ಹನೂರು: ಸಿದ್ಧರಾಮಯ್ಯ ಕೊಡಗು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಲ್ಲಿ ಸರ್ಕಾರದ ವೈಫಲ್ಯಗಳೆಲ್ಲಾ ಬೆಳಕಿಗೆ ಬರುತ್ತದೆ ಎನ್ನುವ ಉದ್ದೇಶದಿಂದ ಈ ರೀತಿಯ ಘಟನೆಗಳಿಗೆ ಕುಮ್ಮಕ್ಕು ನೀಡುತ್ತಿದೆ ಎಂದು ಶಾಸಕ ಆರ್.ನರೇಂದ್ರ ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ರಾಜಕೀಯ ಕಾರ್ಯಕ್ರಮಕ್ಕಾಗಲಿ, ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಕ್ಕಾಗಲಿ ಕೊಡಗು ಜಿಲ್ಲಾ ಪ್ರವಾಸವನ್ನು ಕೈಗೊಂಡಿರಲಿಲ್ಲ. ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೀಡಾಗಿರುವ ಪ್ರದೇಶಗಳನ್ನು ಪರಿಶೀಲನೆ ನಡೆಸಿ ನೊಂದವರಿಗೆ ಸಾಂತ್ವನ ತಿಳಿಸಲು ಪ್ರವಾಸ ಹಮ್ಮಿಕೊಂಡಿದ್ದರು. ಆದರೆ ಇಂತಹ ವೇಳೆಯಲ್ಲಿ ಈ ರೀತಿಯ ಕೃತ್ಯ ಜರುಗಿರುವುದು ಖಂಡನೀಯ ಮತ್ತು ಸರ್ಕಾ ರದ ವೈಫಲ್ಯವಾಗಿದೆ ಎಂದು ಕಿಡಿಕಾರಿದರು.
ಹುಳುಕುಗಳನ್ನು ಮುಚ್ಚಿಕೊಳ್ಳುವ ಯತ್ನ: ಧಾರಾಕಾರ ಮಳೆಯಿಂದಾಗಿ ಹಾನಿಗೀಡಾಗಿದ್ದ ಕೊಡಗು ಜಿಲ್ಲೆಯಲ್ಲಿ ಸರ್ಕಾರ ಯಾವುದೇ ಪರಿಹಾರ ಕಾರ್ಯಗಳನ್ನು ಕೈಗೊಂಡಿಲ್ಲ. ಅನಾಹುತಗಳು ಸಂಭವಿಸಿದ ವೇಳೆ ನಿರಾಶ್ರಿತರನ್ನು ಗಂಜಿಕೇಂದ್ರಗಳಿಗೆ ಕರೆದೊಯ್ದು ಅವರಿಗೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸದೆ ಎರಡೇ ದಿನಕ್ಕೆ ಮನೆಗಳಿಗೆ ಕಳುಹಿಸಲಾಗಿದೆ. ಮನೆಹಾನಿ ಸಂಭವಿಸಿರುವವರಿಗೆ ಯಾವುದೇ ಪರಿಹಾರ ವನ್ನಾಲಿ, ಮನೆ ನಿರ್ಮಾಣಕ್ಕೆ ಸಹಾಯಧನ ವನ್ನಾಗಲಿ ನೀಡಿಲ್ಲ. ಇದೆಲ್ಲದಕ್ಕಿಂತ ಮಗಿಲಾಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕೋಟ್ಯಂತರ ರೂ. ಖರ್ಚು ಮಾಡಿ ನಿರ್ಮಿಸಿರುವ ತಡೆಗೋಡೆಯು ಸಮ ರ್ಪಕವಾಗಿಲ್ಲ, ಒಮ್ಮೆ ಕುಸಿದು ಬಳಿಕ ಲಕ್ಷಾಂತರ ರೂ. ಖರ್ಚು ಮಾಡಿ ತೇಪೆ ಹಾಕಿದರೂ ಪ್ರಯೋಜನವಾಗಿಲ್ಲ. ಸಿದ್ದರಾಮಯ್ಯ ಅವರು ಭೇಟಿ ಮಾಡಿದರೆ ಈ ವೈಫಲ್ಯಗಳೆಲ್ಲಾ ಬಟಾಬಯಲಾಗುತ್ತದೆ ಎನ್ನುವ ಉದ್ದೇಶದಿಂದ ಈ ರೀತಿಯ ಕೃತ್ಯಗಳನ್ನು ಎಸಗಿಸುವುದರ ಮೂಲಕ ವಿಕೃತಿ ಮೆರೆಯಲಾಗಿದೆ ಎಂದು ಕಿಡಿಕಾರಿದರು.
ಮಲತಾಯ ಧೋರಣೆ ಅನುಸರಿಸುತ್ತಿದ್ದಾರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಿಗೆ ಮಲತಾಯಿ ಧೋರಣೆ ಅನುಸರಿ ಸುತ್ತಿದೆ. ಬಿಜೆಪಿ ಶಾಸಕರಿರುವ ಕ್ಷೇತ್ರಗಳಿಗೆ 50 ಕೋಟಿ ವಿಶೇಷ ಅನುದಾನ ನೀಡಿ ನಮಹೆ 25 ಕೋಟಿ ಮಾತ್ರ ನೀಡಿದ್ದಾರೆ, ಆ ಅನುದಾನ ಕೂಡು ಬಿಡುಗಡೆಯಾಗಿಲ್ಲ. ಮುಜರಾಯಿ ಇಲಾಖೆಯಿಂದ ಕೆಲ ಕ್ಷೇತ್ರಗಳ ದೇವಾಲಯದ ಅಭಿವೃದ್ಧಿಗೆ 2 ಕೋಟಿ ಅನುದಾನ ನೀಡಲಾಗಿದೆ. ಆ ಅನುದಾನ ನಮ್ಮ ಕ್ಷೇತ್ರಕ್ಕೆ ನೀಡಿಲ್ಲ. ಕೆಲವು ಕ್ಷೇತ್ರಗಳ ಶಾಲೆಗಳಿಗೆ ನೂತನ ಕೊಠಡಿಗಳನ್ನು ಮಂಜೂರು ಮಾಡಲಾಗಿದೆ, ನಮ್ಮ ಕ್ಷೇತ್ರಕ್ಕೆ ಒಂದೂ ಕೊಠಡಿಯನ್ನು ಮಂಜೂರು ಮಾಡಿಲ್ಲ. ಹಾಗಾದರೆ ಬಿಜೆಪಿ ಶಾಸಕರು ಇರುವ ಕ್ಷೇತ್ರಗಳಲ್ಲಿ ಮಾತ್ರ ದೇವರು, ದೇವಾಲಯ, ಶಾಲೆಗಳಿವೆ. ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಲ್ಲಿ ಇಲ್ಲವೇ? ಎಂದು ವ್ಯಂಗ್ಯವಾಡಿದರು.
ಜಿ.ಪಂ ಮಾಜಿ ಉಪಾಧ್ಯಕ್ಷ ಬಸವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು, ಪ.ಪಂ ಉಪಾಧ್ಯಕ್ಷ ಗಿರೀಶ್, ಮುಕಂಡರಾದ ಜವಾದ್ ಅಹಮ್ಮದ್, ಮಧುವನಹಳ್ಳಿ ಶಿವಕುಮಾರ್, ಪಾಳ್ಯ ಕೃಷ್ಣ, ಅಜ್ಜೀಪುರ ನಾಗರಾಜು ಇದ್ದರು.