Advertisement

ಮುಂಗಾರು ಬಿತ್ತನೆ ಕೃಷಿಕರ ಜತೆ ಕೃಷಿಕರಾದ ಶಾಸಕ ಪರಣ್ಣ ಮುನವಳ್ಳಿ

04:37 PM Jun 09, 2021 | Team Udayavani |

ಗಂಗಾವತಿ: ಮುಂಗಾರು ಬಿತ್ತನೆ ಕಾರ್ಯವು ಭರದಿಂದ ಕೊಪ್ಪಳ  ಜಿಲ್ಲೆಯಾದ್ಯಂತ ನಡೆಯುತ್ತಿದ್ದು   ಗಂಗಾವತಿ ವಿಧಾನ ಸಭಾ ಕ್ಷೇತ್ರ ಕೂಕನಪಳ್ಳಿ ಗ್ರಾಮದ ಸುತ್ತಲಿನ ಗ್ರಾಮಗಳ ಬಳಿ ಪ್ರವಾಸದಲ್ಲಿದ್ದ ಶಾಸಕ ಪರಣ್ಣ ಮುನವಳ್ಳಿ ಕೃಷಿಕರನ್ನು ಭೇಟಿಯಾದರು.

Advertisement

ಕೃಷಿಕ ನಿಂಗಪ್ಪ ಅವರ ಹೊಲದಲ್ಲಿ ಬಿತ್ತನೆ ಕಾರ್ಯ ನಡೆಯುತ್ತಿರುವುದನ್ನು ಕಂಡು ತಮ್ಮ ಕಾರು ನಿಲ್ಲಿಸಿ ಬಿತ್ತನೆ ಕಾರ್ಯ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿ ಕೃಷಿಕರ ಕ್ಷೇಮ ವಿಚಾರ ಮಾಡಿ ಬಿತ್ತನೆ ಬೀಜ ಗೊಬ್ಬರ ಪೂರೈಕೆ ಮತ್ತು‌ ಮಳೆ ಬಗ್ಗೆ ವಿಚಾರಿಸಿದರು.

ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಮುಖ್ಯಮಂತ್ರಿ ಸಂವಾದ; ಮೂರನೇ ಅಲೆಗೆ ಸಿದ್ಧತೆಗೆ ಸಲಹೆ

ನಂತರ ಕೂರಿಗೆ ಹಿಡಿದು ಬಿತ್ತನೆ ಕಾರ್ಯ ಮಾಡಿದರು.ಈ ಭಾರಿ ಹವಾಮಾನ ಇಲಾಖೆ ತಜ್ಞರ ಪ್ರಕಾರ ಉತ್ತಮ ಮಳೆ ಇದ್ದು ರೈತರಿಗೆ ಸಕಾಲದಲ್ಲಿ ಬೀಜ ಗೊಬ್ಬರ ಪೂರೈಕೆ ಮಾಡಲಾಗಿದೆ. ರೈತರು ಗುಣಮಟ್ಟದ ಬೀಜ ಗೊಬ್ಬರ ಖರೀದಿಸಿ ರಸೀದಿ ಪಡೆಯಬೇಕು. ಕಳೆದ ಎರಡು‌ ವರ್ಷಗಳಿಂದ ಕೊರೊನಾ ಕಾರಣಕ್ಕಾಗಿ ರೈತರ ಬೆಳೆಗೆ ಸೂಕ್ತ ಮಾರುಕಟ್ಟೆ ಬೆಲೆ ಸಿಕ್ಕಿಲ್ಲ ಈ ಭಾರಿಯಾದರೂ ಬೆಳೆ ಕೈಗೆ ಬಂದು ಉತ್ತಮ ಬೆಲೆ ಸಿಗುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.ಇದೇ ಸಂದರ್ಭದಲ್ಲಿ ರೈತರಿಗೆ ಕೋವಿಡ್ ಜಾಗೃತಿ ಮೂಡಿಸಿ ದಯವಿಟ್ಟು ಹೊರಗಡೆ ಹೋದಾಗ ಮಾಸ್ಕ್ ಮತ್ತು ಸ್ಯಾನಿಟೇಜರ್ ಬಳಸಬೇಕು ಎಂದು ರೈತರಿಗೆ ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next