Advertisement

ಶಾಸಕರ ಖರೀದಿ ಪ್ರಕರಣ ಶರಣಾಗುವಂತೆ ಹೈಕೋರ್ಟ್‌ ಆದೇಶ

12:00 AM Oct 30, 2022 | Team Udayavani |

ಹೈದರಾಬಾದ್‌: “ಆಪರೇಷನ್‌ ಕಮಲ’ದ ಮೂಲಕ ತೆಲಂಗಾಣದ ಆಡಳಿತಾರೂಢ ಟಿಆರ್‌ಎಸ್‌ ಪಕ್ಷದ ಶಾಸಕರ ಖರೀದಿ ಯತ್ನ ಪ್ರಕರಣದ ಮೂವರು ಆರೋಪಿಗಳಿಗೆ ಸೈಬರಾ ಬಾದ್‌ ಪೊಲೀಸ್‌ ಆಯುಕ್ತರ ಮುಂದೆ ಶರಣಾಗುವಂತೆ ರಾಜ್ಯ ಹೈಕೋರ್ಟ್‌ ಶನಿವಾರ ಆದೇಶಿಸಿದೆ.

Advertisement

ಆರೋಪಿಗಳನ್ನು ಪೊಲೀಸ್‌ ವಶಕ್ಕೆ ಒಪ್ಪಿಸಲಾಗದು ಎಂಬ ಸ್ಥಳೀಯ ನ್ಯಾಯಾಲಯ ಆದೇಶವನ್ನು ವಜಾ ಮಾಡಿರುವ ಹೈಕೋರ್ಟ್‌, ಮೂವ ರನ್ನೂ ಪೊಲೀಸರು ವಶಕ್ಕೆ ಪಡೆಯ ಬಹುದು ಎಂದಿದೆ. ಕೆಳ ನ್ಯಾಯಾ ಲಯದ ಆದೇಶ ಪ್ರಶ್ನಿಸಿ ಸೈಬರಾಬಾದ್‌ ಪೊಲೀಸರು ಹೈಕೋರ್ಟ್‌ ಮೆಟ್ಟಿಲೇರಿ ದ್ದರು. ಇದೇ ವೇಳೆ, ಪ್ರಕರಣವನ್ನು ಸಿಬಿಐ ಅಥವಾ ಎಸ್‌ಐಟಿ ತನಿಖೆಗೆ ಒಪ್ಪಿ ಸಬೇಕು ಎಂದು ಕೋರಿ ಬಿಜೆಪಿ ಸಲ್ಲಿಸಿ ರುವ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌, ಈ ಕುರಿತು ನಿರ್ಧಾರವಾಗುವವರೆಗೆ ತನಿಖೆ ಮುಂದುವರಿಸದಂತೆ ಪೊಲೀಸರಿಗೆ ಸೂಚಿಸಿದೆ.

ಆಡಿಯೋ ಬಿಡುಗಡೆ: ಈ ಎಲ್ಲ ಬೆಳವಣಿಗೆಗಳ ನಡುವೆಯೇ, ದಿಲ್ಲಿ ಡಿಸಿಎಂ, ಆಪ್‌ ನಾಯಕ ಮನೀಷ್‌ ಸಿಸೋಡಿಯಾ ಅವರು ಶನಿವಾರ ಆಡಿಯೋವೊಂದನ್ನು ಸುದ್ದಿಗೋಷ್ಠಿ ಯಲ್ಲಿ ಬಹಿರಂಗಪಡಿಸಿದ್ದಾರೆ. ತೆಲಂ ಗಾಣದ ಟಿಆರ್‌ಎಸ್‌ ಶಾಸಕರ ಖರೀದಿ ಪ್ರಕರಣದ ಆರೋಪಿಯೊಬ್ಬ “ದಿಲ್ಲಿ ಯಲ್ಲಿ 43 ಆಪ್‌ ಶಾಸಕರನ್ನು ಖರೀದಿ ಸಲೆಂದು ಹಣವನ್ನು ತೆಗೆದಿರಿಸಿರುವ ಬಗ್ಗೆ ಮಾತನಾಡಿದ್ದಾರೆ’ ಎನ್ನುವ ಆಡಿಯೋ ಇದಾಗಿದೆ. ಈ ಆಡಿಯೋ ದಲ್ಲಿ ಆ ಮಧ್ಯವರ್ತಿಯು ಬಿಜೆಪಿಯ ಇಬ್ಬರು ಪ್ರಮುಖ ನಾಯಕರ ಹೆಸರನ್ನು ಪ್ರಸ್ತಾಪಿಸಿದ್ದು, ಕೂಡಲೇ ಅವರನ್ನು ಬಂಧಿಸಬೇಕು ಎಂದೂ ಸಿಸೋಡಿಯಾ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next