ಕೆಜಿಎಫ್: “ಬೆಮಲ್ ಕಾರ್ಖಾನೆ ಮಾರಾಟ ಮಾಡಿ ಕಾರ್ಮಿಕರ ಹೊಟ್ಟೆ ಮೇಲೆ ಹೊಡೆಯಲು ಮೋದಿ ನೇತೃತ್ವದ ಸರ್ಕಾರ ನಿಶ್ಚಯಿಸಿದೆ. ನನ್ನ ಪ್ರಾಣ ಹೋದರೂ ಸರಿಯೇ ಬೆಮಲ್ ಖಾಸಗೀಕರಣ ಮಾಡಲು ಬಿಡುವುದಿಲ್ಲ’ ಎಂದು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.
ಬೆಮಲ್ ನಗರದಲ್ಲಿ ಖಾಸಗೀಕರಣ ವಿರೋಧಿಸಿ ಬೆಮಲ್ ಕಾರ್ಮಿಕರ ಸಂಘ ನಡೆಸುತ್ತಿರುವ 14 ನೇ ದಿನದ ನಿರಶನದಲ್ಲಿ ಪಾಲ್ಗೊಂಡು ಮಾತನಾಡಿದರು. ಮೋದಿ ಸರ್ಕಾರದ ಹಿಂದೆ 60 ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರ ನಡೆಸಿತ್ತು. ಇಂದಿರಾಗಾಂಧಿ 20 ಅಂಶಗಳ ಕಾರ್ಯಕ್ರಮ, ಗರೀಬಿ ಹಠಾವೋ ಕಾರ್ಯ ಕ್ರಮ ಜಾರಿಗೆ ತಂದರು. ರಾಜೀವ್ ಗಾಂಧಿಯವರು ಐಟಿಬಿಟಿಯಿಂದ ಉದ್ಯೋಗ ತಂದುಕೊಟ್ಟರು. ದೇಶ ಕ್ಕಾಗಿ ತಮ್ಮ ಜೀವನವನ್ನು ಇಂದಿರಾಗಾಂಧಿ, ರಾಜೀವ್ ಗಾಂಧಿ ಮುಡಿಪಾಗಿಟ್ಟವರು ಎಂದು ಹೇಳಿದರು. ಹಿಂದೆ ಸರಿಯಬೇಡಿ: ಬೆಮಲ್ ಕಾರ್ಮಿಕರ ಸಂಘದ ಹೋರಾಟ ಯಾವುದೇ ಕಾರಣದಿಂದಲೂ ಹಿಂದೆ ಸರಿಯಬಾರದು. ಹಂತ ಹಂತವಾಗಿ ಚಳವಳಿಯನ್ನು ಹೆಚ್ಚು ಮಾಡಬೇಕು. ಬೆಮಲ್ ಕಾರ್ಖಾನೆಯನ್ನು ಉಳಿಸೋಣ. ಮೋದಿಯನ್ನು ಮನೆಗೆ ಕಳಿಸೋಣ ಎಂದು ಹೇಳಿದರು.
ಬಿಜಿಎಂಎಲ್‌ನಲ್ಲಿ ಚಿನ್ನ ಕಡಿಮೆ ಆಗುತ್ತಿದ್ದನ್ನು ಗಮನಿಸಿ, ಆಗಿನ ಕಾಂಗ್ರೆಸ್ ಸರ್ಕಾರ ಬೆಮಲ್ ಕಾರ್ಖಾನೆ ತೆರೆಯಿತು. ಆಗಿನ ಸಚಿವ ಎಂ.ವಿ.ಕೃಷ್ಣಪ್ಪ ಇದಕ್ಕಾಗಿ ಪ್ರಯತ್ನ ಮಾಡಿದರು. ಎಲ್ಲಾ ಬಡವರು ಸ್ವಾವ ಲಂಬಿಗಳಾಗಿ ಕೆಲಸ ಮಾಡಬೇಕೆಂಬುದು ಕಾಂಗ್ರೆಸ್ ಚಿಂತನೆಯಾಗಿತ್ತು. ಹಲವಾರು ಕೇಂದ್ರ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳನ್ನು ತೆರೆಯಿತು. ಬೆಮಲ್, ಬಿಎಸ್‌ಎನ್‌ಎಲ್, ಐಟಿಐ, ಎಚ್‌ಎಎಲ್ ಮೊದಲಾದ ಸಂಸ್ಥೆಗಳನ್ನು ಹುಟ್ಟು ಹಾಕಲಾಯಿತು. ಇಂದು ಬೆಮಲ್ ಕಾರ್ಖಾನೆ 53 ವರ್ಷದಲ್ಲಿ ಕೆಲಸ ಮಾಡಿ ಸಾವಿರಾರು ಕೋಟಿ ತೆರಿಗೆಯನ್ನು ಕೇಂದ್ರ ಸರ್ಕಾರಕ್ಕೆ ಕಟ್ಟಿದ್ದೇವೆ. 3 ಪಾಳಿಯದಲ್ಲಿ ಕೆಲಸ ಮಾಡಿದ ಕಾರ್ಮಿ ಕರು, ಕಾರ್ಖಾನೆ ಅಭ್ಯುದಯಕ್ಕೆ ತಮ್ಮ ಬೆವರು ಹರಿಸಿ ದ್ದಾರೆ. ಅತ್ಯಲ್ಪ ಕಡಿಮೆ ಸಂಬಳ ಪಡೆದು, ಕಾರ್ಖಾ ನೆಯನ್ನು ಈ ಹಂತಕ್ಕೆ ಬೆಳೆಯಲು ಕಾರ್ಮಿಕರು ಕಾರಣರಾಗಿದ್ದಾರೆಂದರು.
ಜನಸಾಮಾನ್ಯರಿಗೆ ಹೊರೆ: ಟಿವಿಗಳು ವ್ಯಾಪಾರ ಕೇಂದ್ರ ಗಳಾಗಿವೆ. ಮೋದಿಯನ್ನು ಹೊಗಳುವುದೇ ಕೆಲಸವಾಗಿದೆ. ಪುಲ್ವಾಮಾ ದಾಳಿಯನ್ನು ಚುನಾವಣೆ ಸಮಯಕ್ಕೆ ಗಿಮಿಕ್ ಮಾಡಿ ಚುನಾವಣೆಯಲ್ಲಿ ಗೆದ್ದು ಇಡೀ ದೇಶವನ್ನು ಹಾಳುಕೊಂಪೆ ಮಾಡುತ್ತಿದ್ದಾರೆ.ಗ್ಯಾಸ್, ಪೆಟ್ರೋಲ್, ಡೀಸಲ್, ದಿನನಿತ್ಯ ವಸ್ತುಗಳ ಬೆಲೆ ಯನ್ನು ಏರಿಸುತ್ತಲೇ ಇದ್ದಾರೆ. ಶೇ.260 ತೆರಿಗೆ ಯನ್ನು ಪೆಟ್ರೋಲ್ ಮೇಲೆ ಹಾಕಿ ಜನ ಸಾಮಾನ್ಯರ ಹೊಟ್ಟೆ ಮೇಲೆ ಹೊಡೆಯುತ್ತಿದೆ ಎಂದು ಆರೋಪಿಸಿದರು.
ಸ್ವಾತಂತ್ರ್ಯ ಹಾಳಾಗಿದೆ: ವಿಧಾನಸಭೆ ಅಧಿವೇಶನದಲ್ಲಿ ಬೆಮಲ್ ಖಾಸಗೀಕರಣದ ವಿರುದ್ಧ ಧ್ವನಿ ಎತ್ತಲಾಗು ವುದು. ಕಾಂಗ್ರೆಸ್ ಶಾಸಕರ ಸಭೆಯಲ್ಲಿ ಹಿರಿಯ ನಾಯ ಕರಿಗೆ ಮನವಿ ಮಾಡಲಾಗುವುದು. ಐಟಿ ರೈಡ್‌ಗೆ ಜಗ್ಗು ವುದಿಲ್ಲ. ಮೋದಿ ಬಂದ ಮೇಲೆ ಎಲ್ಲರ ಸ್ವಾತಂತ್ರ್ಯ ಹಾಳಾಗಿದೆ ಎಂದು ಹೇಳಿದರು.
ಖಾಸಗೀಕರಣಗೊಂಡರೆ ಯಾವುದೋ ನೆಪ ಹೇಳಿಕೊಂಡು ಖಾಸಗಿಯವರು ಕೆಲಸದಿಂದ ತೆಗೆಯುತ್ತಾರೆ. ಕಡಿಮೆ ಕೆಲಸಕ್ಕೆ ಹೆಚ್ಚು ದುಡಿಸಿಕೊಳ್ಳುತ್ತಾರೆ. ಬಿಜೆಪಿ ಸರ್ಕಾರಕ್ಕೆ ಬಡವರ ಮೇಲೆ ವಿಶ್ವಾಸವಿಲ್ಲ ಎಂದು ಆರೋಪಿಸಿದರು. ಕಾರ್ಮಿಕ ಸಂಘದ ಮುಖಂಡ ರಾದ ಆಂಜ ನೇಯರೆಡ್ಡಿ, ಗಣೇಶ್ ಕುಮಾರ್, ಲಕ್ಷ ¾ಣ ಕುಮಾರ್, ರಾಧಮ್ಮ, ಸುರೇಶ್, ವಿಜಯಕೃಷ್ಣನ್ ಮತ್ತಿತರರು ಉಪಸ್ಥಿತರಿದ್ದರು.