Advertisement

Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ

12:26 PM Nov 22, 2024 | Team Udayavani |

ಮಂಗಳೂರು: ದೇಶದಲ್ಲಿ ಈಗ ಸಾಂಕ್ರಾಮಿಕ ಕಾಯಿಲೆ ಗಳಿಂದ ಹೆಚ್ಚಾಗಿ ಜೀವನಶೈಲಿಗೆ ಸಂಬಂಧಿಸಿದ ಸಕ್ಕರೆ ಕಾಯಿಲೆ, ಕ್ಯಾನ್ಸರ್‌, ಮಾನಸಿಕ ಒತ್ತಡದಂತಹ ಅನಾರೋಗ್ಯಗಳು ಕಂಡುಬರುತ್ತಿವೆ. ಅದಕ್ಕೆ ಹೋಮಿಯೋಪತಿ ಸಹಿತ ಎಲ್ಲ ವೈದ್ಯಕೀಯ ಕ್ಷೇತ್ರದವರೂ ಸಂಶೋಧನೆ ನಡೆಸುವ ಮೂಲಕ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯ ಇದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

Advertisement

ಕಂಕನಾಡಿಯ ಫಾದರ್‌ ಮುಲ್ಲರ್ ಸಭಾಂಗಣದಲ್ಲಿ ಫಾದರ್‌ ಮುಲ್ಲರ್‌ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಎರಡು ದಿನಗಳ 27ನೇ ವಾರ್ಷಿಕ ರಾಷ್ಟ್ರೀಯ ಹೋಮಿಯೋಪತಿ ಸಮ್ಮೇಳನ “ರುಬಿಕಾನ್‌ 2024′ ಉದ್ಘಾಟಿಸಿ ಅವರು ಮಾತನಾಡಿದರು.

300-400 ವರ್ಷ ಹಳೆಯದಾದ ಹೋಮಿಯೋಪತಿ ಚಿಕಿತ್ಸೆ ಭಾರತಕ್ಕೆ ಜರ್ಮನಿಯಿಂದ ಬಂದರೂ ಇಲ್ಲಿ ಬಹಳಷ್ಟು ಬೆಳೆದಿದೆ. ಹಲವು ರೀತಿಯ ದೀರ್ಘ‌ಕಾಲೀನ ಸಮಸ್ಯೆಗಳಿಗೆ ಅದು ಪರಿಹಾರ ಒದಗಿಸುತ್ತಿದೆ ಎಂದರು.

ಫಾದರ್‌ ಮುಲ್ಲರ್‌ ಚಾರಿಟೆಬಲ್‌ ಸಂಸ್ಥೆಯ ನಿರ್ದೇಶಕ ವಂ| ರಿಚರ್ಡ್‌ ಅಲೋಶಿಯಸ್‌ ಕುವೆಲ್ಲೊ ಅಧ್ಯಕ್ಷತೆ ವಹಿಸಿ ಮಾತನಾಡಿ, ಫಾದರ್‌ ಮುಲ್ಲರ್ ಕಾಲೇಜಿಗೆ ವೈದ್ಯಕೀಯ ಮೌಲ್ಯಮಾಪನ ಮತ್ತು ಹೋಮಿಯೋಪತಿಯ ರೇಟಿಂಗ್‌ ಬೋರ್ಡ್‌ ಎ-ಪ್ಲಸ್‌ ಶ್ರೇಯಾಂಕವನ್ನು ಕೊಟ್ಟಿದೆ ಎಂದು ಪ್ರಕಟಿಸಿದರು.

ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಿ, ಸೀಟುಗಳ ಸಂಖ್ಯೆ ಹೆಚ್ಚಿಸುವ ಬಗ್ಗೆ ಹೋಮಿಯೋಪತಿ ಆಯೋಗ ಪರಿಶೀಲಿಸಬೇಕು ಎಂದರು. ಕಾಲೇಜಿನ ವಾರ್ಷಿಕ ಮ್ಯಾಗಜಿನ್‌ “ಪಯೋನಿಯರ್‌ 2024′ ಮತ್ತು “ರಿಸರ್ಚ್‌ ಬುಲೆಟಿನ್‌ 2024’ನ್ನು ಗಣ್ಯರು ಬಿಡುಗಡೆಗೊಳಿಸಿದರು.

Advertisement

ಫಾ| ಮುಲ್ಲರ್ ಕಾಲೇಜಿನ ಆಡಳಿತಾಧಿಕಾರಿ ವಂ| ಫೌಸ್ತಿನ್‌ ಲೋಬೊ ಸ್ವಾಗತಿಸಿ, ಪ್ರಾಂಶುಪಾಲ ಡಾ| ಇ.ಎಸ್‌.ಜೆ. ಪ್ರಭು ಕಿರಣ್‌ ವಂದಿಸಿದರು. ಡಾ| ದೀಪಾ ಪಾಯಸ್‌ ಮತ್ತು ಡಾ|ಮನೀಶ್‌ ಕುಮಾರ್‌ ತಿವಾರಿ ನಿರೂಪಿಸಿದರು.

ಫಾದರ್‌ ಮುಲ್ಲರ್‌ ಹೋಮಿಯೋ ಪತಿ ಫಾರ್ಮಸುಟಿಕಲ್‌ ಡಿವಿಜನ್‌ನ ಆಡಳಿತಾಧಿಕಾರಿ ವಂ| ನೆಲ್ಸನ್‌ ಡಿ. ಪಾಯಸ್‌, ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ವಂ| ಅಶ್ವಿ‌ನ್‌ ಎಲ್‌. ಕ್ರಾಸ್ತಾ, ಹೋಮಿ ಯೋಪತಿ ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲೆ ಡಾ| ವಿಲ್ಮಾ ಮೀರಾ ಡಿ’ ಸೋಜಾ, ವೈದ್ಯಕೀಯ ಅಧೀಕ್ಷಕ ಡಾ| ಗಿರೀಶ್‌ ನಾವಡ ಮತ್ತು ಹೋಮಿಯೋಪತಿ ಸಮ್ಮೇಳನದ ಸಂಘಟನ ಕಾರ್ಯದರ್ಶಿ ಡಾ| ರಂಜನ್‌ ಸಿ.ಬ್ರಿಟ್ಟೊ ಉಪಸ್ಥಿತರಿದ್ದರು.

ಮಿಯೋಪತಿಯಲ್ಲಿ ಭಾರತ ವಿಶ್ವಖ್ಯಾತಿ

ವಿಶ್ವದಲ್ಲೇ ಹೋಮಿಯೋಪತಿ ಚಿಕಿತ್ಸೆ ಹಾಗೂ ಶಿಕ್ಷಣದಲ್ಲಿ ಭಾರತ ಮುಂಚೂಣಿಯಲ್ಲಿದೆ. 3.6 ಲಕ್ಷದಷ್ಟು ಪ್ರಮಾಣೀಕೃತ ಹೋಮಿಯೋಪತಿ ಚಿಕಿತ್ಸಕರು ದೇಶದಲ್ಲಿದ್ದಾರೆ. 270 ಕಾಲೇಜುಗಳು ಹೋಮಿಯೋಪತಿ ಶಿಕ್ಷಣ ನೀಡುತ್ತಿದ್ದು, 32 ಸಂಶೋಧನ ಕೇಂದ್ರಗಳು ಕಾರ್ಯವೆಸಗುತ್ತಿವೆ ಎಂದು ರಾಷ್ಟ್ರೀಯ ಹೋಮಿಯೋಪತಿ ಆಯೋಗದ ಅಧ್ಯಕ್ಷ ಡಾ| ಅನಿಲ್‌ ಖುರಾನಾ ಹೇಳಿದರು.

ಭಾರತದಿಂದ ಈಗ ಹೋಮಿಯೋಪತಿ ಔಷಧಗಳನ್ನು ಹೊರದೇಶಗಳಿಗೆ ರಫ್ತು ಮಾಡಲಾಗುತ್ತಿದೆ. 2021ರಿಂದ ಹೋಮಿಯೋಪತಿ ಆಯೋಗವನ್ನು ಪುನರ್‌ ರಚಿಸಲಾಗಿದ್ದು, ಪಠ್ಯಕ್ರಮದ ಸುಧಾರಣೆಗೆ ಗಮನ ಹರಿಸಲಾಗಿದೆ. ಸದ್ಯ ಇರುವ ನಾಲ್ಕು ಸ್ನಾತಕೋತ್ತರ ಕೋರ್ಸ್‌ ಗಳಲ್ಲದೆ ಹೆಚ್ಚುವರಿಯಾಗಿ ಚರ್ಮಚಿಕಿತ್ಸೆ ಹಾಗೂ ಸಮುದಾಯ ಆರೋಗ್ಯ ಕೋರ್ಸ್‌ಗಳನ್ನೂ ಸೇರಿಸಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next