Advertisement

ಕಳಪೆ ಗುಣಮಟ್ಟದ ಪಂಪ್‌ ವಾಪಸ್‌ ಕಳಿಸಿದ ಶಾಸಕ

06:03 PM Aug 08, 2021 | Team Udayavani |

ಮಧುಗಿರಿ: ರೈತರಿಗೆ ಗಂಗಾ ಕಲ್ಯಾಣ ಯೋಜನೆ ಯಡಿ ಡಿ.ದೇವರಾಜು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನೀಡುವ ಕೊಳವೆ ಬಾವಿಯ ಮೋಟಾರ್‌ ಪಂಪು ಹಾಗೂ ಇತರೆ ಸಾಮಗ್ರಿಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ಆಕ್ರೋಶಗೊಂಡ ಶಾಸಕ ಎಂ.ವಿ.ವೀರಭದ್ರಯ್ಯ ಇನ್ನು 10 ದಿನದೊಳಗೆ ರೈತರಿಗೆ ಟೆಕ್ಸ್‌ಮೋ ಕಂಪನಿಯ ಸಾಮಗ್ರಿಗಳನ್ನು ವಿತರಿಸಬೇಕು. ಇಲ್ಲವಾದರೆ ರೈತರೊಂದಿಗೆ ಇಲಾಖೆಯ ಮುಂದೆ ಧರಣಿ ನಡೆಸಲಾಗುವುದು ಎಂದು ಗುಡುಗಿದರು.

Advertisement

ಪಟ್ಟಣದ ದಂಡಿನಮಾರಮ್ಮ ದೇಗುಲದ ಆವರಣದಲ್ಲಿ ಗಂಗಾಕಲ್ಯಾಣ ಯೋಜನೆಯಡಿ 12 ರೈತರಿಗೆ ಮೋಟಾರ್‌ ಪಂಪು ಹಾಗೂ ಇತರೆ ಸಾಮಗ್ರಿ ವಿತರಿಸಿ ಮಾತನಾಡಿದ ಅವರು, ರೈತರ ಆರೋಪಗಳಿಗೆ ದನಿಯಾಗಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಮೊದಲು ಏಜೆನ್ಸಿಗೆ ನೀಡಿರುವ ಟೆಂಡರ್‌ ಪ್ರತಿ ನೀಡಿ. ನಾಳೆ ಕಚೇರಿಗೆ ಬರಲಿದ್ದು, ಕಳಪೆ ಗುಣಮಟ್ಟದ ಪಂಪು ಮೋಟಾರ್‌ ನೀಡಲು ಯಾರು ಹೇಳಿದ್ದು, ಇದರಲ್ಲಿ
ಕೇಬಲ್‌ ಸಹ ನೀಡಿಲ್ಲ ಎಂದು ಸಿಡಿಮಿಡಿಗೊಂಡರು. ಕ್ಷೇತ್ರದ ರೈತರು ಟೆಕ್ಸ್‌ಮೋ ಕಂಪನಿಯ ಪಂಪು ಮೋಟಾರ್‌ಗೆ ಹೊಂದಿಕೊಂಡಿದ್ದು, ಯಾವುದೋ ಕಳಪೆ ಕಂಪನಿಯನ್ನು ನಂಬಲ್ಲ. ಪದೇ ಪದೆ ರೈತರಿಗೆ ಆರ್ಥಿಕ ಬರೆ ಎಳೆಯುವುದು ಸರಿಯಲ್ಲ.ಈಕಂಪನಿಯ ಸಾಮಗ್ರಿಗಳನ್ನು ನಾನು ವಿತರಿಸಲ್ಲ. ಸೋಮ ವಾರಕಚೇರಿಗೆ ಬಂದು ಚರ್ಚಿಸುತ್ತೇನೆ ಎಂದರು.

ಇದನ್ನೂ ಓದಿ:ನಿಮ್ಮ ಭಾವನೆಯ ಆ ಮೂರು ಅಂಶಗಳ ಬಗ್ಗೆ ನಿಮಗೆ ಮಾಹಿತಿ ಇಲ್ಲ..! ಆ ಅಂಶಗಳ್ಯಾವುವು..?

ಕೊಳವೆ ಬಾವಿ ಕೊರೆಯುವಲ್ಲೂ ಮೋಸ:
2018-19ರಲ್ಲಿ 12 ರೈತರ ಜಮೀನಿನಲ್ಲಿ ಇಲಾಖೆಯಿಂದ ಕೊಳವೆಬಾವಿ ಕೊರೆದಿದ್ದು, ಇಲ್ಲೂ ಸಹ ಅಧಿಕಾರಿಗಳು ಸರ್ಕಾರಕ್ಕೆ ಹಾಗೂ ರೈತರಿಗೆ ಮೋಸ ಮಾಡಿರುವ ಬಗ್ಗೆ ರೈತರಿಂದ ಆರೋಪಗಳು ಕೇಳಿಬಂದಿವೆ. ತೆರಿಯೂರು ರೈತ ಲಕ್ಷ್ಮೀಪತಿ ಬಿನ್‌ ತಮ್ಮಯ್ಯ ಎಂಬುವವರು ಕೊಳವೆಬಾಯಿಯಲ್ಲಿ 670 ಅಡಿಗೆ ನೀರು ಸಿಕ್ಕಿದ್ದು, ಎಷ್ಟು ಅಡಿ ಕೊರೆಯ ಲಾಗಿದೆ ಎಂಬ ದಾಖಲೆಗೆ ನಮ್ಮಿಂದ ಸಹಿಮಾಡಿಕೊಂಡಿದ್ದು, ಅದು ಖಾಲಿ ದಾಖಲೆಯ ಪ್ರತಿಯಾಗಿತ್ತು. ಸಹಿ ಹಾಕಲು ನಿರಾಕರಿಸಿದ್ದಕ್ಕೆ ಬಿಲ್‌ ಮಾಡಲು ಸಾಧ್ಯವಿಲ್ಲ ಎಂದು ಹೆದರಿಸಿ ಸಹಿ ಪಡೆದುಕೊಂಡಿದ್ದಾರೆಂದು ಆರೋಪಿಸಿದರು.

ನಿಗಮದಲ್ಲಿ ಅಧಿಕಾರಿಗಳು ಏಜೆನ್ಸಿಗಳ ಪರ ವಾಗಿ ಕೆಲಸ ಮಾಡುತ್ತಿದ್ದು, ರೈತರ ಹೆಸರಲ್ಲಿ ಸರ್ಕಾರದಿಂದ ಹಣ ಲೂಟಿ ಮಾಡುತ್ತಿದ್ದಾರೆಂದು ಸಾಬೀ ತಾಗಿದೆ. ಈ ಬಗ್ಗೆ ನಿಗಮದ ಜಿಲ್ಲಾ ಅಧಿಕಾರಿ ಭಕ್ತವತ್ಸಲ ಅವರನ್ನು ಉದಯವಾಣಿ ಪ್ರಶ್ನಿಸಿದರೆ, ಅಂತಹ ಯಾವುದೇ
ಅಕ್ರಮ ನಡೆದಿದ್ದರೂ ಕಾನೂನು ಕ್ರಮ ನಿಶ್ಚಿತ. ಆದರೆ, ಪಂಪು ಮೋಟಾರ್‌ ವಿತರಣೆ ಯಲ್ಲಿ ರಾಮನಗರದ ಮೇಣ ವಿನಾಯಕ ಎಲೆಕ್ಟ್ರಿಕಲ್‌ ಅಂಡ್‌ ಎಂಜಿನಿಯರಿಂಗ್‌ ವರ್ಕ್ಸ್ ಅವ ರಿಗೆ ಜವಾಬ್ದಾರಿ ನೀಡಿದ್ದು, ಲೋಪವಾಗಿರುವ ಬಗ್ಗೆ ಶಾಸಕರ ‌ ಮಾತಿನಂತೆ ರೈತರಿಗೆ
ಟೆಕ್ಸ್‌ಮೋ ಕಂಪನಿಯ ಸಾಮಗ್ರಿ ವಿತರಿಸಲು ಕ್ರಮ ಕೈಗೊಳ್ಳುತ್ತೇವೆಎಂದರು.ಪುರಸಭೆಸದಸ್ಯಎಂ.ಆರ್‌. ಜಗನ್ನಾಥ್‌, ನಾರಾ ಯಣ್‌, ಜೆಡಿಎಸ್‌ ಎಸ್ಸಿ ಘಟಕದ ಅಧ್ಯಕ್ಷ ಗುಂಡ ಗಲ್ಲು ಶಿವಣ್ಣ, ಹಿರಿಯ ಮುಖಂಡ ತುಂಗೋಟಿ ರಾಮಣ್ಣ, ಮುಖಂಡ ರಾಮಕೃಷ್ಣ, ನರಸಿಂಹರೆಡ್ಡಿ, ಜಬೀ, ಶಫೀಕ್‌,
ನಾಸೀರ್‌ ಹಾಗೂ ಇತರರು ಇದ್ದರು.

Advertisement

ಹಿಂದೆ ಹಾಗೂ ನನ್ನ ಅವಧಿಯಲ್ಲೂ ಟೆಕ್ಸ್‌ಮೋ ಕಂಪನಿಯ ಸಾಮಗ್ರಿ ನೀಡಿದ್ದು, ಇದುಕಳಪೆ ಗುಣ ಮಟ್ಟದ್ದು. ರೈತರಿಗೆ ಇದರಿಂದ ಆರ್ಥಿಕ ಹೊಡೆತ ಬೀಳಲಿದ್ದು,ಕೇಬಲ್‌ಏನಾಯ್ತು. ಅಧಿಕಾರಿಗಳು 10 ದಿನದೊಳಗೆ ಗುಣಮಟ್ಟದ ಸಾಮಗ್ರಿ ನೀಡಬೇಕು.
-ಎಂ.ವಿ.ವೀರಭದ್ರಯ್ಯ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next