಶದಲ್ಲಿ ಗಣಪತಿ ದೇವಾಲಯವಿದ್ದು, ಇಂತಹ ಕಡೆ ಮದ್ಯದ ಅಂಗಡಿ ನೀಡಬಾರದು ಎಂಬ ನಿಯಮ ಉಲ್ಲಂಘನೆ
ಮಾಡಿ ಬಾರ್‌ ಗೆ ಲೈಸನ್ಸ್‌ ನೀಡಿರುವ ಅಬಕಾರಿ ಇಲಾಖೆ ಅಧಿಕಾರಿಗಳನ್ನು ಹೊರಗೆ ಬಿಡುವುದಿಲ್ಲ ಎಂದು ಆಕ್ರೋಶ
ವ್ಯಕ್ತಪಡಿಸಿದರು. 

Advertisement

ಅಕ್ರಮ ಮದ್ಯ ಮಾರಾಟ: ಜಿಲ್ಲೆಯಲ್ಲಿ ಅಬಕಾರಿ ಇಲಾಖೆ ಸತ್ತು ಹೋಗಿದೆ ಕಿರಾಣಿ ಅಂಗಡಿಗಳಲ್ಲಿ ಎಲ್ಲ ಅವ್ಯಾಹತವಾಗಿ ಮದ್ಯದೊರೆಯುತ್ತಿದೆ. ಬೆಳಗ್ಗೆ ಎದ್ದ ಕೂಡಲೇ ಕಾಫಿ ಕುಡಿದ ರೀತಿ ಹೆಂಡ ಕುಡಿಯುವವರ ಸಂಖ್ಯೆ ಹೆಚ್ಚಾಗಿದೆ. ಮನೆಗಳಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ವಿದ್ಯಾರ್ಥಿಗಳಿಗೆ ಹೆಣ್ಣು ಮಕ್ಕಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಆಪಾದಿಸಿದರು.

ಅಧಿಕಾರಿಗಳ ಭರವಸೆ: ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ಉಪ ಆಯುಕ್ತರು 5 ದಿನಗಳ ಗಡುವು ಪಡೆದುಕೊಂಡು ಮದ್ಯದ ಅಂಗಡಿಯನ್ನು ಬೇರೆಡೆಗೆ ವರ್ಗಾವಣೆ ಮಾಡುವುದಾಗಿ ಭರವಸೆ ನೀಡಿದರು. ಆನಂತರ ಅಧಿಕಾರಿಗಳು ಭರವಸೆ ನೀಡಿದ ಮೇಲೆ ಶಾಸಕರು ಧರಣಿ ವಾಪಸ್‌ ಪಡೆದು 5 ದಿನದಲ್ಲಿ ಮದ್ಯದಂಗಡಿ ತೆರವುಗೊಳಿಸದಿದ್ದರೆ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಜಿಪಂ ಸದಸ್ಯ ಗೂಳೂರು ಶಿವಕುಮಾರ್‌, ನರಸಿಂಹಮೂರ್ತಿ, ಅನಿತಾ, ತಾಪಂ ಅಧ್ಯಕ್ಷ ಗಂಗಾಂಜಿನೇಯ, ಸದಸ್ಯರಾದ ವಿಜಿಕುಮಾರ್‌, ಅಣ್ಣೇನಹಳ್ಳಿ ಶಿವಕುಮಾರ್‌ ಸೇರಿದಂತೆ ಹೆಗ್ಗೆರೆ ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next