Advertisement
ಅಲ್ಲದೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಪ್ರತಿಯೊಂದು ಕರೆಗೂ ಸ್ಪಂದಿಸುವ ಮೂಲಕ ಬಡ ಕುಟುಂಬಗಳ ಹಸಿವನ್ನು ನೀಗಿಸಿದ್ದಾರೆ.
ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಿಗೆ ತೆರಳಿ ಅಲ್ಲಿನ ಜನರಿಗೆ ನೆರವು ನೀಡಿದ್ದಾರೆ. ಮೂರು ಜಿಲ್ಲೆಗಳು ಸೇರಿ ಸುಮಾರು 6,000 ಸಾವಿರಕ್ಕೂ ಅಧಿಕ ದಿನಸಿ ಕಿಟ್‌ಗಳನ್ನು ನೀಡಿ ಸಂಕಷ್ಟದಲ್ಲಿದ್ದ ಕುಟುಂಬಗಳಿಗೆ ನೆರವಾಗಿದ್ದಾರೆ. ಕೋವಿಡ್ ವಿರುದ್ಧ ಹೋರಾಟ ಮಾಡುತ್ತಿರುವ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಪೌರ ಕಾರ್ಮಿಕರಿಗೂ ದಿನಸಿ ಕಿಟ್‌ಗಳನ್ನು ತಲುಪಿಸಲಾಗಿದೆ. ದಿನಸಿ ಕಿಟ್‌ನಲ್ಲಿ 5 ಕೆಜಿ ಅಕ್ಕಿ, ಗೋಧಿ, ಬೇಳೆ, ಖಾರ, ಉಪ್ಪು, ಮಸಾಲೆ ಸಾಮಗ್ರಿ, ಅಡುಗೆ ಎಣ್ಣೆ, ಸಕ್ಕರೆ, ರವಾ, ಅವಲಕ್ಕಿ ಸೇರಿದಂತೆ ಇನ್ನಿತರೆ ವಸ್ತುಗಳಿದ್ದು, ತೊಂದರೆಗೀಡಾದ ಕುಟುಂಬಗಳನ್ನು ಗುರುತಿಸಿ ಅವರಿಗೆ ತಲುಪಿಸುವ ಕೆಲಸ ಮಾಡಿದ್ದಾರೆ. ಇನ್ನು ಇವರ ನಿವಾಸಕ್ಕೆ ಆಗಮಿಸಿದ ಬಡ ಕುಟುಂಬಗಳಿಗೆ ಕಿಟ್ ನೀಡುವ ಮೂಲಕ ಅವರ ಹಸಿವು ನೀಗಿಸುವ ಕೆಲಸ ಮಾಡಿದ್ದಾರೆ.
ಆಹಾರ ಸಾಮಗ್ರಿಗಳ ವಿತರಣೆ ಒಂದಡೆಯಾದರೆ ಅಗತ್ಯವಿರುವ ಗ್ರಾಪಂಗಳಿಗೆ ಔಷಧಿ ಸಿಂಪರಣೆ ಸ್ಪ್ರೇಯರ್‌ಗಳನ್ನು ನೀಡಿದ್ದು, ವಿವಿಧ ಕಡೆಗೆ ಸ್ಯಾನಿಟೈಸರ್‌ಗಳನ್ನು ನೀಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಸ್ವಚ್ಛತೆ ಹಾಗೂ ಕೋವಿಡ್ ಹರಡದಂತೆ ನಿರ್ವಹಿಸುವ ಕಾರ್ಯಗಳಿಗೆ ಪ್ರದೀಪ ಶೆಟ್ಟರ ಬೆಂಬಲವಾಗಿ ನಿಂತಿದ್ದಾರೆ. ಇನ್ನುಹೋದ ಕಡೆಯಲ್ಲೆಲ್ಲಾ ಕೋವಿಡ್ ಸೋಂಕಿನಿಂದ ದೂರವಿರುವ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ.
Related Articles
ಎಸ್.ಎಸ್.ಶೆಟ್ಟರ್ ಫೌಂಡೇಶನ್‌ನಿಂದ ದೊಡ್ಡ ನೆರವು
ವಿಧಾನಪರಿಷತ್ ಸದಸ್ಯರಾಗಿ ಮೂರು ಜಿಲ್ಲೆಯ ಕೆಲ ಗ್ರಾ.ಪಂ. ಹಾಗೂ ಮಹಾನಗರದಲ್ಲಿ ಸಂಕಷ್ಟದಲ್ಲಿದ್ದ ಜನರಿಗೆ ನೆರವು ನೀಡಿರುವುದು ಒಂದಡೆಯಾದರೆ, ಎಸ್.ಎಸ್. ಶೆಟ್ಟರ ಫೌಂಡೇಶನ್ ಮೂಲಕ ಕೈಗೊಂಡ ಕಾರ್ಯ ಬಹು ದೊಡ್ಡದು. ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯೊಂದರಲ್ಲೇ ಬರೋಬ್ಬರಿ 30 ಸಾವಿರ ದಿನಸಿ ಕಿಟ್‌ಗಳನ್ನು ಬಡ ಕುಟುಂಬಗಳಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರದೀಪ ಶೆಟ್ಟರ ಕಾರ್ಯ ಅನನ್ಯ.
Advertisement
ಲಾಕ್‌ಡೌನ್ ಹಿನ್ನೆಲೆಯಲ್ಲಿ ಯಾರೂ ಹಸಿವಿನಿಂದ ಬಳಲಬಾರದು ಎಂದು ದಿನಸಿ ಖರೀದಿ, ಪ್ಯಾಕಿಂಗ್ ಹಾಗೂ ವಿತರಣೆ ಮಾಡುವ ಎಲ್ಲಾ ಕಾರ್ಯಗಳಲ್ಲಿ ಖುದ್ದಾಗಿ ನಿಂತು ಹಗಲಿರುಳು ಶ್ರಮಿಸಿದ್ದಾರೆ. ಪಕ್ಷದ ಕಾರ್ಯಕರ್ತರು, ಮುಖಂಡರು, ಜನರಿಂದ ಬಂದ ಕರೆ ಆಧರಿಸಿ ಕಷ್ಟದಲ್ಲಿದ್ದ ಕುಟುಂಬಗಳಿಗೆ ನೆರವಾಗಿದ್ದಾರೆ.
ಶಾಸಕರ ನಿಧಿಯಿಂದ 50 ಲಕ್ಷ ರೂ.
ಕೋವಿಡ್ ವಿರುದ್ಧದ ಹೋರಾಟಕ್ಕೆ ಸರಕಾರ ಮತ್ತಷ್ಟು ಸದೃಢಗೊಳ್ಳಲಿ ಎನ್ನುವ ಕಾರಣಕ್ಕೆ ತಮ್ಮ ಶಾಸಕರ ನಿಧಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 50 ಲಕ್ಷ ರೂ. ನೀಡಿದ್ದಾರೆ. ಅಲ್ಲದೆ ವೈಯಕ್ತಿಕವಾಗಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಲಕ್ಷ ರೂ. ನೀಡಿ ರಾಜ್ಯದ ಜನರ ಕಲ್ಯಾಣಕ್ಕೆ ಕೈ ಜೋಡಿಸಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಯಾರೂ ಹಸಿವಿನಿಂದ ತೊಂದರೆ ಅನುಭವಿಸಬಾರದು. ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆಸರೆಯಾಗಬೇಕು ಎಂದು ಈ ಸೇವೆ ಮಾಡುತ್ತಿದ್ದೇವೆ. ಕಷ್ಟದಲ್ಲಿರುವ ಜನರೊಂದಿಗಿದ್ದು ನೆರವಿನ ಸೇವೆಯ ಜೊತೆಗೆ ಅವರ ನೋವಿನಲ್ಲಿ ಭಾಗಿಯಾಗಿರುವುದು ತೃಪ್ತಿ ತಂದಿದೆ.
– ಪ್ರದೀಪ ಶೆಟ್ಟರ, ವಿಧಾನಪರಿಷತ್ ಸದಸ್ಯರು