Advertisement

ಶಾ ಅವರಿಗೆ 5 ಕೆ.ಜಿಯ ಬೆಳ್ಳಿಯ ಕಿರೀಟ, ಗದೆ ನೀಡಿದ ಶಾಸಕ ಶರಣು ಸಲಗರ್

06:28 PM Mar 03, 2023 | Team Udayavani |

ಬೀದರ್ : ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿಯಲು ಪಣ ತೊಟ್ಟಿರುವ ಕೇಸರಿ ಪಡೆ, ಶುಕ್ರವಾರ ಬಸವೇಶ್ವರರ ಕಾರ್ಯಕ್ಷೇತ್ರ ಬಸವಕಲ್ಯಾಣದಲ್ಲಿ ಮೂರನೇ ಹಂತದ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದೆ. ಈ ಮೂಲಕ ಕಲ್ಯಾಣ ಕರ್ನಾಟಕ ಭಾಗದ ಹೆಚ್ಚು ವಿಧಾನಸಭೆ ಕ್ಷೇತ್ರಗಳಲ್ಲಿ ಕಮಲ ಅರಳಿಸಲು ಬಿಜೆಪಿ ಪ್ರಚಾರಕ್ಕೆ ಕಹಳೆ ಮೊಳಗಿಸಿದೆ.

Advertisement

ಲಿಂಗಾಯತರ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿರುವ ಬಸವ ಕಲ್ಯಾಣದ ಥೇರ್ ಮೈದಾನದಲ್ಲಿ ಶುಕ್ರವಾರ ವಿಜಯ ಸಂಕಲ್ಪ ಯಾತ್ರೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಯಾತ್ರೆಗೆ ಚಾಲನೆ ನೀಡಿದ್ದಾರೆ. ನಂತರ ವಿಶ್ಚದ ಮೊದಲ ‘ಸಂಸತ್’ ಖ್ಯಾತಿಯ ಅನುಭವ ಮಂಟಪ್ಪಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ವೇಳೆ ಶರಣರ ಸಂದೇಶ, ವಚನ ಚಳುವಳಿಯನ್ನು ಸ್ಮರಿಸಿದ್ದಾರೆ.

ಬಸವಣ್ಣನ ನೆಲದಿಂದ ಬಿಜೆಪಿ ವೀರಶೈವ- ಲಿಂಗಾಯತರ ಪರವಾಗಿದೆ ಎಂಬ ಸಂದೇಶ ನೀಡಿದ್ದಾರೆ. ಹರಿದು ಹಂಚಿ ಹೋಗುತ್ತಿರುವ ಕಲ್ಯಾಣ ಕರ್ನಾಟಕ ಭಾಗದ ಪ್ರಬಲ, ಸಾಂಪ್ರದಾಯಿಕ ಮತಗಳನ್ನು ಸೆಳೆಯುವ ಪ್ರಯತ್ನಕ್ಕೆ ಬಿಜೆಪಿ ಮುಂದಾಗಿದೆ.

ಅಮಿತ್ ಶಾ ಅವರಿಗೆ ಶಾಸಕ ಶರಣು ಸಲಗರ್ ಅವರು 5 ಕೆ.ಜಿಯ ಬೆಳ್ಳಿಯ ಕಿರೀಟ ಮತ್ತು ಗದೆ ನೀಡಿ ಸತ್ಕರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next