Advertisement
ಇದು ಸೇಡಂ ತಾಲೂಕಿನ ಮುಧೋಳದಲ್ಲಿ ಕ್ಷೇತ್ರದ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಅವರು ನಡೆಸಿದ ಜನಸ್ಪಂದನದಲ್ಲಿ ಎರಡ್ಮೂರು ದಶಕಗಳಿಂದ ತಮ್ಮ ಹೆಸರಿಗೆ ಆಗದಿರುವ ಜಮೀನು ತಮ್ಮ ಹೆಸರಿಗಾಗುತ್ತಿರುವುದಕ್ಕೆ 44 ಕುಟುಂಬಗಳು ವ್ಯಕ್ತಪಡಿಸಿದ ಸಂತಸ.
Related Articles
Advertisement
ಸೇಡಂ ತಾಲೂಕಿನಲ್ಲಿ 43 ಸಾವಿರ ರೈತ ಕುಟುಂಬಗಳಿಗೆ ಪ್ರಧಾನಮಂತ್ರಿ ಕಿಸಾನ ಸಮ್ಮಾನನಿಧಿ ಅಡಿ ವರ್ಷಕ್ಕೆ 10 ಸಾವಿರ ಧನ ಸಹಾಯ ಪಡುತ್ತಿದ್ದಾರೆ. ಡಿಸಿಸಿ ಬ್ಯಾಂಕ್ ನಿಂದ ರೈತರಿಗೆ ಬಡ್ಡಿ ರಹಿತ ಸಾಲ ನೀಡಲು ಮುಂದಾಗಲಾಗಿದೆ.ಮುಧೋಳಕ್ಕೆ 2 ಕೋಟಿ ರೂ ಸಾಲ ನೀಡಲಾಗುವುದು. ಅದೇ ರೀತಿ ಹೊಲದಲ್ಲಿ ಬೊರ್ ವೆಲ್ ಕೊರೆಸಲು, ಹಣ್ಣು, ಹೂವು, ತರಕಾರಿ ಬೆಳೆಯಲು ಸಹ ಬಡ್ಡಿ ರಹಿತ ಸಾಲ ನೀಡಲಾಗುವುದು. ಬಹು ಮುಖ್ಯವಾಗಿ ಹೈನುಗಾರಿಕೆಗಾಗಿ ಸಹ ಸಾಲ ಕೊಡಲಾಗುವುದು ಎಂದು ಇದೇ ಸಂದರ್ಭದಲ್ಲಿ ತೇಲ್ಕೂರ ಹೇಳಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ಎಲ್ಲರೂ ಕೆಲಸ ಮಾಡಿ. ಮಹಿಳೆಯರ ಕೂಲಿ ಹಣವನ್ನು ಗಂಡ ಇಲ್ಲವೇ ಮನೆಯ ಇತರರು ಒತ್ತಾಯದಿಂದ ಹಣ ಪಡೆದಲ್ಲಿ ಪೊಲೀಸ್ ಗೆ ದೂರು ಕೊಡಿ. ದೂರಿಗೆ ತಕ್ಷಣವೇ ಸ್ಪಂದಿಸಿ ಎಂದು ಪೊಲೀಸ್ ರಿಗೆ ಸೂಚಿಸಿದ ಶಾಸಕ ರಾಜಕುಮಾರ ತೇಲ್ಕೂರ, ಮುಧೋಳ ವಲಯದಲ್ಲಿ ರಾಜರೋಷವಾಗಿ ಕ್ಲಬ್ ನಡೆಯುತ್ತಿದೆ ಎಂಬ ದೂರುಗಳು ಬರುತ್ತಿವೆ. ಮೊದಲು ಅವುಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ನಿರ್ದೇಶಿಸಲಾಯಿತು.
ತಹಶಿಲ್ದಾರ ಬಸವರಾಜ ಬೆಣ್ಣೆಶಿರೂರ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ತಾಲೂಕು ಪಂಚಾಯಿತಿ ಇಓ ಗುರುನಾ ಶೆಟಕಾರ, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.