ಉಡುಪಿಯಲ್ಲಿ ಶನಿವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಜನ ಮಾನಸದಿಂದ ಸಂಪೂರ್ಣ ದೂರವಾಗಿದೆ. ಚುನಾವಣೆಯಲ್ಲಿ ಸೋತಾಗಲೆಲ್ಲ ಒಂದೊಂದು ಆರೋಪ ಮಾಡುವುದು ಸಾಮಾನ್ಯ ವಾಗಿಬಿಟ್ಟಿದೆ. ಈಗ ಮತದಾರರ ಪಟ್ಟಿ ಸರಿಯಿಲ್ಲ ಎನ್ನುತ್ತಿದ್ದಾರೆ ಎಂದರು.
Advertisement
ಕಾರ್ಕಳದಲ್ಲೇ ಸ್ಪರ್ಧೆಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್‌ನವರು ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡುವುದನ್ನು ಬಿಟ್ಟು ವೈಯಕ್ತಿಕ ಟೀಕೆ, ಸರಕಾರ ಹಾಗೂ ಶಾಸಕ, ಸಚಿವರ ವಿರುದ್ಧ ಅಪಪ್ರಚಾರ, ಸುಳ್ಳು ಆರೋಪ ಮಾಡವುದರಲ್ಲಿ ನಿರತರಾಗುತ್ತಾರೆ. ಸುನಿಲ್ ಕುಮಾರ್ ಬೇರೆ ಕಡೆ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಸುಳ್ಳು ಸುದ್ದಿಯನ್ನು ಕಾಂಗ್ರೆಸ್‌ನವರೇ ಹಬ್ಬಿಸಿದ್ದು. ನಾನು ಪಕ್ಷದಿಂದ ಕಾರ್ಕಳದಲ್ಲೇ ಟಿಕೆಟ್ ನೀಡಬೇಕು ಎಂದು ಕೋರಿಕೊಂಡಿದ್ದೇನೆ ಹಾಗೂ ಕಾರ್ಕಳದಿಂದಲೇ ರಾಜಕೀಯ ಆರಂಭಿ ಸಿದ್ದು, ಇಲ್ಲಿಯೇ ಮುಂದು ವರಿಯಲಿದ್ದೇನೆ ಎಂದು ತಿಳಿಸಿದರು.
ರೌಡಿಗಳನ್ನು ಅಥವಾ ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರನ್ನು ಪಕ್ಷಕ್ಕೆ ಆಹ್ವಾನಿ ಸುವ ಪ್ರಶ್ನೆಯೇ ಇಲ್ಲ ಮತ್ತು ಅಂಥವರನ್ನು ವೈಭವಿಕರಿಸುವುದು ಸರಿಯಲ್ಲ. ಈ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರು ಸೂಕ್ತ ನಿರ್ದೇಶನ ನೀಡಿದ್ದಾರೆ. ಸಣ್ಣಪುಟ್ಟ ತಪ್ಪುಗಳು ಆಗಿದ್ದರೆ ಅದನ್ನು ಸರಿಪಡಿಸಿಕೊಳ್ಳಲಾಗುವುದು ಎಂದರು. ವಿದ್ಯುತ್ ದರ ಇಳಿಸಲು ಕ್ರಮ
ರಾಜ್ಯದಲ್ಲಿ ಇಂಧನ ಇಲಾಖೆಯಿಂದ ಸಾಕಷ್ಟು ಸುಧಾರಣೆ ತರುತ್ತಿದ್ದೇವೆ. ಈಗಾಗಲೇ ಎಲ್‌ಎನ್‌ಡಿಯಿಂದ ಆಗಿರುವ ನಷ್ಟ ಪತ್ತೆ ಮಾಡಿ ಅದನ್ನು ಸರಿದೂಗಿಸುವ ಹಾಗೂ ನಷ್ಟ ಕಡಿಮೆ ಮಾಡುವ ಪ್ರಯತ್ನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ವಿವಿಧ ಸಂಸ್ಥೆಗಳ ಜತೆಗೆ ಮಾತುಕತೆ ಮಾಡಿದ್ದೇವೆ. ಇಂಧನ ಇಲಾಖೆಯ ಶುಲ್ಕ/ಟ್ಯಾರಿಫ್ ಕಡಿಮೆ ಮಾಡುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿದ್ದೇವೆ. ಈಗಾಗಲೇ ಎಸ್ಕಾಂ ಇದೇ ವಿಚಾರವಾಗಿ ಮುಂದೆ ಬಂದಿದೆ. 70 ಪೈಸೆಯಿಂದ 20 ರೂ. ವರೆಗೂ ಕಡಿಮೆ ಮಾಡುವ ಪ್ರಸ್ತಾವನೆ ಮುಂದಿಟ್ಟಿದೆ. ಕೆಲವು ದಿನದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ಈ ಮೂಲಕ ಜನಸ್ನೇಹಿ ಆಡಳಿತ ನೀಡಲಿದ್ದೇವೆ. ಈಗಾಗಲೇ 100ಕ್ಕೂ ಅಧಿಕ ಸಬ್‌ಸ್ಟೇಷನ್ ಉನ್ನತೀಕರಿಸಿ, 40 ಹೊಸ ಸಬ್‌ಸ್ಟೇಷನ್ ಆರಂಭಿಸಿದ್ದೇವೆ ಎಂದು ಸಚಿವ ಸುನಿಲ್ ಕುಮಾರ್ ಮಾಹಿತಿ ನೀಡಿದರು.