Advertisement

ಅಧಿಕಾರಿಗೆ ಶಾಸಕ ಸತೀಶ ತರಾಟೆ

11:46 AM Jan 12, 2020 | Team Udayavani |

ಯಮಕನಮರಡಿ: ಹುಕ್ಕೇರಿ ತಾಲೂಕಿನ ನರಸಿಂಗಪುರ ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕ್‌ ಸೋರಿಕೆ ಆಗುತ್ತಿರುವುದನ್ನು ವೀಕ್ಷಿಸಿದ ಶಾಸಕ ಸತೀಶ ಜಾರಕಿಹೊಳಿ ಸಂಬಂಧಿಸಿದ ಅಭಿಯಂತರನ್ನು ತರಾಟೆಗೆ ತೆಗೆದುಕೊಂಡರು.

Advertisement

ಈಗಾಗಲೇ ಈ ಹಿಂದೆ ನಿರ್ಮಾಣ ಮಾಡಿದ ಕುಡಿಯುವ ನೀರಿನ ಟ್ಯಾಂಕ್‌ಗಳೆಲ್ಲ ಸೋರಿಕೆ ಆಗುತ್ತಿವೆ. ಟ್ಯಾಂಕ್‌ ನಿರ್ಮಾಣದಲ್ಲಿ ಯಾವ ಗುಣಮಟ್ಟ ಕಾಯ್ದುಕೊಂಡಿದ್ದೀರಿ ಎಂದು ಪ್ರಶ್ನಿಸಿದ ಅವರು, ಹುಕ್ಕೇರಿ ತಾಲೂಕು ನೀರು ಮತ್ತು ನೈರ್ಮಲ್ಯ ಸಮಿತಿ ಅಭಿಯಂತ ರವಿ ಮುರಗಾಲಿ ಅವರನ್ನು ತರಾಟೆಗೆ ತಗೆದುಕೊಂಡರು. ಹತ್ತರಗಿ, ಪಾಶ್ಚಾಪುರ, ಹೆಬ್ಟಾಳ, ದಡ್ಡಿ ಜಿಪಂ ಕ್ಷೇತ್ರದಲ್ಲಿ 6ಹೊಸ ಕುಡಿಯುವ ನೀರಿನ ಟ್ಯಾಂಕ್‌ ಮಂಜೂರು ಆಗಿದ್ದು, ಅವುಗಳಲ್ಲಿ ಕಳಪೆ ಕಾಮಗಾರಿ ಕಂಡು ಬಂದರೆ ನೇರವಾಗಿ ಗುತ್ತಿಗೆದಾರರು ಹಾಗೂ ಅ ಧಿಕಾರಿಗಳೇ ಹೊಣೆಗಾರರಾಗುತ್ತಾರೆ ಎಂದು ಖಡಕ್‌ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮದಲ್ಲಿ  ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಮಂಜೂರಾದ 20ಲಕ್ಷ ರೂ. ವೆಚ್ಚದ ಹೊಸ ಕುಡಿಯುವ ನೀರಿನ 1ಲಕ್ಷ ಲೀಟರ್‌ ಸಾಮರ್ಥ್ಯದ ಟ್ಯಾಂಕಿಗೆ ಭೂಮಿ ಪೂಜೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ದಡ್ಡಿ ಜಿಪಂ ಸದಸ್ಯೆ ಮನಿಷಾ ಪಾಟೀಲ, ಮಣಗುತ್ತಿ ತಾಪಂ ಸದಸ್ಯ ಸುರೇಶ ಬೆಣ್ಣಿ, ಆರ್‌.ಕೆ.ದೇಸಾಯಿ, ಅಶೋಕ ತಳವಾರ, ಬಸವರಾಜ ದೇಸಾಯಿ, ವಿಠಲ ಪಾಶ್ಚಾಪುರಿ, ಗಣಪತಿ ಕಾಂಬಳೆ, ಸುನೀಲ ಹುಕ್ಕೇರಿ, ಸದಾಶಿವ ದುರ್ಗಪ್ಪಗೋಳ, ಭೀಮಶಿ ಗಡಕರಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next