Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಪ್ರಜ್ವಲ್ ಅವರು ವಯಸ್ಸಿನಲ್ಲಿ ನನಗಿಂತ ಚಿಕ್ಕವರು. ಒಬ್ಬ ಶಾಸಕನ ಬಗ್ಗೆ ಅವರಾಡಿರುವ ಮಾತುಗಳು ಅವರ ಸಂಸ್ಕಾರಕ್ಕೆ ಸಾಕ್ಷಿಯಾಗಿವೆ. ಸಾರ್ವಜನಿಕವಾಗಿ ಹೇಗೆ ಮಾತನಾಡಬೇಕು ಎಂಬ ಬಗ್ಗೆ ಅವರಿಗೆ ಒಂದು ಕ್ಲಾಸ್ ತೆಗೆದುಕೊಂಡರೆ ಒಳ್ಳೆಯದು. ಬಹುಶಃ ಮುಂದಿನ ದಿನಗಳಲ್ಲಿ ಸಾರ್ವಜನಿಕರು ಅವರಿಗೆ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.
Related Articles
Advertisement
ಕ್ಷೇತ್ರ ಸುತ್ತಾಡಿದರೆ ಭವಾನಿ ಸ್ಪರ್ಧಿಸಲ್ಲ: ಹಾಸನ ವಿಧಾನಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿಯಾಗಿರುವ ಭವಾನಿ ರೇವಣ್ಣ ಅವರು ಕ್ಷೇತ್ರದ ಎಲ್ಲ ಹಳ್ಳಿಗಳನ್ನೂ ಸುತ್ತಾಡಿ ಬಂದರೆ, ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಆಗಿರುವ ಅಭಿವೃದ್ಧಿ, ಕ್ಷೇತ್ರದ ಜನರ ಸ್ಪಂದನೆ ಗೊತ್ತಾಗುತ್ತದೆ. ಆ ಮೇಲೆ ಭವಾನಿ ರೇವಣ್ಣ ಅವರು ಚುನಾವಣೆಗೆ ನಿಲ್ಲೋದಿಲ್ಲ ಎಂದು ಶಾಸಕ ಪ್ರೀತಂ ಜೆ.ಗೌಡ ಅವರು ಟಾಂಗ್ ಕೊಟ್ಟರು.
ಹಾಸನ ಕ್ಷೇತ್ರದಲ್ಲಿ ಈಗ ಸಕ್ರಿಯರಾಗಿರುವ ಭವಾನಿ ರೇವಣ್ಣ ಅವರು ಅಭ್ಯರ್ಥಿ ಆದರೆ ನನಗೆ ಸಂತೋಷ. ಅವರು ಸ್ಪರ್ಧೆಗಿಳಿಯುವ ಧೈರ್ಯವನ್ನು ಗಣಪತಿ ಕೊಡಲಿ ಎಂದು ಪ್ರಾರ್ಥನೆ ಮಾಡುವೆ ಎಂದು ವ್ಯಂಗ್ಯವಾಡಿದರು.
ಭವಾನಿ ಅವರಿಗೆ 3 ಸ್ಥಾನ: ವೈಟ್ ಪ್ಯಾಂಟ್, ವೈಟ್ ಶರ್ಟ್ ಹಾಕಿಕೊಂಡ ಐದಾರು ಜನರನ್ನು ಜೊತೆಯಲ್ಲಿ ಇಟ್ಟುಕೊಂಡಿರು ವ ಸಂಸದರು ಚುನಾವಣೆ ಗೆಲ್ತಿàನಿ ಎಂಬ ಭ್ರಮೆಯಲ್ಲಿದ್ದಾರೆ. ನನ್ನ ಸವಾಲು ಸ್ವೀಕರಿಸಿ ಹಾಸನ ವಿಧಾನ ಸಭಾ ಕ್ಷೇತ್ರದ ಚುನಾವಣೆಗೆ ಬರಲಿ, ನೋಡೋಣ.ಅವರ ತಾಯಿ ಭವಾನಿ ರೇವಣ್ಣ ಅವರನ್ನು ಕರೆ ತಂದು ನಿಲ್ಲಿಸಿದರೂ ಅವರಿಗೆ ಮೂರನೇ ಸ್ಥಾನವೇ ಗತಿ ಎಂದು ಶಾಸಕ ಪ್ರೀತಂ ಜೆ ಗೌಡ ಹರಿಹಾಯ್ದರು.