ಹಿರೇಕೆರೂರ: ದೂದೀಹಳ್ಳಿ ಗ್ರಾಮದ ಸಮೀಪ ಸಮಾಜ ಕಲ್ಯಾಣ ಇಲಾಖೆಯಿಂದ ಸುಮಾರು 36 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಮೊರಾರ್ಜಿ ವಸತಿ ಶಾಲೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ ನೂತನ ಕಟ್ಟಡಗಳ ಕಾಮಗಾರಿ ಹಂತಗಳನ್ನು ಶಾಸಕ ಬಿ.ಸಿ.ಪಾಟೀಲ ಪರಿಶೀಲನೆ ನಡೆಸಿದರು.
ಮುಖಂಡರಾದ ರವಿಶಂಕರ ಬಾಳಿಕಾಯಿ, ಸೃಷ್ಟಿ ಪಾಟೀಲ, ಜಯಣ್ಣ ಪೂಜಾರ, ಎಂ.ಡಿ.ನೆಶ್ವಿ, ಬಸನಗೌಡ, ತಿರಕಪ್ಪ ಬೋಗೇರ, ಅಣ್ಣಪ್ಪ ಶರಣಪ್ಪ ಸೂರಜ್ಜಿ, ಹಿರಿಯಪ್ಪ ಬೋಗೇರ, ರಾಘು ರಂಗಕ್ಕನವರ, ಮನೋಜ ಹಾರ್ನಳ್ಳಿ, ಮನೋಜ ಕೋರಿಶೆಟ್ಟರ್ ಹಾಜರಿದ್ದರು.
Advertisement
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಿ.ಸಿ.ಪಾಟೀಲ, ತಾಲೂಕಿನ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ದೂದೀಹಳ್ಳಿ ಗ್ರಾಮದ ಸಮೀಪ ಮೊರಾರ್ಜಿ ವಸತಿ ಶಾಲೆ ಹಾಗೂ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಗಳನ್ನು ಮಂಜೂರು ಮಾಡಿಸಿದ್ದು, ಎಲ್ಲ ಅಗತ್ಯ ಮೂಲಭೂತ ಸೌಲಭ್ಯಗಳೊಂದಿಗೆ ವಸತಿ ಶಾಲೆಗಳ ಭವ್ಯ ಕಟ್ಟಡ ತಲೆಎತ್ತಿ ನಿಲ್ಲುತ್ತಿವೆ. ಇದರಿಂದ ತಾಲೂಕಿನ ಪ್ರತಿಭಾವಂತ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವ ಜೊತೆಗೆ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.