ಗಂಗಾವತಿ: ಕಾಂಗ್ರೆಸ್ ನಗರಸಭೆ ಸದಸ್ಯನ ಅಪಹರಣದ ಪ್ರಕರಣಕ್ಕೂ ಬಿಜೆಪಿಗೂ ಸಂಬಂಧವಿಲ್ಲ. ಮನೋಹರಸ್ವಾಮಿ ಹಿರೇಮಠ ಅಪಹರಣಕ್ಕೆ ಬಿಜೆಪಿಯವರು ಬಾಂಬೆಯಿಂದ ಗುಂಡಾಗಳನ್ನು ಕರೆಸಿದ್ದಾರೆ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಶಿವರಾಜ್ ಎಸ್ ತಂಗಡಗಿ ಹೇಳಿರುವುದು ಬಾಲಿಶತನವಾಗಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ಸಾರಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಸೋತ ನಂತರ ಅನ್ಸಾರಿ ಗೆ ಈಗ ಎಚ್ಚರವಾಗಿದೆ. ನಗರಸಭೆಯಲ್ಲಿ ಪಕ್ಷೇತರ ಮತ್ತು ಜೆಡಿಎಸ್ ಸದಸ್ಯರ ಸಹಕಾರದಲ್ಲಿ ಆಡಳಿತ ಬಿಜೆಪಿಗೆ ದೊರಕಲಿದೆ. ಮಾಜಿ ಸಚಿವರು ಮಾಡಿರುವ ಎಲ್ಲಾ ಆರೋಪಗಳು ಸುಳ್ಳು. ಇಕ್ಬಾಲ್ ಅನ್ಸಾರಿ ಶಾಸಕರಾಗಿದ್ದ ಅವಧಿಯಲ್ಲಿ ವ್ಯಾಪಕ ಭ್ರಷ್ಠಾಚಾರ ನಡೆದಿದೆ. ಸ್ವಾರ್ಥ ಜಾತಿ ರಾಜಕೀಯ ಹೆಚ್ಚಾಗಿತ್ತು ಇದಕ್ಕೆ ಕ್ಷೇತ್ರದ ಜನರು ಅನ್ಸಾರಿ ಗೆ ಬುದ್ದಿ ಕಲಿಸಿದರೂ ಬುದ್ದಿ ಬಂದಿಲ್ಲ ಎಂದರು.
ಯಾರೇ ತಪ್ಪು ಮಾಡಿದರೂ ಪೊಲೀಸ್ ಇಲಾಖೆ ಸೂಕ್ತ ಶಿಕ್ಷೆ ನೀಡಲಿದೆ. ಸಿಎಂ ಹಾಗೂ ಗೃಹ ಸಚಿವರ ಮೇಲೆ ಒತ್ತಡ ಹೇರಿ ಅಪಹರಣ ಪ್ರಕರಣವನ್ನು ಮುಚ್ಚಿಹಾಕುವ ಹುನ್ನಾರ ನಡೆದಿದೆ ಎಂದು ಅನ್ಸಾರಿ ಹೇಳಿಕೆ ನೀಡಿದ್ದು ಸರಿಯಲ್ಲ ಕಾನೂನು ಎಲ್ಲರಿಗೂ ಒಂದೇ ಯಾರೇ ತಪ್ಪು ಮಾಡಿದರೂ ಶಿಕ್ಷೆಯಾಗಲಿದೆ ಎಂದರು.
ಇದನ್ನೂ ಓದಿ:ನೀವು ಸರಿಯಿದ್ದರೆ ಈ ಪರಿಸ್ಥಿತಿ ಯಾಕೆ ಬರುತ್ತಿತ್ತು? ಕಾಂಗ್ರೆಸ್ ವಿರುದ್ಧ ಮುನಿರತ್ನ ಕಿಡಿ
ಇನ್ನೂ ಕಾಂಗ್ರೆಸ್ ಕಡೆ ಹೋಗಿರುವ ಬಿಜೆಪಿಯ ಸುಧಾ ಸೋಮನಾಥ ಕಾಂಗ್ರೆಸ್ ನಿಂದ ಹೊರಬರಬೇಕು. ಸೂಕ್ತ ಸ್ಥಾನಮಾನ ಕೊಡಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಜಿ.ವೀರಪ್ಪ ಯಮನೂರ ಚೌಡ್ಕಿ, ಎ.ವೆಂಕಟೇಶ್, ಉಮೇಶ ಸಿಂಗನಾಳ,ಪುಷ್ಪಾಂಜಲಿ ಗುನ್ನಾಳ ಸೇರಿ ಅನೇಕರಿದ್ದರು.