Advertisement

ಋತುಮತಿಯರ ಮನೆಗೆ ಸೇರಿಸಿದ ಶಾಸಕಿ ಪೂರ್ಣಿಮಾ

11:49 PM Jan 08, 2020 | Lakshmi GovindaRaj |

ಚನ್ನಗಿರಿ: ತಾಲೂಕಿನ ಚಿಕ್ಕಗಂಗೂರು ಸಮೀಪದ ಗೊಲ್ಲರಹಟ್ಟಿಯಲ್ಲಿ ಋತುಮತಿ ಆದವರನ್ನು ಹೊರಗಿಡುವ ಪದ್ಧತಿ ಬೆಳಕಿಗೆ ಬಂದಿದ್ದು, ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಗ್ರಾಮದ ಜನರ ಮನವೊಲಿಸಿ ಆ ಮಹಿಳೆಯರನ್ನು ಮನೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗೊಲ್ಲರಹಟ್ಟಿಯಲ್ಲಿನ ದೇವಾಲಯದ ಕಾರ್ಯಕ್ರವåಕ್ಕೆ ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ.

Advertisement

ಶಾಸಕಿ ಪೂರ್ಣಿಮಾ ದೇವಾಲಯದ ಕಾರ್ಯಕ್ರಮ ಮುಗಿಸಿ ಹೊರಡುವಾಗ ನಾಲ್ವರು ಮಹಿಳೆಯರು ಗ್ರಾಮದ ಹೊರಗಿನ ಒಂದು ಕಟ್ಟಡದಲ್ಲಿ ಇರುವುದನ್ನು ಗಮನಿಸಿದ್ದಾರೆ. ಅವರನ್ನು ಕರೆದು ಊರ ಹೊರಗಿರುವ ಬಗ್ಗೆ ವಿಚಾರಿಸಿದ್ದಾರೆ. ಆಗ ಮಹಿಳೆಯರು ಗ್ರಾಮದ ಸಂಪ್ರದಾಯದ ಬಗ್ಗೆ ಹೇಳಿದ್ದಾರೆ. ಋತುಮತಿಯರಾದ ತಾವೆಲ್ಲ ಮನೆಯಿಂದ ಹೊರಗುಳಿದು ಮೂರು ದಿನ ಊರ ಹೊರಗೇ ಇರುತ್ತೇವೆ ಎಂದಿದ್ದಾರೆ.

ತಕ್ಷಣ ಶಾಸಕಿ ಗ್ರಾಮದ ಹಿರಿಯರು ಹಾಗೂ ಜನರನ್ನು ಕರೆಸಿ ಇವೆಲ್ಲ ಮೌಢಾಚರಣೆಯಾಗಿದ್ದು, ಋತುಮತಿ ಆದವರನ್ನು ಊರ ಹೊರಗಡೆ ಕಳುಹಿಸುವುದು ತಪ್ಪು. ಮಹಿಳೆಯರಲ್ಲಿ ಇವೆಲ್ಲ ಸಹಜ ಎಂದು ತಿಳಿಹೇಳಿ ನಾಲ್ವರು ಮಹಿಳೆಯರನ್ನು ಅವರ ಮನೆಗೆ ಸೇರಿಸಿದ್ದಾರೆ. ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ, ಜಿಪಂ ಅಧ್ಯಕ್ಷೆ ಯಶೋಧಮ್ಮ, ಜಿಪಂ ಸದಸ್ಯೆ ಶಾಂತ ಕುಮಾರಿ ಶಶಿಧರ್‌, ಪಿ.ವಾಗೀಶ್‌, ತಾಪಂ ಅಧ್ಯಕ್ಷೆ ಉಷಾ ಹಾಗೂ ಗ್ರಾಮದ ಮಹಿಳೆಯರು ಮತ್ತು ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next